ADVERTISEMENT

ಮೈಸೂರು | ಕೊಲೆ ಯತ್ನ: ಅಪರಾಧಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 13:26 IST
Last Updated 10 ಅಕ್ಟೋಬರ್ 2024, 13:26 IST
<div class="paragraphs"><p>ಜೈಲು (ಪ್ರಾಧಿನಿಧಿಕ ಚಿತ್ರ)</p></div>

ಜೈಲು (ಪ್ರಾಧಿನಿಧಿಕ ಚಿತ್ರ)

   

– ಐಸ್ಟಾಕ್ ಚಿತ್ರ

ಮೈಸೂರು: ಇಲವಾಲ ಗ್ರಾಮದ ನಿವಾಸಿ ರಾಜೇಶ್‌ ವಿರುದ್ಧ ಕೊಲೆ ಯತ್ನ ಆರೋಪ ಸಾಬೀತಾಗಿರುವುದರಿಂದ ಏಳನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 2 ವರ್ಷ 6 ತಿಂಗಳು ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ADVERTISEMENT

ರಾಜೇಶ್‌ ಮೈಸೂರು– ಹುಣಸೂರು ರಸ್ತೆಯ ಪಕ್ಕದ ರಾಘವೇಂದ್ರ ಬಾರ್‌ ಮತ್ತು ರೆಸ್ಟೋರೆಂಟ್ ಮುಂಭಾಗ ವಿಶ್ವನಾಥ್‌ ಎಂಬುವರು ಮದ್ಯ ತೆಗೆದುಕೊಡಲಿಲ್ಲ ಎಂಬ ಕಾರಣಕ್ಕೆ ಅವರನ್ನು ಓಡಿಸಿಕೊಂಡು ಹೋಗಿ ಬಲಗಣ್ಣು, ಮೂಗಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದರು. ಇಲವಾಲ ಠಾಣೆಯ ಅಂದಿನ ಎಸ್‌ಐ ಕೆ.ಎನ್‌.ಸುರೇಶ್‌ ಬೋಪಣ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶ ಎಂ.ರಮೇಶ್ ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಬಳಿಕ ಅಪರಾಧಿಗೆ ಕಠಿಣ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿದರು. ಸರ್ಕಾರದ ಪರವಾಗಿ ಕೆ.ನಾಗರಾಜ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.