ADVERTISEMENT

ಮೈಸೂರಿನಲ್ಲಿ ಪಿಸಿಬಿ ಘಟಕ ಸ್ಥಾಪನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 8:51 IST
Last Updated 20 ಸೆಪ್ಟೆಂಬರ್ 2024, 8:51 IST

ಮೈಸೂರು: ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡಲು ಹಾಗೂ ಉದ್ಯೋಗ ಸೃಷ್ಟಿಸಲು ನಗರದಲ್ಲಿ ದೇಶದ ಮೊದಲ ಪಿಸಿಬಿ (ಪ್ರಿಂಟೆಡ್‌ ಸರ್ಕಿಟ್‌ ಬೋರ್ಡ್‌) ಮತ್ತು ಸಪ್ಲೈ ಚೈನ್‌ ಕ್ಲಸ್ಟರ್ ಸ್ಥಾಪಿಸಲಾಗುತ್ತಿದೆ.

ನಗರದ ಇನ್ಪೊಸಿಸ್‌ ಕ್ಯಾಂಪಸ್‌ನಲ್ಲಿ ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌ (ಕೆಡಿಇಎಂ) ‘ಬಿಯಾಂಡ್‌ ಬೆಂಗಳೂರು’ ಅಭಿಯಾನದಡಿ ಗುರುವಾರ ಆಯೋಜಿಸಿದ್ದ ‘ದಿ ಬಿಗ್‌ ಟೆಕ್ ಶೋ’ನಲ್ಲಿ ಎಲೆಕ್ಟ್ರಾನಿಕ್ಸ್, ಐ.ಟಿ, ಬಿ.ಟಿ, ವಿಜ್ಞಾನ ಹಾಗೂ  ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆಯನ್ನು ಓದಲಾಯಿತು.

‘ಪಿಸಿಬಿ, ಸಪ್ಲೈ ಚೈನ್‌ ಕ್ಲಸ್ಟರ್‌ ಸ್ಥಾಪನೆ ಆಗುತ್ತಿದ್ದಂತೆ ದೇಶದ ಸಿಲಿಕಾನ್‌ ಸಿಟಿಯಾಗಿ ಮೈಸೂರು ಹೊರಹೊಮ್ಮಲಿದೆ’ ಎಂದು ತಿಳಿಸಲಾಯಿತು.

ADVERTISEMENT

‘ರಾಜ್ಯದಲ್ಲಿ ಹೊಸ ಇಎಸ್‌ಡಿಎಂ (ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಆ್ಯಂಡ್‌ ಮ್ಯಾನುಫ್ಯಾಕ್ಚರಿಂಗ್‌) ನೀತಿಯನ್ನು ಜಾರಿಗೊಳಿಸಲಾಗುವುದು. ಬಿಯಾಂಡ್‌ ಬೆಂಗಳೂರು ಅಭಿಯಾನದಡಿ ಹೂಡಿಕೆ ಮಾಡುವ ನವೋದ್ಯಮಗಳಿಗೆ ಸರ್ಕಾರವೇ ಮೊದಲ ಗ್ರಾಹಕ ಆಗಲಿದೆ ಎಂದು ತಿಳಿಸಿದ್ದಾರೆ’ ಎಂದು ಪ್ರಕಟಿಸಲಾಯಿತು.

ಐ,ಟಿ, ಬಿ.ಟಿ ಇಲಾಖೆಯ ಕಾರ್ಯದರ್ಶಿ ಏಕ್‌ರೂಪ್‌ ಕೌರ್‌ ಮಾತನಾಡಿ, ‘ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿಯ (ಜಿಸಿಸಿ) ಕರಡು ಪ್ರತಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗುವುದು. ಹೊಸ ನೀತಿಯು ಕೌಶಲ ತರಬೇತಿ, ಸಂಶೋಧನೆ ಹಾಗೂ ಅಭಿವೃದ್ಧಿಗೆ ತಳಹದಿಯಾಗಿದೆ. ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.