ನಂಜನಗೂಡು: ‘ತಾಲ್ಲೂಕಿನ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಗುಜರಾತಿನ ಸಾಬರಮತಿ ಆಶ್ರಮದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.
ನಗರದ ಮಿನಿ ವಿಧಾನಸೌಧದಲ್ಲಿ ಶನಿವಾರ ನಡೆದ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಅವರು ಮಾತನಾಡಿದರು.
‘ಬದನವಾಳು ಖಾದಿ ಕೇಂದ್ರಕ್ಕೆ ಗಾಂಧಿ 2 ಬಾರಿ ಬಂದು ಹೋಗಿದ್ದರು. ಇಲ್ಲಿಗೆ 1927ರಲ್ಲಿ ಭೇಟಿ ಕೊಟ್ಟಿದ್ದರು. ಇಲ್ಲಿ ₹1 ಕೋಟಿ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಯೋಗ, ಜ್ಞಾನ ಕೇಂದ್ರ ಸ್ಥಾಪನೆ, ಪ್ರವಾಸಿಗರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು’ ಎಂದರು.
ಉಪ ತಹಶೀಲ್ದಾರ್ ಭೈರಯ್ಯ, ನಗರಸಭೆ ಅಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಹೊರಳವಾಡಿ ಮಹೇಶ್, ಮುಖಂಡರಾದ ಕುಂಬರಳ್ಳಿ ಸುಬ್ಬಣ್ಣ, ಚಿಕ್ಕರಂಗನಾಯ್ಕ, ಮಹದೇವಪ್ಪ, ಶಿವಣ್ಣ, ಶ್ರೀಕಂಠ, ಶಿವಣ್ಣ ಇದ್ದರು.
ಪಾದಯಾತ್ರೆ
ನಂಜನಗೂಡು ನಗರದಲ್ಲಿ ತಾಲ್ಲೂಕು ಕಾಂಗ್ರೆಸ್ ಪಕ್ಷದಿಂದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ಶನಿವಾರ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಲಾಯಿತು.
ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ ಮಾತನಾಡಿ, ‘ಗಾಂಧಿಯ ತತ್ವ ಆದರ್ಶಗಳನ್ನು ದೇಶದ ಯುವ ಜನತೆ ಮೈಗೂಡಿಸಿಕೊಳ್ಳಬೇಕು’ ಎಂದರು.
ಸ್ವಾತಂತ್ರ್ಯ ಹೋರಾಟಗಾರ ಶ್ರೀಕಂಠಯ್ಯ, ಸಾಹಿತಿ ಕಳಲೆ ಗುರುಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಕುರಹಟ್ಟಿ ಮಹೇಶ್, ಮುಖಂಡರಾದ ಶ್ರೀಕಂಠ ನಾಯಕ್, ಸೋಮೇಶ್, ಅಕ್ಬರ್ ಅಲೀಂ, ಗಂಗಾಧರ, ವಕೀಲ ಮಹೇಶ್, ಗಾಯತ್ರಿ, ಸೌಭಾಗ್ಯ, ಪುಷ್ಪಲತಾ, ಮುದ್ದುಮಾದಶೆಟ್ಟಿ, ಹಗಿನವಾಳು ಕೆಂಡಗಣ್ಣಪ್ಪ, ದೇವರಸನಹಳ್ಳಿ ಚೆಲುವಪ್ಪ, ಮುಖಂಡರಾದ ಹುರಾ ಮಾರುತಿ, ಶ್ರೀನಿವಾಸಮೂರ್ತಿ, ನಾಗೇಶ್ ರಾಜ್, ಚಿನ್ನಂಬಳ್ಳಿ ರಾಜು, ಗುರುಮಲ್ಲಪ್ಪ, ಬಸವಣ್ಣ, ಶಿವಪ್ಪದೇವರು, ಮಡುವಿನಹಳ್ಳಿ ಶಂಕರಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.