ADVERTISEMENT

ನಂಜನಗೂಡು: ರೈತರಿಗೆ ₹1.20 ಕೋಟಿ ಮೊತ್ತದ ಸಲಕರಣೆ ವಿತರಣೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 15:12 IST
Last Updated 16 ನವೆಂಬರ್ 2024, 15:12 IST
ನಂಜನಗೂಡಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ದೆರ್ಶನ್ ಧ್ರುವನಾರಾಯಣ ರೈತರಿಗೆ ಕೃಷಿ ಯಂತ್ರೋಪಕರಣ ವಿತರಣೆ ಮಾಡಿದರು
ನಂಜನಗೂಡಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ದೆರ್ಶನ್ ಧ್ರುವನಾರಾಯಣ ರೈತರಿಗೆ ಕೃಷಿ ಯಂತ್ರೋಪಕರಣ ವಿತರಣೆ ಮಾಡಿದರು   

ನಂಜನಗೂಡು: ತಾಲ್ಲೂಕಿನ 132 ರೈತರಿಗೆ ₹1.20 ಕೋಟಿ ವೆಚ್ಚದಲ್ಲಿ ಚಾಪ್‌ ಕಟರ್‌, ಪವರ್‌ ಟಿಲ್ಲರ್‌, ರೋಟವೇಟರ್‌, ಲೇವಲರ್‌ ಮುಂತಾದ ಯಂತ್ರಗಳು ಹಾಗೂ ಕೃಷಿಗೆ ಸಂಬಂಧಿಸಿದ ಸಲಕರಣೆ ವಿತರಿಸಲಾಗಿದೆ ಎಂದು ಶಾಸಕ ದರ್ಶನ್‌ ದ್ರುವನಾರಾಯಣ ಹೇಳಿದರು.

ನಗರದ ಜೂನಿಯರ್‌ ಕಾಲೇಜ್‌ ಮೈದಾನದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣ ವಿತರಿಸಿ ಅವರು ನಂತರ ಮಾತನಾಡಿದರು.

ರಾಜ್ಯ ಸರ್ಕಾರ ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ₹ 30 ಕೋಟಿ ವೆಚ್ಚದಲ್ಲಿ 8,400 ಮಂದಿ ರೈತರಿಗೆ ಯಂತ್ರೋಪಕರಣ ವಿತರಣೆ ಮಾಡಲಾಗಿದೆ. ತಾಲ್ಲೂಕಿನಲ್ಲಿ ಕಡಿಮೆ ನೀರಿನಲ್ಲಿ ಅಧಿಕ ಇಳುವರಿ ಪಡೆಯಬಹುದಾದ ತುಂತುರು ನೀರಾವರಿ ಯೋಜನೆ ಉತ್ತೇಜಿಸಲು ಶೇ 90ರಷ್ಟು ಸಹಾಯಧನ ನೀಡಿ 50 ತುಂತುರು ನೀರಾವರಿ ಘಟಕ ವಿತರಿಸಲಾಗಿದೆ. ಯೋಜನೆಯಲ್ಲಿ ಫಲಾನುಭವಿ ರೈತರಿಗೆ ಒಟ್ಟು ₹49 ಲಕ್ಷ ಸರ್ಕಾರದ ಸಹಾಯ ದೊರೆತಿದೆ. ರೈತರು ಸರ್ಕಾರದ ಸವಲತ್ತು ಉಪಯೋಗಿಸಿಕೊಂಡು ಹೆಚ್ಚಿನ ತೋಟಗಾರಿಕೆ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದಲ್ಲಿ ತಾಲ್ಲೂಕು ಕಾಂಗ್ರೆಸ್‌ ಅಧ್ಯಕ್ಷ ಕುರಹಟ್ಟಿ ಮಹೇಶ್‌, ಕಳಲೆ ಕೇಶವಮೂರ್ತಿ, ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ಕರಳಪುರ ನಾಗರಾಜು, ಗಾಯಿತ್ರಿ ಮೋಹನ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ರವಿ, ಧನಂಜಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.