ಕೆ.ಆರ್.ನಗರ: ಇಲ್ಲಿನ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಮರು ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಷಯ ಹಂಚಿಕೊಂಡರು.
ಇಲ್ಲಿನ ಮುಸ್ಲಿಂ ಬಡಾವಣೆ ಜಾಮೀಯ ಮಸೀದಿ ಬಳಿ ಜಮಾವಣೆಗೊಂಡ ಸಮುದಾಯದವರು ಗರುಡಗಂಬ ವೃತ್ತದ ಮೂಲಕ ಈದ್ಗಾ ಮೈದಾನಕ್ಕೆ ತೆರಳಿದರು.
ಜಾಮೀಯ ಮಸೀದಿ ಧರ್ಮಗುರುಗಳಾದ ಮುಫ್ತಿ ಜೈನೂಲ್ ಅಬಿದೀನ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಪರಸ್ಪರ ಶುಭಾಶಯ ಹಂಚಿಕೊಂಡು ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನ ಸಂಭ್ರಮದಿಂದ ಆಚರಿಸಿದರು.
ಜಾಮೀಯ ಮಸೀದಿ ಕಿರಿಯ ಧರ್ಮಗುರು ಆಲಿ ಹುಸೇನ್, ಮೂಳೆತಜ್ಞ ಮೊಹಬೂಬ್ ಖಾನ್, ಜಾಮೀಯ ಮಸೀದಿ ಅಧ್ಯಕ್ಷ ಅಫ್ಸರ್ ಬಾಬು, ಕಾರ್ಯದರ್ಶಿ ತಸ್ಸವರ್ ಪಾಷ, ಸದಸ್ಯರಾದ ಇರ್ಷಾದ್, ನಾಸೀರ, ಮುಜಾಹಿದ್, ವಸೀಂ, ಫರೋಕ್, ಮುಬಾರಕ್, ಪುರಸಭೆ ಸದಸ್ಯರಾದ ಜಾವೀದ್ ಪಾಷಾ, ಮುಖಂಡರಾದ ಸಯ್ಯದ್ ಅಸ್ಲಂ, ಸಯ್ಯದ್ ಜಾಬೀರ್, ನದೀಂ, ಸಯ್ಯದ್ ಇರ್ಫಾನ್, ಮುಜಾಹೀದ್, ಮಹಮ್ಮದ್ ಇರ್ಫಾನ್, ಜವಾದ್, ಶಾಕಿರ್, ಮುಬಾರಕ್, ನವೀದ್, ನವಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.