ADVERTISEMENT

ತಿ.ನರಸೀಪುರ: ಬಾಯಿ ಬೀಗ ಧರಿಸಿ ಹರಕೆ ತೀರಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 1 ಮೇ 2024, 15:27 IST
Last Updated 1 ಮೇ 2024, 15:27 IST
ತಿ.ನರಸೀಪುರ ಪಟ್ಟಣದಲ್ಲಿ ಬಣ್ಣಾರಿ ಮಾರಿಯಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಬಾಯಿ ಬೀಗ ಧರಿಸಿದ ಭಕ್ತರು ಪ್ರಮುಖ ಬೀದಿಗಳಲ್ಲಿ ಸಾರಿದರು
ತಿ.ನರಸೀಪುರ ಪಟ್ಟಣದಲ್ಲಿ ಬಣ್ಣಾರಿ ಮಾರಿಯಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಬಾಯಿ ಬೀಗ ಧರಿಸಿದ ಭಕ್ತರು ಪ್ರಮುಖ ಬೀದಿಗಳಲ್ಲಿ ಸಾರಿದರು   

ತಿ.ನರಸೀಪುರ: ಬಣ್ಣಾರಿ ಮಾರಿಯಮ್ಮ ದೇವಸ್ಥಾನದ 79ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪಟ್ಟಣದಲ್ಲಿ ಬುಧವಾರ ಬಾಯಿ ಬೀಗದ ಧರಿಸಿದ ಭಕ್ತರು ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಸಾಗಿದರು.

ಪಟ್ಟಣದ ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದ ಮುಂಭಾಗದ ಸಂಗಮದಲ್ಲಿ ಬೆಳಿಗ್ಗೆ ಪುಣ್ಯ ಸ್ನಾನದ ನಂತರ ಹರಕೆ ಹೊತ್ತ ಭಕ್ತರು ಸಾಲಿನಲ್ಲಿ ನಿಂತು ಬಾಯಿ ಬೀಗ ಹಾಕಿಸಿಕೊಂಡು ತಮ್ಮ ಹರಕೆ ತೀರಿಸುವುದರ ಜತೆಗೆ ಭಕ್ತಿ ಪ್ರದರ್ಶನ ಮಾಡಿದರು.

ಸುಮಾರು 5ರಿಂದ 10 ಅಡಿಗಳ ಉದ್ದದ ಕಬ್ಬಿಣದ ಸರಳುಗಳ ಚೂಪಾದ ತ್ರಿಶೂಲಾಕಾರದ ಬಾಯಿ ಬೀಗ ಧರಿಸಿದ್ದವರು ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿದರು. ಬಳಿಕ ದೇವಾಲಯಕ್ಕೆ ತೆರಳಿದ ಭಕ್ತರು ಬಾಯಿ ಬೀಗ ತೆಗೆಸಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.