ADVERTISEMENT

ಮೈಸೂರು: ರಮ್ಮನಹಳ್ಳಿಯಲ್ಲಿ ಸಾರ್ವಜನಿಕ ವೈ–ಫೈ ಸೇವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 7:37 IST
Last Updated 1 ಮಾರ್ಚ್ 2022, 7:37 IST
   

ಮೈಸೂರು: ಸಾರ್ವಜನಿಕ ವೈ–ಫೈ ನೀತಿಯಡಿ ರಾಜ್ಯದಲ್ಲಿ ಬಿಎಸ್‌ಎನ್‌ಎಲ್‌ ಮೊದಲ ‘ಸಾರ್ವಜನಿಕ ದತ್ತಾಂಶ ಕೇಂದ್ರ’ವನ್ನು (ಪಿಡಿಒ) ತಾಲ್ಲೂಕಿನ ರಮ್ಮನಹಳ್ಳಿಯಲ್ಲಿ ಬಿಎಸ್‌ಎನ್‌ಎಲ್‌ ಮಂಡಳಿಯ ನಿರ್ದೇಶಕ ವಿವೇಕ್‌ ಬನ್ಜಾಲ್‌ ಮಂಗಳವಾರ ಉದ್ಘಾಟಿಸಿದರು.

ಇಡೀ ಗ್ರಾಮವು ಇದರಿಂದ ವೈ-ಫೈ ವಲಯವಾಗಿದೆ‌. 50 ಎಂಬಿಪಿಎಸ್‌ ವೇಗದವರೆಗೆ ಇಂಟರ್‌ನೆಟ್‌ ಸಂಪರ್ಕವನ್ನು ಅಗ್ಗದ ದರದಲ್ಲಿ ಪಡೆಯಬಹುದು. ಒಂದು ದಿನಕ್ಕೆ ಒಂದು ಜಿ.ಬಿಗೆ ₹ 9 ವೆಚ್ಚವಾಗುತ್ತದೆ‌. 32 ಆಕ್ಸಿಸ್ ಪಾಯಿಂಟ್ ಗಳು ಇಡೀ ಗ್ರಾಮಕ್ಕೆ ಈ ಸೌಲಭ್ಯ ನೀಡುತ್ತವೆ‌.

ನಂತರ ಮಾತನಾಡಿದ ವಿವೇಕ್ ಬನ್ಸಾಲ್, ಈಗಾಗಲೇ ಹಲವೆಡೆ ವೈಫೈ ಇದೆ. ಆದರೆ ಇಡೀ‌ ಹಳ್ಳಿಯನ್ನು ಕವರ್ ಮಾಡಿರುವುದು ಇದೆ ಮೊದಲು. ಈಗ ನಗರದ ಬಡಾವಣೆಗಳಂತೆ ಈ ಹಳ್ಳಿಯೂ ವೇಗದ ಇಂಟರ್ ನೆಟ್ ಸೌಲಭ್ಯ ಹೊಂದಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ, ಸರಾಗವಾಗಿ ವೈಫೈ ಸಂಪರ್ಕ ಪಡೆಯಬಹುದು ಎಂದರು‌

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.