ಮೈಸೂರು: ವಿ.ಅವಿನಾಶ್ ಮತ್ತು ನೇಶಾ ಕಾವ್ಯ ಗೌಡ ಅವರು ಮೈಸೂರು ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ರ‍್ಯಾಪಿಡ್ ಚೆಸ್ ಟೂರ್ನಿಯಲ್ಲಿ ಕ್ರಮವಾಗಿ 15 ವರ್ಷ ವಯಸ್ಸಿನೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಮೈಸೂರು ವಿ.ವಿ. ಜಿಮ್ನೇಷಿಯಂ ಹಾಲ್‌ನಲ್ಲಿ ನಡೆದ ಟೂರ್ನಿಯಲ್ಲಿ ಅವಿನಾಶ್ ಅವರು ಆರು ಪಾಯಿಂಟ್‌ಗಳನ್ನು ಪಡೆದರು. ಅಭಿ ನಾಯಕ್ ಮತ್ತು ಆರ್.ರಾಜು ಪ್ರಸಾದ್ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಗೆದ್ದುಕೊಂಡರು.
ಬಾಲಕಿಯರ ವಿಭಾಗದಲ್ಲಿ ನೇಶಾ ಐದು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ತಮ್ಮದಾಗಿಸಿಕೊಂಡರು. ಎಸ್.ಡಿ.ಕುಶಲಾ (4.5) ಮತ್ತು ಅದಿತಿ ಎಸ್.ಭಾರದ್ವಾಜ್ (4) ಅವರು ಎರಡು ಹಾಗೂ ಮೂರನೇ ಸ್ಥಾನ ಪಡೆದರು.
ಮುಕ್ತ ವಿಭಾಗದಲ್ಲಿ ನಿರೀಕ್ಷೆಯಂತೆಯೇ ಗ್ರ್ಯಾಂಡ್‌ಮಾಸ್ಟರ್ ಎಂ.ಎಸ್.ತೇಜ್‌ಕುಮಾರ್ ಚಾಂಪಿಯನ್ ಆದರು. ಅವರು ₹ 15 ಸಾವಿರ ನಗದು ಮತ್ತು ಟ್ರೋಫಿ ತಮ್ಮದಾಗಿಸಿಕೊಂಡರು. ‘ರನ್ನರ್ ಅಪ್’ ಸ್ಥಾನ ಪಡೆದ ಓಜಸ್ ಕುಲಕರ್ಣಿ ₹ 10 ಸಾವಿರ ನಗದು ಪಡೆದರು.
ಬಾಲಕ ಮತ್ತು ಬಾಲಕಿಯರ 7, 9, 11, 13 ಮತ್ತು 15 ವರ್ಷ ವಯಸ್ಸಿನೊಳಗಿನವರ ವಿಭಾಗಗಳಲ್ಲಿ ಮೊದಲ ಐದು ಸ್ಥಾನಗಳನ್ನು ಪಡೆದವರಿಗೆ ಟ್ರೋಫಿ ಪ್ರದಾನಮಾಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಮೈಸೂರು ವಿ.ವಿ.ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ.ಸಿ.ಕೃಷ್ಣ, ಯುಕೆಸಿಎ ಉಪಾಧ್ಯಕ್ಷರಾದ ವಿಶ್ವನಾಥ ಬಳಿಗಾರ್, ನಾಗೇಂದ್ರ ಮುರಳೀಧರ್, ಎಂಡಿಸಿಎ ಉಪಾಧ್ಯಕ್ಷ ಸುದರ್ಶನ್, ಕಾರ್ಯದರ್ಶಿ ಕೆ.ಆರ್.ಶಿವರಾಮೇಗೌಡ, ಸದಸ್ಯ ಸಿ.ಕೆ.ಮುರಳೀಧರ್ ಪಾಲ್ಗೊಂಡಿದ್ದರು.
ಫಲಿತಾಂಶ: ಮುಕ್ತ ವಿಭಾಗ:
1.ಎಂ.ಎಸ್.ತೇಜಕುಮಾರ್ (9 ಪಾಯಿಂಟ್), 2. ಓಜಸ್ ಕುಲಕರ್ಣಿ, 3.ಡಿ.ಯಶಸ್, 4.ಎಂ.ಶಿವಂತ್ (ಎಲ್ಲರೂ ತಲಾ 7.5 ಪಾಯಿಂಟ್), 5.ವಿ.ಪಿ.ಎಸ್.ದರ್ಶನ್, 6.ಅರ್ಜುನ್ ಅಡಪ, 7.ಎಂ.ಡಿ.ಚಿರಂತ್, 8.ಎ.ಆಗಸ್ಟಿನ್, 9.ಎನ್.ರಾಕೇಶ್, 10.ರವಿ ಹೆಗ್ಡೆ (ಎಲ್ಲರೂ ತಲಾ 7 ಪಾಯಿಂಟ್)
ಬಾಲಕರ ವಿಭಾಗ:
15 ವರ್ಷ ವಯಸ್ಸಿನವರು: 1.ವಿ.ಅವಿನಾಶ್, 2.ಅಭಿ ನಾಯಕ್, 3.ಆರ್.ರಾಜು ಪ್ರಸಾದ್, 4.ಆರ್ಯನ್ ಆನಂದ್ (ತಲಾ 6 ಪಾಯಿಂಟ್), 5.ಎಂ.ಯು.ತೇಜಸ್ (5)
13 ವರ್ಷ: 1.ಎಂ.ಎಚ್.ಆಕಾಶ್ (6), 2.ಕಲಾಲ್, 3.ಎಸ್.ಘೋಷ್, 4.ಪಿ.ಮನೀಷ್ ಕುಮಾರ್, 5.ಎಂ.ಶಿವಪ್ರಸಾದ್ (5.5)
11 ವರ್ಷ: ಪಿ.ಕಾರ್ತಿಕ್ , 2.ಧಾರ್ಮಿಕ್ ಬಿ.ಗೌಡ (6), 3.ಪ್ರೀತಂ ಎಸ್.ರಾವ್, 4.ಎಸ್.ಸುಜನ್ ಭಾರದ್ವಾಜ್, 5.ತೇಜಸ್ವಿ ಪ್ರಭು (5 ಪಾಯಿಂಟ್)
9 ವರ್ಷ: 1.ಎಸ್.ವಿಶ್ವಜಿತ್ (5.5), 2.ಪಿ.ಇಶಾಂತ್, 3.ಎನ್.ಸಿ.ಗಂಭೀರ್, 4.ಜಿ.ಅಕ್ಷಯ್, 5.ಅಶಿತ್ ಕುಮಾರ್ ಗೌಡ (ಎಲ್ಲರೂ ತಲಾ 5 ಪಾಯಿಂಟ್)
7 ವರ್ಷ: 1.ಆರ್.ನಿವಾನ್, 2.ಅರೂಷ್ ಎಸ್.ಗೌಡ (ತಲಾ 4 ಪಾಯಿಂಟ್), 3.ವಿ.ಜಿ.ವಿಹಾನ್, 4.ಎಸ್.ಭವಿಷ್, 5.ಶಿಶಿರ್ ಸುಹಾಸ್ (ತಲಾ 4 ಪಾಯಿಂಟ್)
ಬಾಲಕಿಯರ ವಿಭಾಗ:
15 ವರ್ಷ ವಯಸ್ಸಿನೊಳಗಿನವರು: 1.ನೇಶಾ ಕಾವ್ಯ ಗೌಡ (5), 2.ಎಸ್.ಡಿ.ಕುಶಲ (4.5), 3.ಅದಿತಿ ಎಸ್.ಭಾರದ್ವಾಜ್, 4.ಸಿ.ಟಿ.ಅನಾಮಿಕಾ ಮೆನನ್, 5.ರಮಿತಾ ಎಸ್.ರಾಜ್ (ತಲಾ 4 ಪಾಯಿಂಟ್)
13 ವರ್ಷ: 1.ಪಿ.ಧನ್ಯಶ್ರೀ (5.5), 2.ಎಸ್.ಮೇಘನಾ, 3.ಎಚ್.ಕೆ.ಹರ್ಷಿತಾ, 4.ಜಿ.ದಿಯಾ ಸಲಲ್, 5.ಮಾನಸ ನಾರಾಯಣ (ತಲಾ 5 ಪಾಯಿಂಟ್)
11 ವರ್ಷ: 1.ವಿದ್ಯಾ ಶ್ರೀಧರ್ (6), 2.ಅನುಜಾ ಆನಂದ್, 3.ನಿತ್ಯಶ್ರೀ, 4.ಧಾತ್ರಿ ಉಮೇಶ್ (ತಲಾ 5 ಪಾಯಿಂಟ್), 5.ಎಂ.ಎನ್.ಈಶಾನ್ವಿ (4)
9 ವರ್ಷ: 1.ಎ.ಎನ್.ಶೆಫಾಲಿ, 2.ಯಶಿಕಾ ಆರ್.ಜೋಶಿ (ತಲಾ 5 ಪಾಯಿಂಟ್), 3.ಎಲ್.ವೈಷ್ಣವಿ, 4.ಕೆ.ದೀಕ್ಷಾ, 5.ಆದ್ಯ ಪ್ರೇಮ್‌ಕುಮಾರ್ (ತಲಾ 4 ಪಾಯಿಂಟ್)
7 ವರ್ಷ: 1.ಕೆ.ಆರ್.ಗಾನಶ್ರೀ (5 ಪಾಯಿಂಟ್), 2.ಕೆ.ಆರ್.ಸಾರಾ, 3.ಎಸ್.ಆರ್.ಅಪೇಕ್ಷಾ, 4.ಧೃತಿ ಮಧುಸೂದನ್, 5.ಅನ್ವಿತಾ ಎಸ್.ಕುಮಾರ್ (ಎಲ್ಲರೂ 4 ಪಾಯಿಂಟ್)
ವೆಟರನ್ ವಿಭಾಗ: ಟಿ.ವಿ.ವೆಂಕಟೇಶ್ ಉಪಾಧ್ಯಾಯ (6.5 ಪಾಯಿಂಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.