ADVERTISEMENT

ಸಿದ್ದರಾಮಯ್ಯ ಗೆಲುವು; ಕಾರ್ಯಕರ್ತರ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 13 ಮೇ 2023, 13:50 IST
Last Updated 13 ಮೇ 2023, 13:50 IST
ವರುಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರಿಂದ ತಿ.ನರಸೀಪುರ ಪಟ್ಟಣದ ಇಂದಿರಾ ಕಾಲೊನಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು
ವರುಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರಿಂದ ತಿ.ನರಸೀಪುರ ಪಟ್ಟಣದ ಇಂದಿರಾ ಕಾಲೊನಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು   

ತಿ.ನರಸೀಪುರ: ವರುಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೆಲ್ಲುತ್ತಿದ್ದಂತೆ ಕಸಬಾ ಹೋಬಳಿ ಸೇರಿದಂತೆ ಕ್ಷೇತ್ರದ ವಿವಿಧೆಡೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಪಟ್ಟಣದ ಹೆಳವರ ಹುಂಡಿ ಹಾಗೂ ಪುರಸಭೆ ವ್ಯಾಪಿಯ ವಿನಾಯಕ ಕಾಲೊನಿಯಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿದರು. ಸಿದ್ದರಾಮಯ್ಯ ಅವರ ಭಾವಚಿತ್ರ ಇರುವ ಬಾವುಟ ಹಿಡಿದು ಘೋಷಣೆ ಕೂಗುತ್ತಾ ಬೈಕ್‌ಗಳಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ವಿನಾಯಕ ಕಾಲೊನಿಯಲ್ಲಿ ಪುರಸಭೆ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ ನೇತೃತ್ವದಲ್ಲಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಟಿ.ಎಂ.ನಂಜುಂಡ ಸ್ವಾಮಿ ಮಾತನಾಡಿ, ರಾಜ್ಯದ ಜನ ಕಮಿಷನ್ ಸರ್ಕಾರ ತೆಗೆದು ಕಾಂಗ್ರೆಸ್ ಪಕ್ಷ ಗೆಲ್ಲಿಸಿ ಅಭಿವೃದ್ಧಿಪರ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.

ADVERTISEMENT

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದ ಸುಭದ್ರ ಸರ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ರಾಜ್ಯವು ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿ ಪಥದತ್ತ ಸಾಗಲಿದೆ. ಜನಪರ ಆಡಳಿತವೂ ಸಿಗಲಿದೆ ಎಂದರು.

ಹೆಳವರಹುಂಡಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ವಕ್ತಾರ ಸಂತೃಪ್ತಿ ಕುಮಾರ್,  ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ನಡೆಸಿದ ಷಡ್ಯಂತ್ರವನ್ನು ಜನತೆ ಬೆಂಬಲಿಸಲಿಲ್ಲ. ಹಣದಿಂದ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಕ್ಷೇತ್ರದ ಜನತೆ ತೋರಿಸಿಕೊಟ್ಟಿದ್ದಾರೆ.ಸಿದ್ದರಾಮಯ್ಯ ಅವರು ಎಲ್ಲ ವರ್ಗಗಳ ನಾಯಕರಾಗಿದ್ದು, ಈ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಪಾಷಣ್ಣ, ಹೈದರಾಲಿ, ಮುನ್ನ, ರಂಗಸ್ವಾಮಿ, ವಿನೋದ, ಕೃಷ್ಣ, ರಾಮಣ್ಣ, ಮಹದೇವ, ನಂಜಯ್ಯ, ಶಾಂತಾ ಕುಮಾರಸ್ವಾಮಿ, ರಾಮು, ನಂದನ್, ಅಸ್ಲಾಂ ಪಾಷ, ಅಕ್ಬರ್ ಶಕೀಲ್, ಇಂತಿಯಾಜ್, ಸೋಮಣ್ಣ, ಕಾಂತರಾಜ ಅರಸ್ ನವೀನ, ದೇವರಾಜು, ವಿಜಿ, ಸಮಿಉಲ್ಲಾ ಇಫ್ರಾನ್, ಸಂಜು, ಆನಂದ, ಮೋಹನ್, ನಂಜುಂಡಸ್ವಾಮಿ, ಪೂಜಾರ್ ರೇವಣ್ಣ, ಕಾಂಗ್ರೆಸ್ ವಕ್ತಾರ, ಸಂತೃಪ್ತಿ ಕುಮಾರ್, ಕೆ.ಗಣೇಶ್, ಎಂ.ಕೆ.ಸಹದೇವ್, ಮಿಥುನ್, ಅಮಾಸೆ ಗೌಡ, ರಘು, ಚೌಹಳ್ಳಿ ಮಲ್ಲೇಶ್, ನಾಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.