ADVERTISEMENT

ವಿಡಿಯೊ ಧ್ವ‌ನಿ ಪರೀಕ್ಷೆ ನಡೆಸಿ: ಸ್ನೇಹಮಯಿ‌ ಕೃಷ್ಣ ಸವಾಲು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 16:38 IST
Last Updated 13 ನವೆಂಬರ್ 2024, 16:38 IST
ಸ್ನೇಹಮಯಿ ಕೃಷ್ಣ
ಸ್ನೇಹಮಯಿ ಕೃಷ್ಣ   

ಮೈಸೂರು: ‘ಎಂ.ಲಕ್ಷ್ಮಣ ಅವರಿಗೆ ತಾಕತ್ತಿದ್ದರೆ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರ ಎಕ್ಸ್ ಖಾತೆಯಲ್ಲಿ ಈಚೆಗೆ ಬಿಡುಗಡೆಯಾದ ವಿಡಿಯೊದಲ್ಲಿರುವ ಧ್ವನಿ ಯಾರದ್ದು ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಪಡೆಯಲಿ’ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ‌ ಕೃಷ್ಣ ಸವಾಲು ಹಾಕಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, ‘ವಿಡಿಯೊದಲ್ಲಿರುವ ಧ್ವನಿ ನನ್ನದು ಎಂದು ವರದಿ ಬಂದರೆ ನಾನು ನನ್ನ ಹೋರಾಟವನ್ನು ನಿಲ್ಲಿಸುತ್ತೇನೆ. ಧ್ವನಿ ನಿಮ್ಮದು ಅಂತ ವರದಿ ಬಂದರೆ ನೀವು ರಾಜಕೀಯದಿಂದ ನಿವೃತ್ತಿಯಾಗುತ್ತೀರಾ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT