ADVERTISEMENT

ಸಮಾಜದ ಋಣ ತೀರಿಸಿ: ಕೆ.ರಘುರಾಂ ವಾಜಪೇಯಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 14:48 IST
Last Updated 4 ಮಾರ್ಚ್ 2024, 14:48 IST
ಮೈಸೂರಿನ ‘ಅರಿವು ಸಂಸ್ಥೆ’ಯ 12ನೇ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಸೋಮವಾರ ‘ಅರಿವು ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಮೈಸೂರಿನ ‘ಅರಿವು ಸಂಸ್ಥೆ’ಯ 12ನೇ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಸೋಮವಾರ ‘ಅರಿವು ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಮೈಸೂರು: ‘ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವೇನು ನೀಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಋಣ ತೀರಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಹೇಳಿದರು.

ಇಲ್ಲಿನ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಅರಿವು ಸಂಸ್ಥೆಯ 12ನೇ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಸಮಾಜ ಸೇವೆ ಮಾಡುವುದು ಮನುಷ್ಯನಿಗೆ ದೇವರು ನೀಡಿದ ಉತ್ತಮ ಅವಕಾಶ. ಅದರಲ್ಲೂ ನಿಸ್ವಾರ್ಥದಿಂದ ಸೇವೆ ಮಾಡಿದಾಗ ಅದರ ಮೌಲ್ಯ ಹೆಚ್ಚುತ್ತದೆ’ ಎಂದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿದರು.

ಕೆ.ಬಿ. ಲಿಂಗರಾಜು (ಕೈಗಾರಿಕೆ), ಡಾ.ಎಸ್.ಕೆ. ಮಿಥಲ್ (ವನ್ಯಜೀವಿ ಸಂರಕ್ಷಣೆ), ಜಯಪ್ರಕಾಶ್ ಗೌಡ (ಚಿತ್ರರಂಗ), ಆರ್.ಎಚ್. ಪವಿತ್ರಾ (ಶಿಕ್ಷಣ), ಶ್ವೇತಾ ಮಡಪ್ಪಾಡಿ (ಸಂಗೀತ), ಚರಣ್ ರಾಜ್ (ಕ್ರೀಡೆ), ದೀಪಾ ನಾಯಕ್ (ಶಿಕ್ಷಣ) ನಾಗಮಣಿ (ಸಾಮಾಜಿಕ), ಎಂ.ಕೆಬ್ಬೆಹುಂಡಿ ಶಿವಕುಮಾರ್ (ರಂಗಭೂಮಿ) ಅವರಗೆ ‘ಅರಿವು ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರೊ.ಅಣ್ಣಾಜಿ ಗೌಡ, ಮೈಸೂರು ಅರ್ಚಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್, ಕೆಪಿಸಿಸಿ ಸದಸ್ಯ ನಜರ್‌ಬಾದ್‌ ನಟರಾಜ್, ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜೆಡಿಎಸ್ ನಗರ ಘಟಕದ ಉಪಾಧ್ಯಕ್ಷ ಯದುನಂದನ್, ಸುಚೀಂದ್ರ, ನಾಗಶ್ರೀ, ಚಕ್ರಪಾಣಿ, ಅಪೂರ್ವ ಸುರೇಶ್, ವರುಣ ಮಹಾದೇವ್, ದರ್ಶನ್, ರಾಕೇಶ್, ಮಹೇಶ್ ಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.