ADVERTISEMENT

ನಂಜನಗೂಡು | ರೈತರು ಕೃಷಿ ಉದ್ಯಮಗಳಾಗಿ; ಸಿಇಒ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 16:19 IST
Last Updated 1 ಜುಲೈ 2024, 16:19 IST
ನಂಜನಗೂಡು ತಾಲ್ಲೂಕಿನ ಗಣೇಶಪುರದ ರೈತ ಜಯಶಂಕರ ಸ್ಥಾಪಿಸಿರುವ ಎಣ್ಣೆ ತೆಗೆಯುವ ಘಟಕಕ್ಕೆ ಜಿ.ಪಂ. ಸಿಇಒ ಗಾಯಿತ್ರಿ ಅವರು ಈಚೆಗೆ ಭೇಟಿ ನೀಡಿದ್ದರು
ನಂಜನಗೂಡು ತಾಲ್ಲೂಕಿನ ಗಣೇಶಪುರದ ರೈತ ಜಯಶಂಕರ ಸ್ಥಾಪಿಸಿರುವ ಎಣ್ಣೆ ತೆಗೆಯುವ ಘಟಕಕ್ಕೆ ಜಿ.ಪಂ. ಸಿಇಒ ಗಾಯಿತ್ರಿ ಅವರು ಈಚೆಗೆ ಭೇಟಿ ನೀಡಿದ್ದರು   

ನಂಜನಗೂಡು: ‘ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಬಳಸಿಕೊಂಡು ಕೃಷಿಗೆ ಸಂಬಂಧಪಟ್ಟ ಉದ್ಯಮಗಳಾಗಬೇಕು’ ಎಂದು ಜಿ.ಪಂ. ಸಿಇಒ ಗಾಯಿತ್ರಿ ಸಲಹೆ ನೀಡಿದರು.

ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಯ ಗಣೇಶಪುರದಲ್ಲಿ ಪ್ರಗತಿಪರ ರೈತ ಜಯಶಂಕರ ಸ್ಥಾಪಿಸಿರುವ ಎಣ್ಣೆ ಗಾಣದ ಘಟಕಕ್ಕೆ ಈಚೆಗೆ ಭೇಟಿ ನೀಡಿ, ರೈತರನ್ನು ಕುರಿತು ಮಾತನಾಡಿದರು.

‘ಜಯಶಂಕರ ಅವರು ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಔಪಚಾರೀಕರಣ ಯೋಜನೆಯಡಿ ₹ 14.26 ಲಕ್ಷ ಸಹಾಯಧನ ಪಡೆದುಕೊಂಡು ₹ 28.52 ಲಕ್ಷ ವೆಚ್ಚದ ಎಣ್ಣೆ ತೆಗೆಯುವ ಹಾಗೂ ಜೇನು ತುಪ್ಪ ಸಂಸ್ಕರಣಾ ಘಟಕ ಸ್ಥಾಪಿಸುವ ಮೂಲಕ ಹಲವು ಗ್ರಾಮೀಣ ಜನರಿಗೆ ಉದ್ಯೋಗ ನೀಡಿದ್ದಾರೆ. ರೈತರ ಉದ್ಯಮ ಶೀಲತೆ ಮತ್ತು ಪ್ರಗತಿ ಕಂಡು ಸಂತೋಷವಾಗಿದೆ. ಇವರನ್ನು ಆದರ್ಶವಾಗಿ ಇಟ್ಟುಕೊಂಡು ರೈತರು ರೈತೋದ್ಯಮಿಗಳಾಗಬೇಕು’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.