ಮೈಸೂರು: ಇಲ್ಲಿನ ಕೆಆರ್‌ಎಸ್ ರಸ್ತೆಯ ರೈಲ್ವೆ ವಸತಿ ಗೃಹದ ಆವರಣದಲ್ಲಿ ಸೋರಿಕೆಯಾಗಿದ್ದ ಕ್ಲೋರಿನ್ ಅನಿಲ ಸಿಲಿಂಡರ್ ಅನ್ನು ಮಂಗಳವಾರ ಚಿಕ್ಕಮಗಳೂರಿಗೆ ಸ್ಥಳಾಂತರ ಮಾಡಲಾಗಿದೆ.
2015ರಲ್ಲಿ ಚಿಕ್ಕಮಗಳೂರಿನ ನೊರೊನಾ ಏಜೆನ್ಸಿ ಈ ಸಿಲಿಂಡರ್ ಅನ್ನು ಕೊಳವೆ ಬಾವಿ ನೀರಿನ ಶುದ್ದೀಕರಣಕ್ಕೆಂದು ಅಳವಡಿಸಿತ್ತು. ಈಗ ಅದೇ ಏಜೆನ್ಸಿಗೆ ವಿಲೇವಾರಿ ಮಾಡಲು ನೀಡಲಾಗಿದೆ.
ಕಳೆದೆರಡು ವರ್ಷಗಳ ಹಿಂದೆ ರೈಲ್ವೆ ವಸತಿಗೃಹಗಳಿಗೆ ನದಿಮೂಲದ ನೀರನ್ನು ಸರಬರಾಜು ಮಾಡಲು ಆರಂಭಿಸಿದ ನಂತರ ಈ ಸಿಲಿಂಡರ್ ಅನುಪಯುಕ್ತಗೊಂಡಿತ್ತು.
ಸೋಮವಾರವಷ್ಟೇ ಈ ಸಿಲಿಂಡರ್‌ನಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿ 69ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಇದರಿಂದ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿತ್ತು. ಸದ್ಯ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಬಹುತೇಕ ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.