ಮೈಸೂರು: ರಾಜ್ಯದಲ್ಲಿ ಗಣಪತಿ ಮೆರವಣಿಗೆಗಳ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ, ಮೈಸೂರಿನ ಹಿಂದೂ ಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಸೋಮವಾರ ಪ್ರತಿಭಟನಾ ಮೆರವಣಿ ನಡೆಸಿದರು.
ನಗರದ ಮಹದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಹಳೆ ಡೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪೊಲೀಸ್ ಇಲಾಖೆ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ‘ಮುಂದಿನ ವರ್ಷ ಗಣೇಶೋತ್ಸವ ನಡೆಸಬಾರದು ಎಂದು ಈಗ ಮುಸ್ಲಿಮರು ಸಿಕ್ಕ ಸಿಕ್ಕ ಕಡೆ ಗಲಾಟೆ ಮಾಡುತ್ತಿದ್ದಾರೆ. ಆಂಧ್ರಪ್ರದೇಶ ಒಬ್ಬ ಕ್ರಿಶ್ಚಿಯನ್ ಕೈಗೆ ಸಿಕ್ಕ ಕಾರಣ ಪವಿತ್ರವಾದ ತಿರುಪತಿ ಲಡ್ಡುವಿನಲ್ಲಿ ಹಂದಿ- ದನದ ಕೊಬ್ಬು ಹಾಕಿದ್ದಾರೆ. ಇದು ಕರ್ನಾಟಕದಲ್ಲೂ ಆರಂಭವಾಗುವ ಕಾಲ ದೂರವಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.
‘ಈದ್ ಮೆರವಣಿಗೆ ಮೇಲೆ ಒಬ್ಬ ಹಿಂದೂಗಳು ಕಲ್ಲು ಹಾಕಿದರೇ. ಮುಸ್ಲಿಂರಿಗೆ ಮೆಕ್ಕಾ ಪವಿತ್ರಭೂಮಿ. ಕ್ರಿಶ್ಚಿಯನ್‌ರಿಗೆ ರೋಮ್ ಪವಿತ್ರ ಭೂಮಿ. ಹೀಗಾಗಿ ಈ ಹಿಂದೂ ಭೂಮಿ ಮೇಲೆ ಅಶಾಂತಿ ನಿರ್ಮಾಣ ಮಾಡುತ್ತಾರೆ. ನ್ಯೂಕ್ಲಿಯರ್ ಬಾಂಬ್ ಮಾಡಿದ ಹಿಂದೂಗಳಿಗೆ ಗುಜರಿ ಮುಸ್ಲಿಮರು ಮಾಡುವ ಪೆಟ್ರೋಲ್ ಬಾಂಬ್ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದೀರಾ’ ಎಂದು ಪ್ರಶ್ನಿಸಿದರು.
‘ಮುಸ್ಲಿಮರು ನಡೆಸುವ ಪೆಟ್ರೋಲ್ ಬಾಂಬ್‌ಗೆ ಹೆದರುವುದಿಲ್ಲ. ಹಿಂದೂಗಳು ರೊಚ್ಚಿಗೆದ್ದು ಕೈಯಲ್ಲಿ ಕಲ್ಲು ಹಿಡಿದರೆ ಅವರು ಉಳಿಯುತ್ತಾರಾ, ನಾಮಗೆ ಶಾಂತಿ ಪ್ರಿಯರು ಎಂಬ ಪಟ್ಟ ಸಾಕು. ಧರ್ಮ ರಕ್ಷಣೆಗೆ ಎಲ್ಲಾ ಹಿಂದೂಗಳು ಮುಂದಾಗಬೇಕು. ಜಾತಿ ಮನಸ್ಥಿತಿ ಬಿಟ್ಟು ಹಿಂದೂಗಳಾಗಿ. ಗಲಭೆ ಹೆಸರಿನಲ್ಲಿ ಗಣೇಶೋತ್ಸವ ನಿಲ್ಲಿಸಲು ವ್ಯವಸ್ಥಿತ ಯೋಜನೆ ಸಿದ್ಧವಾಗುತ್ತಿದೆ’ ಎಂದು ಆರೋಪಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.