ADVERTISEMENT

ಮೈಸೂರು: ರಿಂಗ್ ರಸ್ತೆಯಲ್ಲಿ 537 ಮರಗಳ ಹನನಕ್ಕೆ ಸಿದ್ಧತೆ, ವ್ಯಾಪಕ ಅಕ್ರೋಶ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 7:37 IST
Last Updated 30 ಅಕ್ಟೋಬರ್ 2021, 7:37 IST
ಮರಗಳನ್ನು ಕತ್ತರಿಸುವ ಪ್ರಸ್ತಾಪಕ್ಕೆ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮರಗಳನ್ನು ಕತ್ತರಿಸುವ ಪ್ರಸ್ತಾಪಕ್ಕೆ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದರು.   

ಮೈಸೂರು: ಇಲ್ಲಿನ ರಿಂಗ್ ರಸ್ತೆಯ ದೇವೇಗೌಡ ವೃತ್ತದಿಂದ ನಂಜನಗೂಡು ಜಂಕ್ಷನ್ ವರೆಗೆ ಸರ್ವೀಸ್ ರಸ್ತೆಯ ವಿಸ್ತರಣೆಗಾಗಿ 537 ಮರಗಳನ್ನು ಕತ್ತರಿಸುವ ಪ್ರಸ್ತಾಪಕ್ಕೆ ಪರಿಸರವಾದಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇಲ್ಲಿನ ರಿಂಗ್ ರಸ್ತೆಯ ಒಂದು ಬದಿಯಲ್ಲಿ ಅರಣ್ಯ ಇಲಾಖೆ ಕರೆದಿದ್ದ ಸಾರ್ವಜನಿಕ ಅಹವಾಲು ಆಲಿಕೆ ಸಭೆಯಲ್ಲಿ ಪರಿಸರವಾದಿಗಳು ಮರ ಕತ್ತರಿಸಲು ಪರವಾಗಿ ಸಹಿ ಹಾಕಿದ್ದ ಅರ್ಜಿಗಳನ್ನು ಹರಿದು ಹಾಕಿದರು.

ಎಸಿಎಫ್ ರಂಗಸ್ವಾಮಿ ಅವರು 24 ಮಂದಿ ಮರ ಕತ್ತರಿಸಲು ಬೆಂಬಲಿಸಿ ಅರ್ಜಿಗಳನ್ನು ನೀಡಿದ್ದಾರೆ ಎನ್ನುತ್ತಿದ್ದಂತೆ ಪರಿಸರ ಬಳಗ ಹಾಗೂ ಇತರೆ ಸಂಘಟನೆಗಳ ಕಾರ್ಯಕರ್ತರು ಆ 24 ಜನರಲ್ಲಿ ಒಬ್ಬರನ್ನಾದರೂ ಸ್ಥಳಕ್ಕೆ ಕರೆಸಿ ಎಂದು ಪಟ್ಟು ಹಿಡಿದರು.

ಯಾರೋಬ್ಬರೂ ಮುಂದೆ ಬಾರದಿದ್ದಾಗ ಇದು ನಕಲಿ ಅರ್ಜಿಗಳು. ವಾಸ್ತವದಲ್ಲಿ ಯಾರೂ ಮರ ಕತ್ತರಿಸಿ ಎಂದು ಅರ್ಜಿ ಬರೆದಿಲ್ಲ ಎಂದು ಹೇಳಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 50ಕ್ಕೂ ಅಧಿಕ ಮಂದಿ ಮರ ಕತ್ತರಿಸುವುದಕ್ಕೆ ವಿರೋಧಿಸಿದರು.

ಪರಶುರಾಮೇಗೌಡ, ತನುಜಾ, ಭಾನುಮೋಹನ್, ಲೀಲಾಶಿವಕುಮಾರ್, ಮಾಳವಿಕಾ ಗುಬ್ಬಿವಾಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.