ADVERTISEMENT

ಶಿಶು ಮರಣ ಪ್ರಮಾಣ ಹೆಚ್ಚಳ: ಡಾ.ಎಂ.ಜಯರಾಮ್

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2023, 3:20 IST
Last Updated 26 ಸೆಪ್ಟೆಂಬರ್ 2023, 3:20 IST
ಮಾನಸಗಂಗೋತ್ರಿಯ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ‘ಮಕ್ಕಳ ಸಂವಹನ ನ್ಯೂನತೆ ಗುರುತಿಸುವಿಕೆ ಮತ್ತು ಮಧ್ಯಸ್ಥಿಕೆ’ ಕುರಿತು ಸೋಮವಾರ ಆರಂಭವಾದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಡಾ.ಎಂ.ಜಯರಾಮ್ ಉದ್ಘಾಟಿಸಿದರು. ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಡಾ.ಎಸ್.ಎನ್. ಪ್ರಶಾಂತ್, ಪ್ರೊ.ಎಂ.ಸಂದೀಪ್, ಪ್ರಭಾರ ನಿರ್ದೇಶಕಿ ಪಿ.ಮಂಜುಳಾ ಇದ್ದರು

ಮೈಸೂರು: ‘ದೇಶದಲ್ಲಿ 35 ಲಕ್ಷ ಶಿಶುಗಳು ಅವಧಿಗೂ ಮುನ್ನ ಜನಿಸುತ್ತಿದ್ದು, ಹಲವು ನ್ಯೂನತೆಗೆ ಒಳಗಾಗುತ್ತಿವೆ. ಶಿಶುಮರಣ ಪ್ರಮಾಣವೂ ಹೆಚ್ಚುತ್ತಿದೆ’ ಎಂದು ಸಂಪನ್ಮೂಲ ವ್ಯಕ್ತಿ ಡಾ.ಎಂ.ಜಯರಾಮ್ ಆತಂಕ ವ್ಯಕ್ತಪಡಿಸಿದರು.

ಮಾನಸಗಂಗೋತ್ರಿಯ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ‘ಮಕ್ಕಳ ಸಂವಹನ ನ್ಯೂನತೆ ಗುರುತಿಸುವಿಕೆ ಮತ್ತು ಮಧ್ಯಸ್ಥಿಕೆ’ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿ, ‘ಶಿಶುಗಳ ಸಂವಹನವನ್ನು ಆರಂಭದಲ್ಲೇ ಗುರುತಿಸದಿರುವುದು, ಚಿಕಿತ್ಸೆ ನೀಡದಿರುವುದು ಶಿಶು ಮರಣಕ್ಕೆ ಕಾರಣವಾಗಿದೆ,’ ಎಂದರು.

‘ನವಜಾತ ಶಿಶು ಜನನವಾದ ನಂತರ ಬೆಳವಣಿಗೆಯನ್ನು ಪೋಷಕರು ಗಮನಿಸಬೇಕು. ವೃತ್ತಿ ಜೀವನಕ್ಕಾಗಿ ಮಕ್ಕಳ ಜೀವ ಬಲಿಕೊಡಬಾರದು. ಅಂಗವಿಕಲತೆ ಹೊಂದಿರುವ ಮಗುವನ್ನು ಸ್ಕ್ರೀನಿಂಗ್ ಮಾಡಬೇಕು. ಬಹುಬೇಗ ಗುರುತಿಸಿದರೆ ಮಗುವಿನ ಚಿಕಿತ್ಸೆಗೆ ತಗುಲುವ ವೆಚ್ಚ ಕಡಿಮೆ ಆಗುತ್ತದೆ’ ಎಂದು ಹೇಳಿದರು.

ADVERTISEMENT

ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಡಾ.ಎಸ್.ಎನ್. ಪ್ರಶಾಂತ್, ಪ್ರೊ.ಎಂ.ಸಂದೀಪ್, ಪ್ರಭಾರ ನಿರ್ದೇಶಕಿ ಪಿ.ಮಂಜುಳಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.