ADVERTISEMENT

ಮೈಸೂರು: ಪಕ್ಷಿ ಪ್ರಪಂಚ ಅನಾವರಣ

ಅರಿವು ಕೇಂದ್ರದಲ್ಲಿ ಅನುಭವ ಹಂಚಿಕೊಂಡ ಸಮನ್ವಿತಾ

​ಪ್ರಜಾವಾಣಿ ವಾರ್ತೆ
Published 26 ಮೇ 2024, 16:12 IST
Last Updated 26 ಮೇ 2024, 16:12 IST
ಮೈಸೂರಿನ ಅರಿವು ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಭಾರತದ ಅಪರೂಪದ ಪಕ್ಷಿಗಳು’ ಕಾರ್ಯಕ್ರಮದಲ್ಲಿ ವನ್ಯಜೀವಿ ಛಾಯಾಗ್ರಾಹಕಿ ಸಮನ್ವಿತಾ ಎಸ್.ರಾವ್‌ ತಮ್ಮ ಅನುಭವ ಹಂಚಿಕೊಂಡರು
ಮೈಸೂರಿನ ಅರಿವು ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಭಾರತದ ಅಪರೂಪದ ಪಕ್ಷಿಗಳು’ ಕಾರ್ಯಕ್ರಮದಲ್ಲಿ ವನ್ಯಜೀವಿ ಛಾಯಾಗ್ರಾಹಕಿ ಸಮನ್ವಿತಾ ಎಸ್.ರಾವ್‌ ತಮ್ಮ ಅನುಭವ ಹಂಚಿಕೊಂಡರು   

ಮೈಸೂರು: ಅಳಿವಿನಂಚಿನಲ್ಲಿರುವ ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌ (ಹೆಬ್ಬಕ) ಹಕ್ಕಿಗಳ ಬಗ್ಗೆ, ಅವುಗಳನ್ನು ಹುಡುಕಿ ಹೋದ ದಿನಗಳು, ತೆಗೆದ ಚಿತ್ರಗಳನ್ನು ಪ್ರದರ್ಶಿಸಿದ ವನ್ಯಜೀವಿ ಛಾಯಾಗ್ರಾಹಕಿ ಸಮನ್ವಿತಾ ಎಸ್.ರಾವ್‌ ನೆರೆದವರಲ್ಲಿ ಪಕ್ಷಿ ಪ್ರಪಂಚದ ಬಗ್ಗೆ ಕುತೂಹಲ ಮೂಡಿಸಿದರು.

ಇಲ್ಲಿನ ಅರಿವು ಪರಿಸರ ಸಂಪನ್ಮೂಲ ಕೇಂದ್ರ ಮತ್ತು ಮೈಸೂರು ನೇಚರ್‌ ಸಂಸ್ಥೆಯಿಂದ ಲಿಂಗಾಂಬುಧಿ ಪಾಳ್ಯದ ಅರಿವು ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಭಾರತದ ಅಪರೂಪದ ಪಕ್ಷಿಗಳು’ ವಿಷಯ ಕುರಿತು ಅವರು ತಮ್ಮ ಅನುಭವ ಹಂಚಿಕೊಂಡರು.

ಉತ್ತರಾಖಂಡ, ಹಿಮಾಲಯ ಭಾಗದಲ್ಲಿ ಕಂಡುಬರುವ ಮೊನಾಲ್‌ ಹಕ್ಕಿಗಳು, ಮೈಸೂರಿಗೆ ಪರಿಚಿತವಾದ ಪಟ್ಟೆತಲೆ ಹೆಬ್ಬಾತುಗಳ ಬಗ್ಗೆಯೂ ಮಾಹಿತಿ ನೀಡಿದರು.

ADVERTISEMENT

1,370 ಹಕ್ಕಿಗಳು ಭಾರತದಲ್ಲಿದ್ದು, ವಾಸಸ್ಥಾನದ ಕಾರಣದಿಂದ ವಿವಿಧ ಸ್ಥಳದಲ್ಲಿ ಮಾತ್ರ ಕಾಣಸಿಗುವ ತುಂಬಾ ಅಪರೂಪದ 200 ಹಕ್ಕಿಗಳಿದ್ದು, ಅವುಗಳಲ್ಲಿ ಕೆಲವು ಪ್ರಮುಖ ಹಕ್ಕಿಗಳ ಮಾಹಿತಿಯನ್ನು, ಅದರ ಛಾಯಾಚಿತ್ರಕ್ಕಾಗಿ ಸಾಗಿದ ದಾರಿಯನ್ನು ನೆನಪಿಸಿಕೊಂಡರು. ಚಿತ್ರಗಳ ಮೂಲಕವೇ ವಿವರಣೆ ನೀಡಿದರು. 

ಡಾ.ಅಭಿಜಿತ್, ಶಿವಪ್ರಕಾಶ್, ಅರಿವು ಸಂಸ್ಥೆ ಟ್ರಸ್ಟಿ ಡಾ.ಎಂ.ಸಿ.ಮನೋಹರ, ಶಿಕ್ಷಕಿ ರಜನಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.