ADVERTISEMENT

ಹೋಟೆಲ್‌ಗೆ ಕೈಗಾರಿಕೆ ಸ್ಥಾನಮಾನ: ಸಿಎಂ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2023, 14:14 IST
Last Updated 23 ಡಿಸೆಂಬರ್ 2023, 14:14 IST
<div class="paragraphs"><p>ಮೈಸೂರಿನಲ್ಲಿ ಶನಿವಾರ ನಡೆದ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ 80 ವರ್ಷ ವಯಸ್ಸು ಪೂರೈಸಿದ ಹೋಟೆಲ್‌ ಉದ್ಯಮಿಗಳಾದ ಪುಟ್ಟಸ್ವಾಮಿ, ಗೋವಿಂದೇಗೌಡ, ಕೆಂಚಪ್ಪ, ಪಿ.ಸಿ.ನಾಗಣ್ಣ ಹಾಗೂ ಪಿ.ಎಸ್. ಗೋಪಾಲಕೃಷ್ಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ&nbsp;ಸನ್ಮಾನಿಸಿದ</p></div>

ಮೈಸೂರಿನಲ್ಲಿ ಶನಿವಾರ ನಡೆದ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ 80 ವರ್ಷ ವಯಸ್ಸು ಪೂರೈಸಿದ ಹೋಟೆಲ್‌ ಉದ್ಯಮಿಗಳಾದ ಪುಟ್ಟಸ್ವಾಮಿ, ಗೋವಿಂದೇಗೌಡ, ಕೆಂಚಪ್ಪ, ಪಿ.ಸಿ.ನಾಗಣ್ಣ ಹಾಗೂ ಪಿ.ಎಸ್. ಗೋಪಾಲಕೃಷ್ಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದ

   

ಮೈಸೂರು: ‘20ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಒದಗಿಸಿರುವ ಹೋಟೆಲ್‌ಗಳಿಗೆ ಕೈಗಾರಿಕೆಯ ಸ್ಥಾನಮಾನ ನೀಡಲು ಕ್ರಮ ವಹಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಇಲ್ಲಿನ ವಿಜಯನಗರದ ಬಂಟರ ಭವನದಲ್ಲಿ ಶನಿವಾರ ನಡೆದ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಹೋಟೆಲ್ ಮಾಲೀಕರ ಸಂಘದವರ ಮನವಿಗೆ ಅವರು ಸ್ಪಂದಿಸಿದರು.

ADVERTISEMENT

‘ಪ್ರವಾಸೋದ್ಯಮ ಬೆಳೆಯಲು ಹೋಟೆಲ್ ಉದ್ಯಮ ಬಹಳ ಸಹಕಾರಿಯಾಗಿದೆ. ಈ ಉದ್ಯಮದ ಬೆಳವಣಿಗೆಗೆ ಎಲ್ಲ ರೀತಿಯ ಸಹಕಾರ ಕೊಡಲಾಗುವುದು. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳಿಂದ ಆಗಿರುವ ಅನುಕೂಲಗಳ ಬಗ್ಗೆ ಹೋಟೆಲ್‌ ಮಾಲೀಕರು ಹಾಗೂ ಸಂಘದವರು ಪ್ರಚಾರ ಮಾಡಬೇಕು’ ಎಂದು ಕೋರಿದರು.

‘ಶಕ್ತಿ’ ಯೋಜನೆಯಿಂದ ಪ್ರವಾಸೋದ್ಯಮ ಹಾಗೂ ಹೋಟೆಲ್ ಉದ್ಯಮ ವೃದ್ಧಿಯಾಗುತ್ತಿದೆ. ಇದರಿಂದ, ಸರ್ಕಾರಕ್ಕೆ ತೆರಿಗೆಯೂ ಬರುತ್ತದೆ ಹಾಗೂ ರಾಜ್ಯದ ಆದಾಯವೂ ಹೆಚ್ಚುತ್ತದೆ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.