ಮೈಸೂರು: ‘ಐ ಮಾನಿಟರಿ ಅಡ್ವೈಸರಿ (ಐಎಂಎ) ಜುವೆಲ್ಸ್ ಕಂಪನಿ’ಯಲ್ಲಿ ಹಣ ತೊಡಗಿಸಿ ಮೋಸ ಹೋಗಿರುವ, 1,053 ಮಂದಿ ಗುರುವಾರ ನಗರದ ವಿವಿಧ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಉದಯಗಿರಿ ಠಾಣೆಯೊಂದರಲ್ಲೇ 900 ದೂರುಗಳು ದಾಖಲಾಗಿವೆ.
‘ಗುರುವಾರ ಸಂಜೆ 6 ಗಂಟೆಯವರೆಗೆ 1,053 ದೂರುಗಳು ಬಂದಿವೆ. ವ್ಯಕ್ತಿಯೊಬ್ಬರು ₹ 25 ಲಕ್ಷ ಹೂಡಿಕೆ ಮಾಡಿದ್ದಾಗಿ ದೂರು ನೀಡಿದ್ದಾರೆ. ಈ ಎಲ್ಲ ದೂರುಗಳನ್ನು ಒಂದೇ ಎಫ್‌ಐಆರ್ ಆಗಿ ದಾಖಲಿಸಲಾಗುವುದು’ ಎಂದು ಡಿಸಿಪಿ ಮುತ್ತುರಾಜ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.