ADVERTISEMENT

ಡಿಸೆಂಬರ್‌ 1ರಂದು ಬಿಜೆಪಿ ಕಚೇರಿಗೆ ಕಾಂಗ್ರೆಸ್ ನಿಯೋಗ: ಬಿ.ಜೆ. ವಿಜಯ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 14:02 IST
Last Updated 21 ನವೆಂಬರ್ 2024, 14:02 IST
<div class="paragraphs"><p>ಬಿ.ಜೆ. ವಿಜಯ್‌ಕುಮಾರ್</p></div>

ಬಿ.ಜೆ. ವಿಜಯ್‌ಕುಮಾರ್

   

ಮೈಸೂರು: ‘ವಕ್ಫ್‌ ಆಸ್ತಿ ಕುರಿತು ಬಿಜೆಪಿಯವರು ಸುಳ್ಳು ಹೇಳುತ್ತಿರುವುದನ್ನು ಸಾಬೀತುಪಡಿಸಬೇಕೆಂದು ಆಗ್ರಹಿಸಿ ಹಾಗೂ ಬಿಪಿಎಲ್ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರ ನಿಗಪಡಿಸಿರುವ ಮಾನದಂಡಗಳ ಬಗ್ಗೆ ದಾಖಲೆಗಳ ಸಹಿತ ಚರ್ಚೆ ನಡೆಸಲು ಕಾಂಗ್ರೆಸ್ ನಿಯೋಗವು ಡಿ.1ರಂದು ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಗೆ ಭೇಟಿ ನೀಡಲಿದೆ’ ಎಂದು ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್ ತಿಳಿಸಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅಂದು ಮಧ್ಯಾಹ್ನ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹಾಗೂ ಮುಖಂಡರು ದಾಖಲೆಗಳೊಂದಿಗೆ ಹೋಗುತ್ತೇವೆ. ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಿಗಬೇಕು’ ಎಂದರು.

ADVERTISEMENT

‘ಹಿಂದೆಲ್ಲಾ ನಾವು, ಆ ಪಕ್ಷದವರನ್ನು ಚರ್ಚೆಗೆ ಕರೆಯುತ್ತಿದ್ದೆವು. ಅವರು ಬರಲಿಲ್ಲ. ಈಗ ನಾವೇ ಅಲ್ಲಿಗೆ ಹೋಗಲಿದ್ದೇವೆ. ಪಕ್ಷದಿಂದ ಪತ್ರವನ್ನೂ ಬರೆಯುತ್ತೇನೆ. ಅವರು ಬಾರದಿದ್ದರೆ, ತಮ್ಮ ಆರೋಪಗಳು ಸುಳ್ಳು ಎಂದು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

‘ಡಿಸೆಂಬರ್ 9ರಿಂದ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ, ನಾವು ನೀಡುವ ದಾಖಲೆಗಳೊಂದಿಗೆ ಬಿಜೆಪಿಯವರು ಚರ್ಚಿಸಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ‌ವಿಚಾರದಲ್ಲಿ ದಿವಾಳಿಯಾಗಿದ್ದಾರೆ ಎಂಬುದನ್ನು ಅಶೋಕ ತಿಳಿಸಲಿ. ನಾವು ನೋಡಿರುವ ಅತ್ಯಂತ ದುರ್ಬಲ ವಿರೋಧಪಕ್ಷದ ನಾಯಕರವರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.