ADVERTISEMENT

ಸಾಲದ ಹೊರೆ: ಬಸ್ ಚಾಲಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 16:39 IST
Last Updated 10 ನವೆಂಬರ್ 2024, 16:39 IST

ಪ್ರಜಾವಾಣಿ ವಾರ್ತೆ

ಮೈಸೂರು: ಸಾಲದ ಕಿರುಕುಳದಿಂದ ಬೇಸತ್ತು ಕೆಎಸ್‌ಆರ್‌ಟಿಸಿ ಬಸ್ ಚಾಲಕ ವರುಣ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಲ್ಲಿನ ನೆಹರೂ ನಗರದ ನಿವಾಸಿ ಶ್ರೀಕಾಂತ ಯಲ್ಲಪ್ಪ ಬಾಲಂಗಾವಿ(39) ಮೃತ ಚಾಲಕ. ರಾಯಚೂರು ಮೂಲದ ಅವರು ನ.6ರಂದು ಮನೆಯಿಂದ ತೆರಳಿದ್ದರು. ತಾಲ್ಲೂಕಿನ ಕಿರಾಳು ಗ್ರಾಮದ ವರುಣ ಉಪ ಕಾಲುವೆಯಲ್ಲಿ ನ.9ರಂದು ಶವ ದೊರೆತಿದೆ.

ADVERTISEMENT

‘ಸ್ನೇಹಿತರಾದ ಗುರುರಾಜ ಉಪಾಸ್ ಮತ್ತು ಸುಭಾಷ್ ಬಳಿ ಸಾಲ ಮಾಡಿದ್ದು, ಹಣ ಮರುಪಾವತಿ ವಿಚಾರದಲ್ಲಿ ಗಲಾಟೆಯಾಗಿತ್ತು. ಇದರಿಂದ ರೋಸಿ ಹೋಗಿದ್ದ ಅವರು ನನ್ನ ಸಾವಿಗೆ ಗುರುರಾಜ ಉಪಾಸ್ ಮತ್ತು ಸುಭಾಷ್ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.