ADVERTISEMENT

ನೃತ್ಯ ಸಂತೋಷ ವ್ಯಕ್ತಪಡಿಸುವ ಕಲೆ: ಧನಂಜಯ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:30 IST
Last Updated 7 ಜುಲೈ 2024, 14:30 IST
ತಿ.ನರಸೀಪುರದಲ್ಲಿ ಮೆಘಾ ಸ್ಟಾರ್ ಡ್ಯಾನ್ಸ್ ಶಾಲೆಯಿಂದ ಶನಿವಾರ ಸಂಜೆ ನಡೆದ ಸೀಸನ್ 9ರ ವಾರ್ಷಿಕೋತ್ಸವ ಹಾಗೂ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಇನ್‌ಸ್ಪೆಕ್ಟರ್ ಧನಂಜಯ ಉದ್ಘಾಟಿಸಿದರು. ಲುಂಬಿಣಿ ಬುದ್ಧ ವಿಹಾರದ ಸುಮನಾಪಾಲ ಭಂತೇಜಿ, ಬಿಇಒ ಜಿ. ಶೋಭಾ ಭಾಗವಹಿಸಿದ್ದರು
ತಿ.ನರಸೀಪುರದಲ್ಲಿ ಮೆಘಾ ಸ್ಟಾರ್ ಡ್ಯಾನ್ಸ್ ಶಾಲೆಯಿಂದ ಶನಿವಾರ ಸಂಜೆ ನಡೆದ ಸೀಸನ್ 9ರ ವಾರ್ಷಿಕೋತ್ಸವ ಹಾಗೂ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಇನ್‌ಸ್ಪೆಕ್ಟರ್ ಧನಂಜಯ ಉದ್ಘಾಟಿಸಿದರು. ಲುಂಬಿಣಿ ಬುದ್ಧ ವಿಹಾರದ ಸುಮನಾಪಾಲ ಭಂತೇಜಿ, ಬಿಇಒ ಜಿ. ಶೋಭಾ ಭಾಗವಹಿಸಿದ್ದರು   

ತಿ.ನರಸೀಪುರ: ‘ನೃತ್ಯ ಎನ್ನುವುದು ಮನಸ್ಸಿನ ಸಂತೋಷದ ಭಾವನೆಯನ್ನು ವ್ಯಕ್ತಪಡಿಸುವ ಒಂದು ಕಲೆ’ ಎಂದು ಪಟ್ಟಣದ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಧನಂಜಯ ಅಭಿಪ್ರಾಯಪಟ್ಟರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಮೆಘಾ ಸ್ಟಾರ್ ಡ್ಯಾನ್ಸ್ ಶಾಲೆಯಿಂದ ಶನಿವಾರ ನಡೆದ ಸೀಸನ್ 9ರ ವಾರ್ಷಿಕೋತ್ಸವ ಹಾಗೂ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಸಾಮಾನ್ಯವಾಗಿ ಅವರಿಗೆ ಖುಷಿಯಾದಲ್ಲಿ ಕುಣಿದು ಕುಪ್ಪಳಿಸುತ್ತಾರೆ. ಅದೇ ಕುಣಿತ ಶಿಸ್ತುಬದ್ಧವಾಗಿ ಆದಲ್ಲಿ ನೃತ್ಯ ರೂಪ ಪಡೆಯುತ್ತದೆ. ಮಕ್ಕಳಿಗೆ ನೃತ್ಯದ ಜತೆಗೆ ಸಂಸ್ಕಾರ, ಶಿಸ್ತು ಕಲಿಸಿರುವುದು ಕೂಡ ಅಭಿನಂದನೀಯ. ಗ್ರಾಮೀಣ ಪ್ರತಿಭೆಗಳು ನೃತ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ’ ಎಂದು ಶುಭ ಹಾರೈಸಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಶೋಭಾ ಮಾತನಾಡಿ, ‘ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತೆಗೆಯಲು ಇಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆ. ಇಂದು ಟಿವಿಗಳಲ್ಲಿ ನಡೆಯುವ ರಿಯಾಲಿಟಿ ಶೋ ಗಳಲ್ಲಿ ತಮ್ಮ ನೃತ್ಯ ಪ್ರದರ್ಶನದ ಮೂಲಕ ಅನೇಕ ಗ್ರಾಮೀಣ ಪ್ರತಿಭೆಗಳು ಹೊರ ಹೊಮ್ಮಿವೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು. ಪೋಷಕರು ಸಹ ತಮ್ಮ ಮಕ್ಕಳ ಇಚ್ಛಾಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವಂತೆ’ ಅವರು ಕರೆ ನೀಡಿದರು.

ತಾಲ್ಲೂಕಿನ ನೆರಗ್ಯಾತನಹಳ್ಳಿ ಲುಂಬಿಣಿ ಬುದ್ಧ ವಿಹಾರದ ಸುಮನಾಪಾಲ ಭಂತೇಜಿ. ಬಿಜೆಪಿ ಮುಖಂಡ ಆಲಗೂಡ ರಂಗೂನಾಯಕ್, ಪುರಸಭಾ ಸದಸ್ಯ ಮೆಡಿಕಲ್ ನಾಗರಾಜು, ಆರೋಗ್ಯ ಇಲಾಖೆಯ ಸಿ.ಪ್ರಸನ್ನಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಬಿ. ಕುಮಾರಸ್ವಾಮಿ, ಶಿಕ್ಷಕ ಉತ್ತಂಬಳ್ಳಿ ನಾಗರಾಜು ಬಸ್ ಶ್ರೀನಿವಾಸ್, ಎಂ. ಮಂಜುನಾಥ್, ಕೆಂಚಪ್ಪ, ರಾಜೇಶ್. ಶಿವಣ್ಣ, ಪ್ರಭುಸ್ವಾಮಿ., ನಿಂಗರಾಜು, ಶಾಲೆಯ ನೃತ್ಯ ಮಾಸ್ಟರ್ ಎನ್. ರಘುನಂದನ್, ಜಾಕ್ಸನ್ ಶಿವು, ಭುವನ್, ಗೋಪಾಲರಾಜು, ಪ್ರೀತಂ, ಸಿಂಧು ರಕ್ಷಿತ, ವಿನುತಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.