ADVERTISEMENT

ಮೈಸೂರು: ಸ್ನೇಹಮಯಿ ಕೃಷ್ಣ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 21:30 IST
Last Updated 16 ಅಕ್ಟೋಬರ್ 2024, 21:30 IST
ಮೈಸೂರು ಲೋಕಾಯುಕ್ತ ಕಚೇರಿಗೆ ಬುಧವಾರ ನೀಡಿದ ದೂರಿನ ಪ್ರತಿಯನ್ನು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಪ್ರದರ್ಶಿಸಿದರು. ಮುಖಂಡ ಗಿರೀಶ್, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ವಕ್ತಾರ ಮಹೇಶ್‌ ಜೊತೆಗಿದ್ದರು– ಪ್ರಜಾವಾಣಿ ಚಿತ್ರ
ಮೈಸೂರು ಲೋಕಾಯುಕ್ತ ಕಚೇರಿಗೆ ಬುಧವಾರ ನೀಡಿದ ದೂರಿನ ಪ್ರತಿಯನ್ನು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಪ್ರದರ್ಶಿಸಿದರು. ಮುಖಂಡ ಗಿರೀಶ್, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ವಕ್ತಾರ ಮಹೇಶ್‌ ಜೊತೆಗಿದ್ದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ಲೋಕಾಯುಕ್ತ ಅಧಿಕಾರಿಗಳನ್ನು ಬ್ಲಾಕ್‌ಮೇಲ್‌ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು, ಮುಡಾ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಬಂಧಿಸಬೇಕು’ ಎಂದು ಒತ್ತಾಯಿಸಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಇಲ್ಲಿನ ಲೋಕಾಯುಕ್ತ ಎಸ್‌.ಪಿ. ಟಿ.ಜೆ. ಉದೇಶ್ ಅವರಿಗೆ ಬುಧವಾರ ದೂರು ಸಲ್ಲಿಸಿದರು.

‘ಕೃಷ್ಣ ಪ್ರತಿ ದಿನವೂ ಲೋಕಾಯುಕ್ತ ಅಧಿಕಾರಿಗಳು–ಸಿಬ್ಬಂದಿ ವಿರುದ್ದ ಹೇಳಿಕೆ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಅಧಿಕಾರಿಗಳು ಯಾರ ಒತ್ತಡಕ್ಕೂ ಒಳಗಾಗದೆ ತನಿಖೆ ನಡೆಸಲು ಬಿಡುತ್ತಿಲ್ಲ. ಹೀಗಾಗಿ ಅವರ ವಿರುದ್ಧ ನ್ಯಾಯಾಲಯದ ಗಮನಕ್ಕೆ ತಂದು ದೂರು ದಾಖಲಿಸಬೇಕು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದನ್ನು ಮುಡಾ ಕಚೇರಿಯ ಮೂಲ ದಾಖಲೆಗಳೊಂದಿಗೆ ಸೇರಿಸುತ್ತಿದ್ದು, ಅದರ ಬಗ್ಗೆಯೂ ಗಮನಹರಿಸಬೇಕು’ ಎಂದು ಕೋರಿದರು.

ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ಮುಖಂಡರಾದ ಮಹೇಶ್‌, ಗಿರೀಶ್‌ ಜೊತೆಗಿದ್ದರು.

ADVERTISEMENT

ದಾಖಲೆ ಇದ್ದರೆ ನೀಡಿ:

ತಮ್ಮ ವಿರುದ್ಧ ದೂರಿನ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸ್ನೇಹಮಯಿ ಕೃಷ್ಣ, ‘ಎಂ.ಲಕ್ಷ್ಮಣ ತಾಕತ್ತಿದ್ದರೆ ದಾಖಲೆ ಮುಂದಿಟ್ಟುಕೊಂಡು ಮಾತನಾಡಲಿ’ ಎಂದರು.

‘ಈ ಬೆದರಿಕೆಗೆ ಹೆದರುವುದಿಲ್ಲ. ₹100 ಕೋಟಿಗೆ ನಾನು ಬೇಡಿಕೆ ಇಟ್ಟಿದ್ದೇನೆ ಎಂದು ಈ ಹಿಂದೆ ಆರೋಪಿಸಿದ್ದರು. ಆದರೆ, ಅದಕ್ಕೆ ದಾಖಲೆ ನೀಡಿಲ್ಲ. ಈಗ ನನ್ನ ವಿರುದ್ಧದ ನೀಡಿರುವ ದೂರನ್ನು ನ್ಯಾಯಾಲಯದ ಗಮನಕ್ಕೆ ತರುತ್ತೇನೆ. ಮುಂದಿನ ದಿನಗಳಲ್ಲಿ ಲಕ್ಷ್ಮಣಗೂ ಮುಡಾ ಕಂಟಕ ಎದುರಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.