ADVERTISEMENT

ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಟೂರ್ನಿ | ಬ್ಯಾಡ್ಮಿಂಟನ್: ಬೆಂಗಳೂರು ಚಾಂಪಿಯನ್

ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಟೂರ್ನಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 23:56 IST
Last Updated 16 ಅಕ್ಟೋಬರ್ 2024, 23:56 IST
<div class="paragraphs"><p>ಮೈಸೂರಿನಲ್ಲಿ ಬುಧವಾರ ಮುಕ್ತಾಯವಾದ ಪದವಿಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯ ಪದಕ ವಿಜೇತರು</p></div>

ಮೈಸೂರಿನಲ್ಲಿ ಬುಧವಾರ ಮುಕ್ತಾಯವಾದ ಪದವಿಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯ ಪದಕ ವಿಜೇತರು

   

–ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ಬೆಂಗಳೂರು ಉತ್ತರ ಹಾಗೂ ದಕ್ಷಿಣ ತಂಡಗಳು ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್‌ ಪೆವಿಲಿಯನ್‌ನಲ್ಲಿ ಬುಧವಾರ ಮುಕ್ತಾಯಗೊಂಡ ಪದವಿ‍ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿಯರು ಹಾಗೂ ಬಾಲಕರ ವಿಭಾಗದಲ್ಲಿ ಚಾಂಪಿಯನ್‌ ಪಟ್ಟ ಪಡೆದವು.

ADVERTISEMENT

ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ ತಂಡದವರು 2–1ರಿಂದ ಆತಿಥೇಯ ಮೈಸೂರು ತಂಡವನ್ನು ಮಣಿಸಿ ಟ್ರೋಫಿ ಜಯಿಸಿದರು. ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡ 2–1 ರಿಂದ ದಕ್ಷಿಣ ಕನ್ನಡ ತಂಡವನ್ನು 2–1ರಿಂದ ಮಣಿಸಿ ಚಾಂಪಿಯನ್‌ ಆಯಿತು.

ಬಾಲಕಿಯರ ಸಿಂಗಲ್ಸ್‌ನಲ್ಲಿ ಮೈಸೂರಿನ ದಿಯಾ 21–8, 21–8ರಿಂದ ಬೆಂಗಳೂರು ಉತ್ತರದ ಅನನ್ಯಾ ಅವರನ್ನು ಮಣಿಸಿದರೆ, ಡಬಲ್ಸ್‌ನಲ್ಲಿ ಬೆಂಗಳೂರು ಉತ್ತರದ ರುಜುಲಾ– ಮೌನಿತಾ ಜೋಡಿ 21–13, 21–13ರಿಂದ ದಿವ್ಯಾ– ಸಿಂಚನಾ ವಿರುದ್ಧ ಗೆದ್ದಿತು. ರಿವರ್ಸ್‌ ಸಿಂಗಲ್ಸ್‌ನಲ್ಲಿ ರುಜುಲಾ 21–6, 21–6ರಿಂದ ಮೈಸೂರಿನ ಅನನ್ಯಾ ವಿರುದ್ಧ ಜಯಗಳಿಸಿದರು.

ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಬೆಂಗಳೂರು ದಕ್ಷಿಣದ ಧ್ಯಾನ್ 21–5, 21–5ರಿಂದ ದಕ್ಷಿಣ ಕನ್ನಡದ ಅನ್ಶುಲ್‌ ವಿರುದ್ಧ ಗೆದ್ದರೆ, ರಿವರ್ಸ್‌ ಸಿಂಗಲ್ಸ್‌ನಲ್ಲಿ ಕ್ರಿಸ್‌ 10–21, 21–11, 21–19ರಿಂದ ಭಾವೇಶ್‌ ಎದುರು ಜಯಿಸಿದರು. ಡಬಲ್ಸ್‌ನಲ್ಲಿ ದಕ್ಷಿಣ ಕನ್ನಡದ ಆರ್ಯ– ತಿಲಕ್‌ 18–21, 21–14, 21–13ರಿಂದ ಬೆಂಗಳೂರು ದಕ್ಷಿಣದ ಸುಮಿತ್‌– ಕ್ರಿಸ್ ಅವರನ್ನು ಮಣಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.