ADVERTISEMENT

ಮೈಸೂರು | ಬದಲಿ ನಿವೇಶನ: ‘ಜಾಲ’ ಸಕ್ರಿಯ

ಬದಲಿ ನಿವೇಶನ ನೀಡಲು ಇರುವ ಅವಕಾಶ ಬಳಸಿಕೊಳ್ಳುವುದು ಅವ್ಯಾಹತ

ಎಂ.ಮಹೇಶ
Published 14 ಜುಲೈ 2024, 19:54 IST
Last Updated 14 ಜುಲೈ 2024, 19:54 IST
<div class="paragraphs"><p>ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ</p></div>

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

   

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಶೇ 50:50ರ ಅನುಪಾತದಲ್ಲಿ ಪರಿಹಾರವಾಗಿ ನಿವೇಶನ ನೀಡುವಲ್ಲಿ ಹಗರಣ ನಡೆದಿರುವುದು ಒಂದೆಡೆಯಾದರೆ, ನಿಯಮ ದುರ್ಬಳಕೆ ಮಾಡಿಕೊಂಡು ‘ಕಾನೂನಾತ್ಮಕವಾಗಿಯೇ ಭ್ರಷ್ಟಾಚಾರ’ ನಡೆಸಿ ದುಡ್ಡು ಮಾಡಿಕೊಳ್ಳುವ ಜಾಲ ಹಿಂದಿನಿಂದಲೂ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ.

ಅದುವೇ ‘ಬದಲಿ ನಿವೇಶನ’ ಕೊಡಿಸುವ ದಂಧೆ. ಇದರಿಂದ ಸಿಗುವ ‘ಲಾಭ’ದಲ್ಲಿ ಆ ಕಾಲದಲ್ಲಿನ ಅಧ್ಯಕ್ಷರು, ಆಯುಕ್ತರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ‘ಪಾಲು’ ಪಡೆಯುತ್ತಾರೆ. ಹಂಚಿಕೆಯಾದ ನಿವೇಶನಕ್ಕೆ ಬದಲಿಯಾಗಿ ‘ಅಭಿವೃದ್ಧಿ ಹೊಂದಿದ ಹಾಗೂ ಒಳ್ಳೆಯ ಮೌಲ್ಯವುಳ್ಳ ಸ್ಥಳದಲ್ಲಿ ನಿವೇಶನ ಸಿಕ್ಕ ಸಂತಸ’ ಹಾಗೂ ನಿವೇಶನದ ಮೌಲ್ಯವು ಹಲವು ಪಟ್ಟು ಹೆಚ್ಚಾದ ಲಾಭವು ಪಡೆದುಕೊಂಡವರಿಗೆ ಆಗುತ್ತದೆ. ಅದನ್ನು ಮಾಡಿಸಿಕೊಟ್ಟವರು ಭರಪೂರ ಕಮಿಷನ್‌ ಗಳಿಸಿ
ಸಂಭ್ರಮಿಸುತ್ತಾರೆ.

ADVERTISEMENT

ಆ ಥರದ್ದು ಇದ್ದರೆ ತನ್ನಿ!: ಇದಕ್ಕಾಗಿಯೇ, ‘ಬದಲಿ ನಿವೇಶನದ ಕೇಸ್ ಇದ್ದರೆ ತನ್ನಿ, ಮಾಡಿಸೋಣ’ ಎನ್ನುವುದು ಮಧ್ಯವರ್ತಿಗಳ ವಲಯದಲ್ಲಿ ಹೆಚ್ಚಾಗಿ ಕೇಳಿಬರುವ ಮಾತಾಗಿದೆ ಎನ್ನುವುದು ಪ್ರಾಧಿಕಾರದ ಒಳವ್ಯವಹಾರವನ್ನು ಬಲ್ಲವರ ಅನುಭವದ ಮಾತಾಗಿದೆ. ಇದರಿಂದ ಸರ್ಕಾರಕ್ಕೆ ನಷ್ಟವೇ ಹೊರತು ಪ್ರಯೋಜನವೇನಿಲ್ಲ. ಬದಲಿ ನಿವೇಶನ ಮಂಜೂರು ಮಾಡಿಕೊಡಲು ಇರುವ ನಿಯಮವನ್ನು ಹೇಗೆ ಬಳಸಿ ಕೊಳ್ಳಬೇಕು ಎನ್ನುವು
ದನ್ನು ಮಧ್ಯವರ್ತಿಗಳು, ಅಧಿಕಾರಿ
ಗಳ ಜಾಲ ‘ಕರಗತ’ ಮಾಡಿಕೊಂಡಿದೆ!

ಮಂಜೂರಾತಿಗೆ ಪ್ರಭಾವಿಗಳ ಬಳಕೆ:ಪ್ರಭಾವಿಗಳು ‘ಬೆಲೆ ಬಾಳುವ’ ನಿವೇಶನ ಪಡೆದುಕೊಳ್ಳುವಲ್ಲಿ ಇರುವ ಮತ್ತೊಂದು ಮಾರ್ಗ ಇದಾ
ಗಿದೆ. ಮಧ್ಯವರ್ತಿಗಳ ಜಾಲದೊಂದಿಗೆ ಅಧಿಕಾರಿಗಳು ಕೂಡ ಕೈಜೋಡಿಸುವುದರಿಂದ ಇಂತಹ ಪ್ರಕರಣಗಳು ನಡೆಯುತ್ತಿವೆ. ಪ್ರಭಾವಿಗ
ಳಾದ ಮಧ್ಯವರ್ತಿಗಳು ಮುಡಾ ಸದಸ್ಯರ ಮೂಲಕ ಸಭೆಗಳಲ್ಲಿ ಮಂಜೂರಾತಿ ಮಾಡಿಸಿಕೊಂಡು ಬಿಡುತ್ತಾರೆ ಎನ್ನು
ತ್ತಾರೆ ರಿಯಲ್ ಎಸ್ಟೇಟ್‌ ಉದ್ಯಮದ ‘ಒಳನೋಟ’ವನ್ನು ಬಲ್ಲವರು.

ದೇವನೂರು, ಕೆಸರೆ, ಈರನಗೆರೆ ಮೊದಲಾದ ಕಡೆಗಳಲ್ಲಿ ನಿವೇಶನ ಸಿಕ್ಕಿರುವವರಿಗೆ ಅಭಿವೃದ್ಧಿ ಹೊಂದಿರುವ ಕಡೆಗಳಲ್ಲಿ ಅಂದರೆ ವಿಜಯನಗರದ ವಿವಿಧ ಹಂತಗಳು, ಜೆ.ಪಿ. ನಗರ ಹೀಗೆ... ಬೇರೆ ಬಡಾವಣೆಗಳಲ್ಲಿ ಬದಲಿ ನಿವೇಶನ ಕೊಡಿಸುವ ಕೆಲಸವನ್ನು ಈ ಜಾಲ ಮಾಡುತ್ತಿದೆ ಎಂದು ತಿಳಿಸಿದರು.

‘ಸಮಾನಾಂತರ ಬಡಾವಣೆಯಲ್ಲಿ ಬದಲಿ ನಿವೇಶನ ಕೊಡಲು ಅವಕಾಶವಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡು ಇತರ ಬಡಾವಣೆಗಳಲ್ಲೂ ನೀಡಿರುವ ಉದಾಹರಣೆಗಳಿವೆ. ಸಮಗ್ರ ತನಿಖೆಯಿಂದ ಇದೆಲ್ಲವನ್ನೂ ಹೊರತರಬಹುದಾಗಿದೆ. ತನಿಖಾ ಸಮಿತಿಯು ಇತ್ತ ಗಮನಹರಿಸಿದರೆ, ಮತ್ತಷ್ಟು ಅಕ್ರಮಗಳು ಬಯಲಿಗೆ ಬರುತ್ತವೆ’ ಎನ್ನುತ್ತಾರೆ ಅವರು.

‘ಕೊರತೆಯೂ ಕಾರಣ’

‘ಮುಡಾ ಬಡಾವಣೆಗಳಲ್ಲಿ ಮೂಲಸೌಲಭ್ಯ ಕೊರತೆ ಇರುವುದು ಕೂಡ ಬದಲಿ ನಿವೇಶನ ದಂಧೆಗೆ ಸಹಕಾರಿಯಾಗಿದೆ ಎನ್ನುವುದು ಮುಡಾ ಕಾರ್ಯವೈಖರಿ ಬಲ್ಲವರ ಮಾತಾಗಿದೆ.

‘ನಮಗೆ ನಿವೇಶನ ಹಂಚಿಕೆಯಾದಲ್ಲಿ ಮೂಲಸೌಲಭ್ಯಗಳೇ ಇಲ್ಲ. ಹೀಗಾಗಿ ಬದಲಿ ನಿವೇಶನ ಮಂಜೂರು ಮಾಡಿಕೊಡಬೇಕು’ ಎಂದು ಅರ್ಜಿ ಹಾಕಿಸಿ, ಹೆಚ್ಚಿನ ಬೆಲೆ ಸಿಗುವ ನಿವೇಶನ ಕೊಡಿಸುವುದು ಪ್ರಕ್ರಿಯೆಯ ಸಾರ. ಇದರಿಂದ ಮಧ್ಯವರ್ತಿಗೆ, ಕೆಲಸ ಮಾಡಿಕೊಟ್ಟ ಎಲ್ಲರಿಗೂ ‘ಲಾಭ’ ಆಗುತ್ತದೆ!’ ಎಂದು ಆರ್‌ಟಿಐ ಕಾರ್ಯಕರ್ತರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.