ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಕಲ್ಲಹಟ್ಟಿಯಲ್ಲಿ ಬಾಲಕನನ್ನು ಕೊಂದ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ದಸರೆ ಆನೆ 'ಅರ್ಜುನ' ಮಂಗಳವಾರ ತೆರಳಿದ್ದಾನೆ.
ದಸರಾ ಗಜಪಡೆಯ ಸದಸ್ಯನಾದ ಅರ್ಜುನನೊಂದಿಗೆ ಮತ್ತೊಂದು ಆನೆ 'ಮಹೇಂದ್ರ' ಕೂಡ ಅರಮನೆ ಗಜಪಡೆ ಪ್ರವೇಶ ಕಾರ್ಯದ ನಂತರ ತೆರಳಲಿದ್ದಾನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು 'ಪ್ರಜಾವಾಣಿ'ಗೆ ತಿಳಿಸಿದರು.
'ಇಂದು ಮಧ್ಯಾಹ್ನ 12ಕ್ಕೆ ಅರಮನೆಗೆ ಗಜಪಡೆ ಪ್ರವೇಶ ನಡೆಯಲಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 8 ಆನೆಗಳನ್ನು ಅರಮನೆ ಮಂಡಳಿ ಹಾಗೂ ಜಿಲ್ಲಾಡಳಿತ ಸಾಂಪ್ರಾದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತಿಸಲಿದೆ. ಅರ್ಜುನ ಬೆಳಿಗ್ಗೆಯೇ ಕಲ್ಲಹಟ್ಟಿಗೆ ತೆರಳಿದ್ದಾನೆ. ಸಂಜೆ ವೇಳೆ ಮಹೇಂದ್ರ ತೆರಳುವನು' ಎಂದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮೇಟಿ ಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ಕಲ್ಲಹಟ್ಟಿಯ ಕೃಷ್ಣ ನಾಯಕ್ ಪುತ್ರ ಚರಣ್ ನಾಯಕ್ (8) ಹುಲಿದಾಳಿಯಿಂದ ಸೋಮವಾರ ಮೃತಪಟ್ಟಿದ್ದನು.
ಅವನ ತೊಡೆ, ಕೈ ಮತ್ತು ದೇಹದ ಇತರ ಭಾಗವನ್ನು ತಿಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.