ಮೈಸೂರು: ಸ್ವರಾಂಜಲಿ ಸಂಸ್ಥೆಯು ವೃದ್ಧರು ಹಾಗೂ ವೃದ್ಧಾಶ್ರಮದ ವಾಸಿಗಳಿಗೆ ಮಾನಸಿಕ ಸ್ಥೈರ್ಯ ನೀಡುವ 'ಅರಳು ಮರಳು- ಮರಳು ಅರಳಿ' ಕಾರ್ಯಕ್ರಮವನ್ನು ಡಿ.18ರಂದು ಮಧ್ಯಾಹ್ನ 3 ಗಂಟೆಗೆ ಇಲ್ಲಿನ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದೆ.
ಕಾರ್ಯಕ್ರಮದಲ್ಲಿ ಗ್ರೀನ್ ಡಾಟ್ ಟ್ರಸ್ಟ್, ವೃದ್ಧಾಶ್ರಮಕ್ಕೆ ಆರ್ಥಿಕ ನೆರವು ನೀಡಲಿದೆ. ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅವರು ಹಿರಿಯರಿಗೆ ಭರವಸೆ ತುಂಬುವ ಮಾತುಗಳನ್ನಾಡುವರು ಎಂದು ತಂಡದ ಸದಸ್ಯ ಡಾ.ಎಂ.ಎನ್.ರಘುವೀರ್ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆ.ಆರ್.ಆಸ್ಪತ್ರೆಯ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ರವೀಶ್ ಅವರು ಹಿರಿಯರ ಮನಸ್ಥಿತಿ, ಕಳವಳ, ಖಿನ್ನತೆ ಕುರಿತು ಆಪ್ತ ಸಮಾಲೋಚನೆ ನಡೆಸಿ, ಸಭಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ 20 ಮಂದಿ ಗಾಯಕ, ಗಾಯಕಿಯರಿಂದ ಸಿನಿಮಾ ಗೀತೆಗಳ ಸಂಗೀತ ರಸಸಂಜೆ ನಡೆಯಲಿದೆ ಎಂದರು.
200 ರಿಂದ 300 ಮಂದಿ ಹಿರಿಯ ನಾಗರಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಸಾರ್ವಜನಿಕರಿಗೆ ಕನಿಷ್ಠ ₹ 1ರಿಂದ ಟಿಕೆಟ್ ದರ ನಿಗದಿಪಡಿಸಲಾಗಿದೆ. ಲಾಯಲ್ ವರ್ಲ್ಡ್ ಈ ಕಾರ್ಯಕ್ರಮಕ್ಕೆ ಸಹಯೋಗ ನೀಡಿದೆ. ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ಕಷ್ಟದಲ್ಲಿರುವ ವೃದ್ಧರಿಗೆ, ವೃದ್ಧಾಶ್ರಮಕ್ಕೆ ಹಾಗೂ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗದೆ ಪರದಾಡುತ್ತಿರುವ ವೃದ್ಧರಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಸದಸ್ಯರಾದ ಡಾ.ಲಾವಣ್ಯ ಶೆಣೈ, ಮೀರಾ ಶ್ರೀಕಾಂತ್, ಮಧುಸೂದನ್, ದಿವ್ಯಾ ಕೇಶವನ್ ಸುಮಾ ರಾಜಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.