ADVERTISEMENT

ಮದ್ಯ ಖರೀದಿಗಾಗಿ ನದಿಯಲ್ಲಿ ಈಜಿ ಕರ್ನಾಟಕಕ್ಕೆ ಬರುತ್ತಿದ್ದಾರೆ ಕೇರಳಿಗರು

​ಪ್ರಜಾವಾಣಿ ವಾರ್ತೆ
Published 27 ಮೇ 2020, 10:01 IST
Last Updated 27 ಮೇ 2020, 10:01 IST
ಮದ್ಯ (ಪ್ರಾತಿನಿಧಿಕ ಚಿತ್ರ)
ಮದ್ಯ (ಪ್ರಾತಿನಿಧಿಕ ಚಿತ್ರ)   

ಮೈಸೂರು: ಕೇರಳದಲ್ಲಿ ಕೊರೊನಾವೈರಸ್ ಲಾಕ್‌ಡೌನ್ ಮುಂದುವರಿದಿದ್ದು ಅಲ್ಲಿ ಇನ್ನೂ ಮದ್ಯದಂಗಡಿಗಳು ತೆರೆದಿಲ್ಲ. ಹೀಗಿರುವಾಗ ಕರ್ನಾಟಕ- ಕೇರಳ ಗಡಿಭಾಗದಲ್ಲಿರುವ ಜನರು ಕಪಿಲಾ ನದಿಯಲ್ಲಿ ಈಜಿ ಕರ್ನಾಟಕಕ್ಕೆ ಬಂದು ಮದ್ಯ ಖರೀದಿಸುತ್ತಿದ್ದಾರೆ.

ಕೇರಳದ ವಯನಾಡ್ ಜಿಲ್ಲೆಯಲ್ಲಿ ಹುಟ್ಟುವ ಕಪಿಲಾ ನದಿ ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ತಾಲೂಕಿನಲ್ಲಿ ಹರಿಯುತ್ತೆ. ಈ ನದಿಯಲ್ಲಿ ಈಜಿ ಕೆಲವು ಮಂದಿ ಕರ್ನಾಟಕಕ್ಕೆ ಬರುತ್ತಿದ್ದಾರೆ.ಕೆಲವರು ನದಿಯಲ್ಲಿ ಈಜಿ ಕರ್ನಾಟಕಕ್ಕೆ ಬಂದು ಮದ್ಯ ಖರೀದಿಸಿ ಹೋಗುತ್ತಿದ್ದಾರೆ ಸ್ಥಳೀಯರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT