ADVERTISEMENT

ದಸರಾ ಕ್ರೀಡಾಕೂಟ | ಈಜು: ಮಣಿಕಂಠ ‘ಚಿನ್ನದ ಮೀನು’

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 23:30 IST
Last Updated 4 ಅಕ್ಟೋಬರ್ 2024, 23:30 IST
<div class="paragraphs"><p>ದಸರಾ ಕ್ರೀಡಾಕೂಟದ ಈಜು ವಿಭಾಗದಲ್ಲಿ ಶುಕ್ರವಾರ ಮೂರು ಬಂಗಾರದ ಪದಕ ಗೆದ್ದ ದಾವಣಗೆರೆಯ ಎಲ್. ಮಣಿಕಂಠ </p></div>

ದಸರಾ ಕ್ರೀಡಾಕೂಟದ ಈಜು ವಿಭಾಗದಲ್ಲಿ ಶುಕ್ರವಾರ ಮೂರು ಬಂಗಾರದ ಪದಕ ಗೆದ್ದ ದಾವಣಗೆರೆಯ ಎಲ್. ಮಣಿಕಂಠ

   

–ಪ್ರಜಾವಾಣಿ ಚಿತ್ರ : ಅನೂಪ್ ರಾಘ್. ಟಿ.

ಮೈಸೂರು: ಚಾಮುಂಡಿ ವಿಹಾರ ಕ್ರೀಡಾ ಸಮುಚ್ಛಯದ ಈಜುಕೊಳದಲ್ಲಿ ಶುಕ್ರವಾರ ಮೀನಿನಂತೆ ಈಜಾಡಿದ ದಾವಣಗೆರೆಯ ಎಲ್. ಮಣಿಕಂಠ ಪುರುಷರ ವಿಭಾಗದಲ್ಲಿ ಮೂರು ಬಂಗಾರದ ಪದಕಗಳಿಗೆ ಕೊರಳೊಡ್ಡಿದರು.

ADVERTISEMENT

ಸಿ.ಎಂ. ಕಪ್‌ ದಸರಾ ಕ್ರೀಡಾಕೂಟದ ಅಂಗವಾಗಿ ನಡೆಯುತ್ತಿರುವ ಈಜು ಸ್ಪರ್ಧೆಯಲ್ಲಿ ಅವರು 100 ಮೀ. ಬ್ರೆಸ್ಟ್‌ ಸ್ಟ್ರೋಕ್‌, 100 ಮೀ. ಬಟರ್‌ಫ್ಲೈ, ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಅಗ್ರ ಸ್ಥಾನ ತಮ್ಮದಾಗಿಸಿಕೊಂಡು, 200 ಮೀ. ಬ್ಯಾಕ್‌ ಸ್ಟ್ರೋಕ್‌ನಲ್ಲಿ ಕಂಚಿಗೆ ಸಮಾಧಾನ ಪಟ್ಟರು.

ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ನೈಶಾ ಶೆಟ್ಟಿ ಹಾಗೂ ವಿ. ಹಿತಾಶಿ ತಲಾ ಎರಡು ಬಂಗಾರ ಗೆದ್ದರು.

ಈಜು ಫಲಿತಾಂಶ:


ಪುರುಷರು: 100 ಮೀ. ಬ್ರೆಸ್ಟ್‌ ಸ್ಟ್ರೋಕ್‌: ಎಲ್‌.ಮಣಿಕಂಠ (ದಾವಣಗೆರೆ. ಕಾಲ: 1ನಿ.11.40 ಸೆ.)–1, ಸ್ಮರಣ್‌ ಮಂಗಳೂರಕರ್ (ಬೆಳಗಾವಿ)–2, ರತನ್ ಗೌಡ ( ಹಾಸನ್‌)–3; 100 ಮೀ. ಬಟರ್‌ಫ್ಲೈ: ಎಲ್. ಮಣಿಕಂಠ (ದಾವಣಗೆರೆ, 1ನಿ.1.86 ಸೆ.)–1, ದರ್ಶನ್‌ (ಬೆಂಗಳೂರು)–2, ಸ್ವಯಂ ಕಾರೇಕರ್‌ (ಬೆಳಗಾವಿ)–3; 200 ಮೀ. ಬ್ಯಾಕ್‌ಸ್ಟ್ರೋಕ್‌: ಧವಲ್‌ ಹನುಮಣ್ಣನವರ್‌ (ಬೆಳಗಾವಿ, ಕಾಲ: 2ನಿ. 26.33 ಸೆ.), ವಫಿ ಅಬ್ದುಲ್‌ ಹಕೀಂ (ದಕ್ಷಿಣ ಕನ್ನಡ)–2, ಮಣಿಕಂಠ (ದಾವಣಗೆರೆ)–3; 400 ಮೀ. ಫ್ರೀಸ್ಟೈಲ್‌: ದರ್ಶನ್ (ಬೆಂಗಳೂರು. ಕಾಲ: 4ನಿ. 31.57 ಸೆ.)–1, ವಿ. ಧ್ರುವ (ಬೆಂಗಳೂರು)–2, ಸ್ಮರಣ್‌ ಮಂಗಳೂರಕರ್ (ಬೆಳಗಾವಿ)–3; ವೈಯಕ್ತಿಕ ಮೆಡ್ಲೆ: ಎಲ್.ಮಣಿಕಂಠ (ದಾವಣಗೆರೆ, 2ನಿ.21.34 ಸೆ.)–1, ಧೋನಿಶ್‌ (ಬೆಂಗಳೂರು)–2, ಸ್ಮರಣ್‌ ಮಂಗಳೂರಕರ್ (ಬೆಳಗಾವಿ)–3.

ಮಹಿಳೆಯರು: 100 ಮೀ. ಬ್ರೆಸ್ಟ್‌ಸ್ಟ್ರೋಕ್‌: ವಿ.ಹಿತಾಶಿ (ಬೆಂಗಳೂರು, ಕಾಲ: 1ನಿ. 21.90 ಸೆ.)–1, ರಿಷಿಕಾ (ಬೆಂಗಳೂರು)–2, ಸಮಿಯಾ ಮಾನ್ಸೆ (ಬೆಳಗಾವಿ)–3; 100 ಮೀ. ಬಟರ್‌ಫ್ಲೈ: ನೈಶಾ ಶೆಟ್ಟಿ  (ಬೆಂಗಳೂರು, ಕಾಲ: 1ನಿ.6.78 ಸೆ.)–1, ಹಿತಾಶಿ (ಬೆಂಗಳೂರು)–2, ಲಿಪಿಕಾ ದೇವ್‌ (ಚಿಕ್ಕಬಳ್ಳಾಪುರ)–3; 200 ಮೀ. ಬ್ಯಾಕ್‌ಸ್ಟ್ರೋಕ್‌: ನೈಶಾ ಶೆಟ್ಟಿ (ಬೆಂಗಳೂರು, ಕಾಲ: 2ನಿ.40.93 ಸೆ.)–1, ಪ್ರೀತಾ  (ಬೆಂಗಳೂರು)–2, ವೈಶಾಲಿ ಸಂಜಯ್‌ (ಬೆಳಗಾವಿ)–3; 400 ಮೀ. ಫ್ರೀಸ್ಟೈಲ್‌: ಶಮನ್ವಿ ಗೌಡ (ಬೆಂಗಳೂರು. ಕಾಲ: 4ನಿ.57.82 ಸೆ.)–1, ವಿ. ಪ್ರೀತಾ ( ಬೆಂಗಳೂರು)–2, ಲಿಪಿಕಾ ದೇವ್‌ (ಚಿಕ್ಕಬಳ್ಳಾಪುರ)–3; ವೈಯಕ್ತಿಕ ಮೆಡ್ಲೆ: ವಿ.ತಾಶಿ (ಬೆಂಗಳೂರು, ಕಾಲ: 2ನಿ.34.90 ಸೆ.)–1, ಲಿಪಿಕಾ ದೇವ್ (ಚಿಕ್ಕಬಳ್ಳಾಪುರ)–2, ಸಾಕ್ಷಿ ಸಂಗಮೇಶ್‌ (ಧಾರವಾಡ)–3.

ದಸರಾ ಕ್ರೀಡಾಕೂಟದ ಈಜು ವಿಭಾಗದಲ್ಲಿ ಶುಕ್ರವಾರ ಮೂರು ಬಂಗಾರದ ಪದಕ ಗೆದ್ದ ದಾವಣಗೆರೆಯ ಎಲ್. ಮಣಿಕಂಠ –ಪ್ರಜಾವಾಣಿ ಚಿತ್ರ : ಅನೂಪ್ ರಾಘ್. ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.