ತಿ.ನರಸೀಪುರ: ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರಿಂದ ಪಕ್ಷದ ಮುಖಂಡರು ಪಟ್ಟಣದ ವಿದ್ಯೋದಯ ವೃತ್ತದಲ್ಲಿ ಶನಿವಾರ ವಿಜಯೋತ್ಸವ ಆಚರಿಸಿದರು.
ಕಾಂಗ್ರೆಸ್ ಮೈಸೂರು ಜಿಲ್ಲಾ ಪದವೀಧರ ಹಾಗೂ ಶಿಕ್ಷಕರ ಘಟಕದ ಅಧ್ಯಕ್ಷ ಎಂ. ರಮೇಶ್ ಮಾತನಾಡಿ, ‘ಸುಳ್ಳು, ಅಪಪ್ರಚಾರದ ಪಾದಯಾತ್ರೆ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದ್ದ ಬಿಜೆಪಿ– ಜೆಡಿಎಸ್ ಪಕ್ಷದವರ ಆಟಕ್ಕೆ ಮೂರು ಕ್ಷೇತ್ರಗಳ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ರಾಜ್ಯದ ಜನರು ಅಭಿವೃದ್ಧಿ ಬಯಸಿರುವುದು ಸಾಬೀತಾಗಿದೆ. ಡಿ.ಕೆ.ಶಿವಕುಮಾರ್ ಅವರ ಶಕ್ತಿ ಕುಗ್ಗಿಸುವುದಾಗಿ ಹೇಳಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ’ ಎಂದರು.
ವಿಜಯೋತ್ಸವದಲ್ಲಿ ಪುರಸಭಾ ಅಧ್ಯಕ್ಷೆ ವಸಂತಾ ಶ್ರೀಕಂಠ, ಸದಸ್ಯ ಮಂಜು (ಬಾದಾಮಿ), ಪಕ್ಷದ ಮುಖಂಡರಾದ ಮನ್ನೆಹುಂಡಿ ಮಹೇಶ್, ಹೆಳವರಹುಂಡಿ ಅರುಣ್ ಗೌಡ, ಗರ್ಗೇಶ್ವರಿ ಹಾಳೇಗೌಡ, ಮುಸುವಿನಕೊಪ್ಪಲು ನಾಗೇಶ್, ಮಹದೇವಣ್ಣ, ಬಿ.ಪ್ರದೀಪ್, ಮಹೇಶ್, ಕೇತಹಳ್ಳಿ ಸಿದ್ಧಶೆಟ್ಟಿ, ಅಕ್ಕೂರು ರಾಚೇಗೌಡ, ಬೈರಾಪುರ ರಂಗಸ್ವಾಮಿ, ಕೆಂಪಯ್ಯನಹುಂಡಿ ಸ್ವಾಮಿ, ಮೋಹನ್, ಪ್ರಸಾದ್, ಲೋಹಿತ್, ದೇವರಾಜು, ಮಂಜುನಾಥ್, ಶಿವಶಂಕರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.