ADVERTISEMENT

ಸ್ಥಶಾನ ಭೂಮಿಗೆ ಆಗ್ರಹ: ಶಾಸಕರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 16:49 IST
Last Updated 22 ಆಗಸ್ಟ್ 2024, 16:49 IST
ಸ್ಥಶಾನದ ಭೂಮಿಗೆ ಆಗ್ರಹಿಸಿದ ಎಚ್.ಡಿ.ಕೋಟೆ ಪಟ್ಟಣದ ಸಿದ್ದಪ್ಪಾಜಿ ರಸ್ತೆ ಗ್ರಾಮಸ್ಥರು ಶಾಸಕ ಅನಿಲ್ ಚಿಕ್ಕಮಾದು ಅವರ ಕಾರು ತಡೆದು ಮುತ್ತಿಗೆ ಹಾಕಿ ಪ್ರಶ್ನಿಸಿದರು
ಸ್ಥಶಾನದ ಭೂಮಿಗೆ ಆಗ್ರಹಿಸಿದ ಎಚ್.ಡಿ.ಕೋಟೆ ಪಟ್ಟಣದ ಸಿದ್ದಪ್ಪಾಜಿ ರಸ್ತೆ ಗ್ರಾಮಸ್ಥರು ಶಾಸಕ ಅನಿಲ್ ಚಿಕ್ಕಮಾದು ಅವರ ಕಾರು ತಡೆದು ಮುತ್ತಿಗೆ ಹಾಕಿ ಪ್ರಶ್ನಿಸಿದರು   

ಎಚ್.ಡಿ.ಕೋಟೆ: ‘ಸ್ಮಶಾನ ಜಾಗ ಬಿಡಿಸಿಕೊಡಿ, ಇಲ್ಲದಿದ್ದರೆ ತಾಲ್ಲೂಕು ಆಡಳಿತ ಸೌಧಕ್ಕೆ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ’ ಎಂದು ಪಟ್ಟಣದ ಸಿದ್ದಪ್ಪಾಜಿ ರಸ್ತೆ ಗ್ರಾಮಸ್ಥರು ಶಾಸಕ ಅನಿಲ್ ಚಿಕ್ಕಮಾದು ಅವರ ಕಾರನ್ನು ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗ ತಡೆದು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಅನಿಲ್ ಚಿಕ್ಕಮಾದು ಅವರು ಗ್ರಾಮಸ್ಥರನ್ನು ಸಮಾಧಾನಪಡಿಸಿ ಸಮಸ್ಯೆ ಆಲಿಸಿದರು. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಅಧಿಕಾರಿಗಳೊಂದಿಗೆ ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿ ಮಾತನಾಡಿ, ‘ಈ ವಿಷಯವನ್ನು ನನ್ನ ಗಮನಕ್ಕೆ ನೀವು ತಂದಿಲ್ಲ, ಒಂದು ವಾರದೊಳಗೆ ಪ್ರಭಾವಿಗಳಿಂದ ಒತ್ತುವರಿಯಾಗಿರುವ ಸ್ಥಶಾನದ ಜಾಗ ಬಿಡಿಸಿ ಕೊಡಬೇಕು, ಇಲ್ಲದಿದ್ದಲ್ಲಿ ಗ್ರಾಮಸ್ಥರ ಜೊತೆಗೂಡಿ ನಾನು ಸಹ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಅಧಿಕಾರಿಗಳಿಗೆ ಗಡುವು ನೀಡಿ ಎಚ್ಚರಿಸಿದರು.

ADVERTISEMENT

ಗ್ರಾಮದ ಮುಖಂಡ ಲಾರಿ ಪ್ರಕಾಶ್ ಮಾತನಾಡಿ, ‘ಸರ್ಕಾರ ಸಿದ್ದಪ್ಪಾಜಿ ರಸ್ತೆ ಗ್ರಾಮಸ್ಥರ ಸ್ಮಶಾನಕ್ಕೆ ಜಾಗ ನೀಡಿದೆ. ಆದರೆ ಇಲ್ಲಿನ ಅಧಿಕಾರಿಗಳು ಅಳತೆ ಮಾಡಿ ಸ್ಮಶಾನದ ಜಾಗ ಬಿಡಿಸುತ್ತೇವೆ ಎಂದು ಹೇಳಿದ್ದರೂ ಇನ್ನೂ ಜಮೀನು ಬಿಡಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರ ಭರವಸೆ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು, 200ಕ್ಕೂ ಹೆಚ್ಚು ಜನರು ಫ್ರತಿಭಟನೆಯಲ್ಲಿದ್ದರು.

ಎಚ್.ಡಿ.ಕೋಟೆ ಪಟ್ಟಣದ ಸಿದ್ದಪ್ಪಾಜಿ ರಸ್ತೆ ಗ್ರಾಮಸ್ಥರೊಂದಿಗೆ ಶಾಸಕ ಅನಿಲ್ ಚಿಕ್ಕಮಾದು ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಕುಳಿತು ಸಭೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.