ADVERTISEMENT

ರಂಗಭೂಮಿ ನಿವೃತ್ತ ಕಲಾವಿದರಿಗೆ ₹10 ಸಾವಿರ ಪಿಂಚಣಿ ನೀಡಲು ಒತ್ತಾಯ

ರಂಗಭೂಮಿ ವೃತ್ತಿ ಕಲಾವಿದೆಯರ ಸಂಘದಿಂದ ಎಂ.ಎಸ್‌.ಗಾಯಿತ್ರಿ ನೆನಪಿನ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 15:59 IST
Last Updated 21 ಅಕ್ಟೋಬರ್ 2024, 15:59 IST
ಮೈಸೂರಿನ ಪುರಭವನದಲ್ಲಿ ಜಿಲ್ಲಾ ರಂಗಭೂಮಿ ವೃತ್ತಿ ಕಲಾವಿದರೆಯರ ಸಂಘದಿಂದ ನಡೆದ ಎಂ.ಎಸ್‌.ಗಾಯಿತ್ರಿ ನೆನಪಿನ ನಾಟಕೋತ್ಸವದಲ್ಲಿ ಎಸ್‌.ವಸಂತಾಕೃಷ್ಣ, ಕುರುಬೂರು ಶಾಂತಕುಮಾರ್, ಬಂಡಿಪಾಳ್ಯ ಗಿರೀಶ್, ಶ್ರೀನಿವಾಸ್, ಮಾಯಣ್ಣಗೌಡ ಭಾಗವಹಿಸಿದ್ದರು
ಮೈಸೂರಿನ ಪುರಭವನದಲ್ಲಿ ಜಿಲ್ಲಾ ರಂಗಭೂಮಿ ವೃತ್ತಿ ಕಲಾವಿದರೆಯರ ಸಂಘದಿಂದ ನಡೆದ ಎಂ.ಎಸ್‌.ಗಾಯಿತ್ರಿ ನೆನಪಿನ ನಾಟಕೋತ್ಸವದಲ್ಲಿ ಎಸ್‌.ವಸಂತಾಕೃಷ್ಣ, ಕುರುಬೂರು ಶಾಂತಕುಮಾರ್, ಬಂಡಿಪಾಳ್ಯ ಗಿರೀಶ್, ಶ್ರೀನಿವಾಸ್, ಮಾಯಣ್ಣಗೌಡ ಭಾಗವಹಿಸಿದ್ದರು   

ಮೈಸೂರು: ‘ರಂಗಭೂಮಿ ನಿವೃತ್ತ ಕಲಾವಿದರಿಗೆ ₹10 ಸಾವಿರ ಪಿಂಚಣಿ ನೀಡಬೇಕು ಹಾಗೂ ಜಿಲ್ಲಾ ರಂಗಭೂಮಿ ವೃತ್ತಿ ಕಲಾವಿದೆಯರ ಸಂಘದ ಕಾರ್ಯಕ್ರಮಕ್ಕಾಗಿ ವರ್ಷದಲ್ಲಿ ಒಂದು ವಾರ ಪುರಭವನ ಉಚಿತವಾಗಿ ನೀಡಬೇಕು’ ಎಂದು ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಅವರು ಸರ್ಕಾರವನ್ನು ಒತ್ತಾಯಿಸಿದರು.

ಮೈಸೂರು ಜಿಲ್ಲಾ ರಂಗಭೂಮಿ ವೃತ್ತಿ ಕಲಾವಿದೆಯರ ಸಂಘದಿಂದ ನಗರದ ಪುರಭವನದಲ್ಲಿ ಸೋಮವಾರ ನಡೆದ ಎಂ.ಎಸ್‌.ಗಾಯಿತ್ರಿ ನೆನಪಿನ ನಾಟಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಈಗ ನೀಡುತ್ತಿರುವ ₹7 ಸಾವಿರ ಪಿಂಚಣಿ ಗೌರವಯುತ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ರಂಗಭೂಮಿ ಕಲಾವಿದರು ಹಾಗೂ ರೈತರ ಬದುಕು ಒಂದೇ ರೀತಿಯದಾಗಿದ್ದು, ವಯಸ್ಸಾದ ಮೇಲೆ ಯಾವುದೇ ಆರ್ಥಿಕ, ಸಾಮಾಜಿಕ ಭದ್ರತೆಯಿಲ್ಲದೆ ಜೀವನ ನಡೆಸುತ್ತಿದ್ದಾರೆ. ರೈತರಿಗೂ ಪಿಂಚಣಿ ನೀಡುವಂತೆ ಕೇಂದ್ರ ಒತ್ತಾಯಿಸುತ್ತಿದ್ದೇವೆ’ ಎಂದರು.

ADVERTISEMENT

‘ಹಿಂದಿನ ಕಾಲದಲ್ಲಿ ಊರೂರು ತಿರುಗಿ, ನಾಟಕ ಮಾಡಿ ಜನರನ್ನು ರಂಜಿಸಿದ ಸಮುದಾಯ ಇಂದು ಸಂಕಷ್ಟದಲ್ಲಿದೆ. ಕಲಾವಿದರ ಅಗತ್ಯ ಸೌಲಭ್ಯಕ್ಕಾಗಿ ರೈತ ಸಂಘವೂ ಧ್ವನಿ ಎತ್ತುತ್ತದೆ. ಇಂದು ನಾಟಕ, ಸಿನಿಮಾ ಚಿತ್ರಮಂದಿರಗಳು ಮಾಯವಾಗುತ್ತಿವೆ. ಮೊಬೈಲ್ ಕ್ರಾಂತಿ ಮನುಷ್ಯನನ್ನು ವಿನಾಶಕ್ಕೆ ತಳ್ಳುತ್ತಿದೆ. ಸೃಜನಶೀಲ ಕಲೆಗೆ ಪ್ರೋತ್ಸಾಹ ನೀಡಲು ಎಲ್ಲರೂ ಮುಂದಾಗಬೇಕು’ ಎಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷರಾದ ಎಸ್‌.ವಸಂತಾಕೃಷ್ಣ, ಪ್ರಮುಖರಾದ ಮಾಯಣ್ಣ ಗೌಡ, ಚಲನಚಿತ್ರ ನಿರ್ಮಾಪಕ ಶ್ರೀನಿವಾಸ್‌, ಸಮಾಜ ಸೇವಕ ಬಂಡಿಪಾಳ್ಯ ಗಿರೀಶ್‌ ಪಾಲ್ಗೊಂಡರು.

ಶಿವಕೃಪಾ ಸಾಂಸ್ಕೃತಿಕ ವೇದಿಕೆಯಿಂದ ‘ಮೋಹಿನಿ ಭಸ್ಮಾಸುರ’ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.