ಮೈಸೂರು: ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಅಂತರ ಜಿಲ್ಲಾ ಜೂನಿಯರ್ ಮತ್ತು 23 ವರ್ಷದ ಒಳಗಿನವರ ಅಥ್ಲೆಟಿಕ್ಸ್‌ನ 2ನೇ ದಿನವಾದ ಭಾನುವಾರ ಐದು ಕೂಟ ದಾಖಲೆಗಳು ನಿರ್ಮಾಣವಾದವು.
23 ವರ್ಷದ ಒಳಗಿನ ಪುರುಷರ ಹೈ ಜಂಪ್‌ನಲ್ಲಿ ಶಿವಮೊಗ್ಗದ ಸುದೀಪ್ 2.05 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ಕಳೆದ ವರ್ಷ ಅನಿಲ್ ಕುಮಾರ್ ನಿರ್ಮಿಸಿದ್ದ (2 ಮೀಟರ್) ದಾಖಲೆಯನ್ನು ಅಳಿಸಿದರು.
ಜಾವೆಲಿನ್ ಥ್ರೋನಲ್ಲಿ ಬೆಳಗಾವಿಯ ಡಿವೈಇಎಸ್‌ನ ಶಶಾಂಕ ಪಾಟೀಲ 66.76 ಮೀಟರ್ ಎಸೆಯುವ ಮೂಲಕ 2021ರಲ್ಲಿ ದಕ್ಷಿಣ ಕನ್ನಡದ ಶಾರುಖ್ ತಾರಿಹಾಳ ಹೆಸರಿನಲ್ಲಿದ್ದ 57.80 ಮೀಟರ್ ದಾಖಲೆಯನ್ನು ಅಳಿಸಿದರು. 2ನೇ ಸ್ಥಾನ ಪಡೆದ ಸಂಗಪ್ಪ ಕುಮಾರ ಸಹ 60.05 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಹಳೆಯ ದಾಖಲೆಯನ್ನು ಸರಿಸಿದರು.
ಇದೇ ವಯೋಮಿತಿಯ 200 ಮೀಟರ್ಸ್ ಓಟದಲ್ಲಿ ಧಾರವಾಡದ ಪ್ರಸನ್ನಕುಮಾರ್ ಮಣ್ಣೂರು 21.45 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ 2022ರಲ್ಲಿ ಅಭಿನ್ ದೇವಾಡಿಗ ನಿರ್ಮಿಸಿದ್ದ ದಾಖಲೆಯನ್ನು (21.60 ಸೆ.) ಸರಿಗಟ್ಟಿದರು.
18 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಚಿಕ್ಕಮಗಳೂರಿನ ಎಚ್.ಡಿ. ಪ್ರಥಮ್ 1000 ಮೀ. ಓಟವನ್ನು 2ನಿ, 31.23 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಭೂಷಣ್ ಗುರುವ ಹೆಸರಿನಲ್ಲಿದ್ದ ( 2ನಿ, 35.10 ಸೆ) ದಾಖಲೆಯನ್ನು ಅಳಿಸಿದರು. 16 ವರ್ಷದ ಒಳಗಿನ ಬಾಲಕಿಯರ 80 ಮೀ. ಹರ್ಡಲ್ಸ್‌ನಲ್ಲಿ ಬೆಂಗಳೂರಿನ ನೂಪುರಾ ಹೊಳ್ಳ 12.51 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ 2019ರಲ್ಲಿ ಬೃಂದಾ ಗೌಡ ಹೆಸರಿನಲ್ಲಿದ್ದ 13.40 ಸೆಕೆಂಡುಗಳ ದಾಖಲೆ ಸರಿಗಟ್ಟಿದರು.
23 ವರ್ಷದ ಒಳಗಿನವರು:
200 ಮೀ. ಓಟ: ಎಂ. ಪ್ರಸನ್ನಕುಮಾರ್ (ಧಾರವಾಡ. ಸ: 21.45 ಸೆ)–1, ಕೆ. ಧನುಷ್ (ಉಡುಪಿ)–2, ಶಶಾಂಕ್ ವರ್ಮ (ತುಮಕೂರು)–3: 10 ಸಾವಿರ ಮೀ. ಓಟ: ಡಿ. ಸಚಿನ್ (ಯಾದಗಿರಿ. ಸ: 33ನಿ, 15.19 ಸೆ)–1, ಸುನಿಲ್ ದಂಡ (ಧಾರವಾಡ)–2, ದಶರಥ (ಶಿವಮೊಗ್ಗ)–3; ಲಾಂಗ್ ಜಂಪ್: ಜಫರ್‌ಖಾನ್ ಮೊಹಮ್ಮದ್ (ಬೆಳಗಾವಿ. ದೂರ: 7.21 ಮೀ)–1, ಪಿ.ಆರ್. ದರ್ಶನ್ (ದ.ಕ)–2, ಡಿ. ರಾಥೋಡ್ ಲೋಕೇಶ್ (ಯಾದಗಿರಿ)–3: ಹೈಜಂಪ್: ಸುದೀಪ್ (ಶಿವಮೊಗ್ಗ. ಎತ್ತರ: 2.05 ಮೀ)–1, ಎ. ಅಜಿತ್ (ಬೆಂಗಳೂರು)–2, ಯಶ್‌ರಾಜ್ (ಬೆಳಗಾವಿ)–3; ಜಾವೆಲಿನ್ ಥ್ರೋ: ಶಶಾಂಕ್ ಪಾಟೀಲ (ಬೆಳಗಾವಿ. ದೂರ: 66.76 ಮೀ)–1, ಸಂಗಪ್ಪ ಕುಮಾರ (ಧಾರವಾಡ)–2, ಅಭಿನಂದನ್ ( ಉ.ಕನ್ನಡ)–3.
20 ವರ್ಷದ ಒಳಗಿನವರು: 200 ಮೀ. ಓಟ: ಅಂಕಿತ್ ಜೋಗಿ (ಉಡುಪಿ. ಸ: 22.15 ಸೆ)–1, ಕೆ.ಬಿ. ಸಂಹಿತ್ (ಬೆಂಗಳೂರು)–2, ಯು.ಎ. ಸನತ್ (ಉಡುಪಿ)–3; 10 ಸಾವಿರ ಮೀ. ಓಟ: ವಿಜಯ್ ವಿ. (ಬೆಳಗಾವಿ. ಸ: 32ನಿ. 23.21 ಸೆ)–1, ಗಣಪತಿ ಯಲ್ಲಪ್ಪ (ಉ.ಕನ್ನಡ)–2, ವೈಭವ್ ಪವಾರ್ (ಬೆಳಗಾವಿ)–3; ಲಾಂಗ್ ಜಂಪ್: ಸುಶಾಂತ್ ಸುವರ್ಣ ( ದ.ಕ. 7.17 ಮೀ)–1, ಟಿ. ಲೋಹಿಯಾ ( ಚಿತ್ರದುರ್ಗ)–2, ಸುನಾಲ್ ಸುವರ್ಣ (ಉಡುಪಿ)–3. ಹೈಜಂಪ್: ಕೆ.ಆರ್. ಯಶ್ವಿನ್ (ದ.ಕ. 1.80 ಮೀ)–1, ಅಭಯ್‌ಕುಮಾರ್ ( ಬೆಂ)–2, ಶಶಿಕುಮಾರ್ (ತುಮಕೂರು)3. ಜಾವೆಲಿನ್ ಥ್ರೋ: ಎಚ್. ಎ. ಸ್ವರೂಪ್ (ಮಂಡ್ಯ. 63.47 ಮೀ)–1 ಕುಲದೀಪ್ ಕುಮಾರ್ (ಬೆಂ. ಗ್ರಾಮಾಂತರ)–2, ಅಭಿನಾಶ್ ಸಾಹೊ ( ಬೆಂ)–3.
18 ವರ್ಷ ಒಳಗಿನವರು:
200 ಮೀ: ಸೈಯದ್ ಶಬೀರ್ (ಧಾರವಾಡ. 21.85 ಸೆ)–1, ಪಿ. ಚಿರಂತ್ (ಮೈಸೂರು)–2, ಚಿರಾಗ್ (ಉಡುಪಿ)–3: 1 ಸಾವಿರ ಮೀ. ಓಟ: ಎಚ್.ಡಿ. ಪ್ರಥಮ್ (ಚಿಕ್ಕಮಗಳೂರು, 2ನಿ, 31.23 ಸೆ)–1, ಕೆ. ಶಿವಾನಂದ್ (ದ.ಕ.)–2, ಸಯ್ಯದ್ ಇರ್ಫಾನ್ (ಧಾರವಾಡ)–3: ಹೈಜಂಪ್: ಸಿನಾನ್ (ಉಡುಪಿ. 1.84 ಮೀ)–1, ಗೌತಮ್ ರಾವ್ ( ಮೈಸೂರು)–2, ರೋಹಿತ್ ಕುಮಾರ್ ( ಶಿವಮೊಗ್ಗ)–3; ಡಿಸ್ಕಸ್ ಥ್ರೋ: ಅವಿನಾಶ್ ತಲಕೇರಿ (ವಿಜಯಪುರ. 46.85 ಮೀ)–1, ಎಲ್.ಜಿ. ನಿತಿನ್ (ದ.ಕ)–2, ಅಭಿ (ಚಾ.ನಗರ)–3.
16 ವರ್ಷ ಒಳಗಿನವರು:
600 ಮೀ. ಓಟ: ಆಯುಷ್ ಪ್ರಂಜಲ್ (ದ.ಕ. 1ನಿ, 23.56 ಸೆ)–1, ಬಿ.ಎನ್. ಸ್ವಯಂ (ಕೊಡಗು)–2, ಎಂ. ಧವಲ್ ದೇವಯ್ಯ ( ಕೊಡಗು)–3; ಶಾಟ್‌ಪಟ್: ನಿಖಿಲ್ (ದ.ಕ. 14.89 ಮೀ)–1, ರೆಹಾನ್ ಹಮೀದ್ (ಚಿಕ್ಕಮಗಳೂರು)–2, ಕೆ.ಆರ್. ಲಿಖಿತ್ (ರಾಮನಗರ)–3; ಹೈಜಂಪ್: ಅಭಿನವ್ ರೇವಣ್ಣ (ಬೆಂ. 1.68 ಮೀ)–1, ಆರ್. ಪುನೀತ್ (ಮೈಸೂರು)–2, ಜಿ. ಮಣಿಕಂಠ ಗೌಡ (ಶಿವಮೊಗ್ಗ)–3.
14 ವರ್ಷದ ಒಳಗಿನವರು: ಟ್ರಯಥ್ಲಾನ್ ‘ಸಿ’: ಅಜಯ್ ಪೃಥ್ವಿರಾಜ್ (ಮೈ. 1943 ಅಂಕ)–1, ಜೊಃರಬ್ ಅಬ್ರಹಾಂ (ಬೆಂ)–2, ನಿತಾಂಶ್ ಪೊನ್ನಪ್ಪ (ಬೆಂ)–3.
23 ವರ್ಷದ ಒಳಗಿನವರು:
200 ಮೀ ಓಟ: ಶ್ರದ್ಧಾ (ಉಡುಪಿ. 25.79 ಸೆ)–1, ಸಿಂಧುಶ್ರೀ (ಮಂಡ್ಯ)–2, ಎನ್. ಸೀಮಾ ರಮೇಶ್ (ಗದಗ)–3; 10 ಸಾವಿರ ಮೀ. ಓಟ: ಯುವರಾಣಿ (ರಾಯಚೂರು. ಸ: 41ನಿ, 11.11 ಸೆ)–1, ಬಸವಲಿಂಗಮ್ಮ (ಕೊಪ್ಪಳ)–2, ಶುಭಾಂಗಿ ಪ್ರಮೋದ್ (ಬೆಳಗಾವಿ)–3; ಶಾಟ್‌ಪಟ್: ಬೃಂದಾ ಗೌಡ (ಮೈಸೂರು. 11.78 ಮೀ), ಆಕಾಂಕ್ಷಾ ಕೆಂಜ (ಉಡುಪಿ)–2, ನಸ್ರೀನ್ ಬಾನು (ಬಳ್ಳಾರಿ)–3.
20 ವರ್ಷ ಒಳಗಿನವರು:
200 ಮೀ ಓಟ: ದಿಶಾ ಅಳಿಗೆ (ಚಿಕ್ಕಮಗಳೂರು. 24.56 ಸೆ)–1, ಬಿ. ವೈಭವಿ ಬಾಲು (ಬೆಳಗಾವಿ)–2, ಕೆ. ರಕ್ಷಿತಾ (ರಾಯಚೂರು)–3; 3 ಸಾವಿರ ಮೀ. ಓಟ: ಎಚ್.ಎಂ. ಹರ್ಷಿತಾ (ಹಾವೇರಿ. 10ನಿ, 35.61 ಸೆ)–1, ಎನ್.ಎಸ್. ರೂಪಶ್ರೀ (ದ.ಕ)–2, ಎನ್. ಪ್ರಣಮ್ಯ (ದ.ಕ)–3; ಡಿಸ್ಕಸ್ ಥ್ರೋ: ಐಶ್ವರ್ಯ ಮಾರುತಿ (ದ.ಕ. 40.56 ಮೀ), ಮಾಧುರ್ಯ (ಉಡುಪಿ)–2, ಪಿ. ರೋಶಿಣಿ (ಚಾ. ನಗರ)–3. ಶಾಟ್‌ಪಟ್: ಎಸ್.ಕೆ. ರೇಯಾ (ಮೈಸೂರು. 10.86 ಮೀ), ಮಾಧುರ್ಯ (ಉಡುಪಿ–2, ಐಶ್ವರ್ಯ (ದ.ಕ)–3.
18 ವರ್ಷ ಒಳಗಿನವರು:
200 ಮೀ ಓಟ: ಸ್ತುತಿ ಶೆಟ್ಟಿ (ಉಡುಪಿ. 25.61 ಸೆ)–1, ಅನುಷಾ ನಾಯಕ್ (ಶಿವಮೊಗ್ಗ)–2, ಪಿ. ಅಭಿಜ್ಞಾ (ಶಿವಮೊಗ್ಗ)–3; 1 ಸಾವಿರ ಮೀ. ಓಟ: ಪ್ರಣತಿ (ಬೆಂ. ಗ್ರಾಮಾಂತರ. 2ನಿ, 57.64 ಸೆ)–1, ಆರ್.ಎಚ್. ಶಿಲ್ಪಾ (ಧಾರವಾಡ)–2, ಚರಿಷ್ಮಾ (ದ.ಕ)–3; ಶಾಟ್‌ಪಟ್: ಶ್ರೀಮಯಿ ಕುಲಕರ್ಣಿ (ಬೆಂ. 11.98 ಮೀ)–1, ವಿಸ್ಮಿತಾ (ದ.ಕ)–2, ವ್ರತಾ ಹೆಗಡೆ (ದ.ಕ)–3. ಡಿಸ್ಕಸ್ ಥ್ರೋ: ಶ್ರೀಮಯಿ ಕುಲಕರ್ಣಿ (ಬೆಂ. 38.92 ಮೀ), ಸಿ. ತೇಜಸ್ವಿನಿ (ಮೈ)–2, ದೀಪಾ ಪೂಜಾರಿ (ವಿಜಯಪುರ)–3.
16 ವರ್ಷದ ಒಳಗಿನವರು:
600 ಮೀ ಓಟ: ಕೆ.ಜೆ. ಶಮತ್ಮಿಕಾ (ಬೆಂ. 1ನಿ, 38.64 ಸೆ)–1, ಎಂ.ಎ. ವರ್ಷಾ (ಮೈಸೂರು)–2, ಸನಿಹಾ ಶೆಟ್ಟಿ (ದ.ಕ)–3; 80 ಮೀ. ಹರ್ಡಲ್ಸ್: ನೂಪುರಾ ಹೊಳ್ಳ (ಬೆಂ. 12.51 ಸೆ)–1, ಎಂ. ಎಂ. ಜನ್ಯಾ ಬೊಳ್ಳಮ್ಮ (ಕೊಡಗು)–2, ಸಾಕ್ಷಿ ಕ್ರಿಸ್ಟಿನಾ (ದ.ಕ)–3; ಜಾವೆಲಿನ್ ಥ್ರೋ: ಸಿ.ಜೆ. ಭವ್ಯಾ (ಹಾಸನ. 36.63 ಮೀ)–1, ಮಾನ್ಯ(ಉಡುಪಿ)–2, ಆನಂ ಅಶ್ರಫ್ (ಬೆಂ)–3.
14 ವರ್ಷ ಒಳಗಿನವರು: ಜಾವೆಲಿನ್: ತನಿಷ್ಕಾ (ಬೆಂ. 25.19 ಮೀ)–1, ಆರ್. ನೇಹಾ (ಬೆಂ)–2, ಐಮನ್ ಮೊಹಮ್ಮದಿ (ಚಿಕ್ಕಮಗಳೂರು)–3; ಟ್ರಯಥ್ಲಾನ್ ಸಿ: ಪೃಥ್ವಿ ಬ್ಯಾಕೋಡ (ಬಾಗಲಕೋಟೆ. 2276 ಅಂಕ)–1, ಸಂಹಿತಾ ರಾವ್ (ದ.ಕ)–2, ಎಸ್. ಅನ್ನಪೂರ್ಣಾ (ಬೆಂ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.