ADVERTISEMENT

ಮೈಸೂರು |ಚಾಮುಂಡಿ ಬೆಟ್ಟದ ಅನ್ನದಾಸೋಹ ಭವನಕ್ಕೆ ನೀರು ಶುದ್ಧೀಕರಣ ಘಟಕ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 15:22 IST
Last Updated 25 ಜುಲೈ 2024, 15:22 IST
ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ವಿ-ಗಾರ್ಡ್ ಕಂಪನಿಯಿಂದ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಗುರುವಾರ ಹಸ್ತಾಂತರಿಸಲಾಯಿತು
ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ವಿ-ಗಾರ್ಡ್ ಕಂಪನಿಯಿಂದ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಗುರುವಾರ ಹಸ್ತಾಂತರಿಸಲಾಯಿತು   

ಮೈಸೂರು: ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ದಾಸೋಹ ಭವನದಲ್ಲಿ ವಿ-ಗಾರ್ಡ್ ಕಂಪನಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉಚಿತವಾಗಿ ಅಳವಡಿಸಿದ್ದು, ಗುರುವಾರ ಅಧಿಕೃತವಾಗಿ ಹಸ್ತಾಂತರಿಸಲಾಯಿತು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರ ಮನವಿ ಮೇರೆಗೆ ಕಂಪನಿಯು ಘಟಕ ಅಳವಡಿಸಿದೆ. ನಿತ್ಯ 50 ಸಾವಿರ ಮಂದಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಾಮರ್ಥ್ಯವುಳ್ಳ ಘಟಕವನ್ನು ಕಂಪನಿಯ ಉಪಾಧ್ಯಕ್ಷ ಸೂರ್ಯಪ್ರಸಾದ್ ವಿ.ಜೆ., ಶಾಖಾ ವ್ಯವಸ್ಥಾಪಕ ಹರ್ಷೇಂದ್ರ ಪ್ರಸಾದ್ ಹಸ್ತಾಂತರಿಸಿದರು.

ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್‌ ಪೂಜೆ ಸಲ್ಲಿಸಿದರು. ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ದೀಪಕ್ ಆರ್. ಹೆಬ್ಬಾಳ್, ಚಮನ್, ಪುರುಷೋತ್ತಮ್ ಹಾಗೂ ಅರಣ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.