ADVERTISEMENT

ಹುಣಸೂರು ಕಿರಾಣಿ ಅಂಗಡಿ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 14:43 IST
Last Updated 8 ನವೆಂಬರ್ 2024, 14:43 IST
ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ವಿವಿಧ ಹೋಟೆಲ್ ಗಳ ಮೇಲೆ ಅಬಕಾರಿ ಇಲಾಖೆ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಶುಕ್ರವಾರ ದಾಳಿ ನಡೆಸಿ ತಪಾಸಣೆ ನಡೆಸಿದರು.
ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ವಿವಿಧ ಹೋಟೆಲ್ ಗಳ ಮೇಲೆ ಅಬಕಾರಿ ಇಲಾಖೆ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಶುಕ್ರವಾರ ದಾಳಿ ನಡೆಸಿ ತಪಾಸಣೆ ನಡೆಸಿದರು.   

ಹುಣಸೂರು: ತಾಲ್ಲೂಕಿನ ವಿವಿಧ ಗ್ರಾಮ ಮತ್ತು ಗಿರಿಜನ ಹಾಡಿಗಳ ಮೇಲೆ ಅಬಕಾರಿ ಇಲಾಖೆ ಹೋಟೆಲ್ ಮತ್ತು ಕಿರಾಣಿ ಅಂಗಡಿಗಳ ಮೇಲೆ ದಾಳಿ ಆಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ತಪಾಸಣೆ ನಡೆಸಿದರು.

ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ತಂಬಾಕು ಹರಾಜು ಮಾರುಕಟ್ಟೆ ಮುಂಭಾಗದ ಹೊಟೇಲ್‌‌‌ಗಳಲ್ಲಿ ಮದ್ಯ ಸೇವನೆಗೆ ಸಾರ್ವಜನಿಕ ಸ್ಥಳದಲ್ಲಿ ಅವಕಾಶ ಕಲ್ಪಿಸುತ್ತಿರುವ ಬಗ್ಗೆ ಮಾಹಿತಿ ಬಂದ ಕಾರಣ ದಾಳಿ ನಡೆಸಿ ಸ್ಥಳದಲ್ಲಿ ಸಿಕ್ಕ ಮದ್ಯದ ಬಾಟಲು ಜಪ್ತಿ ಮಾಡಿದರು. ಹೋಟೆಲ್ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕ್ಕೆ ಅಬಕಾರಿ ಇಲಾಖೆ ಜಿಲ್ಲಾಧಿಕಾರಿಗಳಿಗೆ ಪ್ರಕರಣ ವರ್ಗಾಯಿಸಲಾಯಿತು.

ನಾಗಪುರ ಪುನರ್ವಸತಿ ಕೇಂದ್ರದ ನಾಲ್ಕು ಬ್ಲಾಕ್ ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದು ಮದ್ಯ ಪತ್ತೆಯಾಗಿಲ್ಲ. ಸ್ಥಳಿಯ ನಿವಾಸಿಗಳಿಗೆ ಇಲಾಖೆಯಿಂದ ಕಿರಾಣಿ ಅಂಗಡಿ ಅಥವಾ ಮೋಟಾರ್ ಬೈಕ್‌‌‌ನಲ್ಲಿ ಮಾರಾಟ ಮಾಡುವವರ ಬಗ್ಗೆ ಜಾಗೃತರಾಗಿ ಇಲಾಖೆಗೆ ಮಾಹಿತಿ ನೀಡುವ ಬಗ್ಗೆ ಜಾಗೃತಿಗೊಳಿಸಲಾಯಿತು.

ADVERTISEMENT

ದಾಳಿಯಲ್ಲಿ ಹುಣಸೂರು, ಕೆ.ಆರ್.ನಗರ ಮತ್ತು ಪಿರಿಯಾಪಟ್ಟಣ ಅಬಕಾರಿ ಇಲಾಖೆ ಇನ್‌‌‌ಸ್ಪೆಕ್ಟರ್ ನಾಗಲಿಂಗಸ್ವಾಮಿ, ವೆಂಕಟೇಶ್, ಸಬ್ ಇನ್ ಸ್ಪೆಕ್ಟರ್ ಲಕ್ಷ್ಮಿ, ಜಯಂತಿ, ರಘು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.