ADVERTISEMENT

ಮಸೀದಿ ತಾನಾಗಿ ಕುಸಿಯಿತೇ: ದೇವನೂರ ಮಹಾದೇವ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 20:40 IST
Last Updated 2 ಅಕ್ಟೋಬರ್ 2020, 20:40 IST
ದೇವನೂರ ಮಹಾದೇವ
ದೇವನೂರ ಮಹಾದೇವ   

ಮೈಸೂರು: ‘ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ ಆರೋಪಿಗಳನ್ನು ನ್ಯಾಯಾಲಯ ನಿರ್ದೋಷಿ ಎಂದಿದೆ. ಹಾಗಾದರೆ, ಮಸೀದಿ ತನ್ನಷ್ಟಕ್ಕೆ ತಾನೇ ಕುಸಿಯಿತೇ? ಸತ್ಯ ಎಲ್ಲಿದೆ’ ಎಂದು ಸಾಹಿತಿ ದೇವನೂರ ಮಹಾದೇವ ಪ್ರಶ್ನಿಸಿದರು.

ಜನಾಂದೋಲನಗಳ ಮಹಾಮೈತ್ರಿ ವತಿಯಿದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಎಲ್‌.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರು ‘ತೀರ್ಪಿನಿಂದ ತುಂಬಾ ಖುಷಿಯಾಯಿತು’ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಇಬ್ಬರನ್ನೂ ಮೋದಿ ಮೂಲೆಗುಂಪು ಮಾಡಿದ್ದರಿಂದ ಕೊನೆಗಾಲದಲ್ಲಿ ಖುಷಿಯನ್ನು ಕಳೆದುಕೊಂಡು ಬಿಟ್ಟಿದ್ದರು’ ಎಂದರು.

ದುಃಖ ಆಗುತ್ತೆ, ಕೋಪ ಬರುತ್ತೆ: ‘ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಘಟನೆಯಿಂದ ತುಂಬಾ ದುಃಖ ಆಗುತ್ತೆ, ಕೋಪ ಬರುತ್ತದೆ, ಹತಾಶೆಯೂ ಆಗುತ್ತದೆ’ ಎಂದರು.

ADVERTISEMENT

‘ಮೃತದೇಹವನ್ನು ಮಧ್ಯರಾತ್ರಿ ಸುಡುವುದು ಬೇಡ ಎಂದು ಯುವತಿಯ ತಾಯಿ ಪರಿಪರಿಯಾಗಿ ಬೇಡಿಕೊಂಡರೂ ಪೊಲೀಸರು ಧಿಕ್ಕರಿಸಿ ಶವಸಂಸ್ಕಾರ ಮಾಡಿದ್ದಾರೆ. ಮುಂದೆ ಶವ ಪರೀಕ್ಷೆಯ ಅನಿವಾರ್ಯತೆ ಎದುರಾದರೆ ಯಾವ ಸಾಕ್ಷ್ಯಗಳೂ ಸಿಗಬಾರದು ಎಂದು ಸುಟ್ಟುಹಾಕಿದ್ದಾರೆ. ಇಡೀ ಮಾನವ ಕುಲಕ್ಕೆ ಅವಮಾನ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.