ADVERTISEMENT

‘‪ಕೊರೊನಾ ಕತ್ತಲೆಯಲ್ಲಿ ಆಟ-ಪಾಠದ ಬೆಳಕು’

ಬಿ.ವೈ.ವಿಜಯೇಂದ್ರ ಸಾಂಸ್ಕೃತಿಕ ಬಳಗದಿಂದ ಮಕ್ಕಳಿಗೆ ಪುಸ್ತಕ-ಆಟಿಕೆಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 14:32 IST
Last Updated 19 ಏಪ್ರಿಲ್ 2020, 14:32 IST
ಮೈಸೂರಿನ ಮೇದರಗೇರಿಯಲ್ಲಿ ಭಾನುವಾರ ಬಿ.ವೈ.ವಿಜಯೇಂದ್ರ ಸಾಂಸ್ಕೃತಿಕ ಬಳಗದ ವತಿಯಿಂದ ‘ಕೊರೊನಾ ಕತ್ತಲೆಯಲ್ಲಿ ಆಟ ಪಾಠದ-ಬೆಳಕು’ ಕಾರ್ಯಕ್ರಮದಡಿ ಮಕ್ಕಳಿಗೆ ಆಟಿಕೆ, ಪಠ್ಯ ಸಾಮಗ್ರಿಯನ್ನು ನಂದೀಶ್‌ ಹಂಚ್ಯಾ ವಿತರಿಸಿದರು. ಆರ್.ರಘು (ಕೌಟಿಲ್ಯ) ಇದ್ದಾರೆ
ಮೈಸೂರಿನ ಮೇದರಗೇರಿಯಲ್ಲಿ ಭಾನುವಾರ ಬಿ.ವೈ.ವಿಜಯೇಂದ್ರ ಸಾಂಸ್ಕೃತಿಕ ಬಳಗದ ವತಿಯಿಂದ ‘ಕೊರೊನಾ ಕತ್ತಲೆಯಲ್ಲಿ ಆಟ ಪಾಠದ-ಬೆಳಕು’ ಕಾರ್ಯಕ್ರಮದಡಿ ಮಕ್ಕಳಿಗೆ ಆಟಿಕೆ, ಪಠ್ಯ ಸಾಮಗ್ರಿಯನ್ನು ನಂದೀಶ್‌ ಹಂಚ್ಯಾ ವಿತರಿಸಿದರು. ಆರ್.ರಘು (ಕೌಟಿಲ್ಯ) ಇದ್ದಾರೆ   

ಮೈಸೂರು: ಬಿ.ವೈ.ವಿಜಯೇಂದ್ರ ಸಾಂಸ್ಕೃತಿಕ ಬಳಗದ ವತಿಯಿಂದ ‘ಕೊರೊನಾ ಕತ್ತಲೆಯಲ್ಲಿ ಆಟ ಪಾಠದ-ಬೆಳಕು’ ಎಂಬ ಕಾರ್ಯಕ್ರಮಕ್ಕೆ ಭಾನುವಾರ ನಗರದ ಮೇದರಗೇರಿಯಲ್ಲಿ ಚಾಲನೆ ನೀಡಲಾಯಿತು.

ಮಕ್ಕಳಿಗೆ ಪುಸ್ತಕ, ಆಟಿಕೆಗಳನ್ನು ವಿತರಿಸಿ‬ ‪ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚ್ಯಾ ಮಾತನಾಡಿ, ‘ಲಾಕ್‌ಡೌನ್‌ನಿಂದ ಅಪಾರ ಮಕ್ಕಳು ಸಾಮಾಜಿಕ ಸಂಪರ್ಕವಿಲ್ಲದೆ ಖಿನ್ನತೆಗೊಳಗಾಗುವ ಆತಂಕ ಎದುರಿಸುತ್ತಿರುವ ಹೊತ್ತಲ್ಲಿ ಸಾಂಸ್ಕೃತಿಕ ಬಳಗ ಮಾದರಿಯ ಕಾರ್ಯಕ್ರಮ ಆಯೋಜಿಸಿದೆ. ಇದು ಎಲ್ಲರಿಗೂ ಅನುಕರಣೀಯ’ ಎಂದರು.‬

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಆರ್.ರಘು(ಕೌಟಿಲ್ಯ) ಮಾತನಾಡಿ, ‘ಬಡ–ಮಧ್ಯಮ ವರ್ಗದ ಮಕ್ಕಳಿಗಾಗಿ ಈ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲು ಉದ್ದೇಶಿಸಲಾಗಿದೆ’ ಎಂದರು.

ADVERTISEMENT

ಮಹಾನಗರ ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್, ಆಲನಹಳ್ಳಿ ಮಹದೇವ ಸ್ವಾಮಿ,‬ ‪ವಕೀಲ ಮಾರ್ಬಳ್ಳಿ ಮೂರ್ತಿ, ಜಿ.ಗೋಪಾಲ‬, ವಿಕ್ರಮ ಅಯ್ಯಂಗಾರ್, ಅಪೂರ್ವ ಸುರೇಶ್, ಸುಚೀಂದ್ರ, ಶ್ರೀನಿವಾಸಪ್ರಸಾದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.