ADVERTISEMENT

ಮೈಸೂರು: ಅಗ್ನಿಶಾಮಕ ದಳದ ಸಾಧಕರು

ಜಿಲ್ಲೆಯ ಮೂವರಿಗೆ ಮುಖ್ಯಮಂತ್ರಿ ಚಿನ್ನದ ಪದಕ, ಸಂಭ್ರಮ

ಪ್ರಜಾವಾಣಿ ವಿಶೇಷ
Published 24 ಜೂನ್ 2024, 5:21 IST
Last Updated 24 ಜೂನ್ 2024, 5:21 IST
<div class="paragraphs"><p>ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಜೆ.ಗಂಗಾನಾಯ್ಕ ಅವರಿಗೆ ಗೃಹ ಸಚಿವ ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಚಿನ್ನದ ಪದಕ ನೀಡಿದರು.</p><p>ಜೆ.ಗಂಗಾನಾಯ್ಕ ಊರು: ಗಂಗಗೊಂಡನಹಳ್ಳಿ ಚನ್ನಗಿರಿ ತಾಲ್ಲೂಕು ಹುದ್ದೆ: ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹೆಬ್ಬಾಳ ಅಗ್ನಿಶಾಮಕ ಠಾಣೆ ಸೇವೆ: 16 ವರ್ಷ ಪ್ರಶಸ್ತಿ: 22 ನಗದು ಹಾಗೂ ಇತರ ಪುರಸ್ಕಾರಗಳು</p></div>

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಜೆ.ಗಂಗಾನಾಯ್ಕ ಅವರಿಗೆ ಗೃಹ ಸಚಿವ ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಚಿನ್ನದ ಪದಕ ನೀಡಿದರು.

ಜೆ.ಗಂಗಾನಾಯ್ಕ ಊರು: ಗಂಗಗೊಂಡನಹಳ್ಳಿ ಚನ್ನಗಿರಿ ತಾಲ್ಲೂಕು ಹುದ್ದೆ: ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹೆಬ್ಬಾಳ ಅಗ್ನಿಶಾಮಕ ಠಾಣೆ ಸೇವೆ: 16 ವರ್ಷ ಪ್ರಶಸ್ತಿ: 22 ನಗದು ಹಾಗೂ ಇತರ ಪುರಸ್ಕಾರಗಳು

   

ಮೈಸೂರು: ‘ಅನಿರೀಕ್ಷಿತ ಅವಘಡದಲ್ಲಿ ಸಿಲುಕಿರುವ ಜನರನ್ನು ಕಾಪಾಡುವುದಷ್ಟೇ ನಮ್ಮ ಗುರಿ. ಅಂತಹ ತುರ್ತು ಸಂದರ್ಭದಲ್ಲಿ ವೈಯಕ್ತಿಕ ಸುರಕ್ಷತೆ ಮರೆತು ಕೆಲಸ ಮಾಡುತ್ತೇವೆ. ಈ ವೃತ್ತಿಗೆ ಸೇರಿದ್ದು, ಸಾರ್ಥಕ‌ ಅನ್ನಿಸುವುದೇ ಅಂತಹ ಕ್ಷಣದಲ್ಲಿ...’

ADVERTISEMENT

ಹೀಗೆಂದವರು, ಈ ಬಾರಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಬನ್ನಿಮಂಟಪ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕ ಎಂ.ಪರಶಿವಮೂರ್ತಿ.

ಇದೇ ಆಶಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಅಗ್ನಿಶಾಮಕ ವಿಭಾಗದ ಮೂವರು ಪ್ರಸಕ್ತ ಸಾಲ್ಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಎಂ. ಧನಂಜಯ ಹಾಗೂ ಹೆಬ್ಬಾಳ ಅಗ್ನಿಶಾಮಕ ಠಾಣೆಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಜೆ.ಗಂಗಾನಾಯ್ಕ್ ಕೂಡ ಪದಕ ಪಡೆದಿದ್ದಾರೆ.

ಈ ಸಾಧಕರು ‘ಪ್ರಜಾವಾಣಿ’ಯೊಂದಿಗೆ ಸಂಭ್ರಮ ಹಂಚಿಕೊಂಡರು.

‘ನಗರದ ಕೆ‌.ಟಿ.ಸ್ಟ್ರೀಟ್ ಬಳಿ ಕುಸಿದು ಬಿದ್ದ ಕಟ್ಟಡ ಒಂದರಲ್ಲಿ ಸಿಲುಕಿದ ಮೂವರನ್ನು ರಕ್ಷಿಸಿದ ಘಟನೆ ಅಚ್ಚಳಿಯದೇ ಉಳಿದಿದೆ. ಈಚೆಗೆ ಮಹಾರಾಣಿ ಕಾಲೇಜು ಕಟ್ಟಡ ಕುಸಿದಾಗಲೂ ಸಾಕಷ್ಟು ಬೆಲೆ ಬಾಳುವ ಪ್ರಯೋಗ ಶಾಲೆ ಪರಿಕರಗಳನ್ನು ರಕ್ಷಿಸಿದ್ದೇವೆ. ‌ಜನರ ಸಂಕಷ್ಟ ಪರಿಹಾರಕ್ಕೆ ಸಹಕರಿಸುವುದು ಈ ವೃತ್ತಿಯಲ್ಲಿ ಪ್ರಮುಖವಾಗುತ್ತದೆ’ ಎಂದು ಪರಶಿವಮೂರ್ತಿ ಹೇಳಿದರು.

ಸವಾಲಿನ ಕೆಲಸ: ‘2011ರಲ್ಲಿ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತ ನಾನು ನಿಭಾಯಿಸಿದ ಪ್ರಕರಣದಲ್ಲಿ ದೊಡ್ಡದು. ಇಡೀ ವಿಮಾನವೇ ಸ್ಫೋಟಗೊಂಡು 158 ಮಂದಿ ಮೃತಪಟ್ಟಿದ್ದರು. ಆ ಗೊಂದಲದ ವಾತಾವರಣದಲ್ಲಿ ಎಂಟು ಮಂದಿಯ ಪ್ರಾಣವನ್ನು ನಮ್ಮ ತಂಡವು ರಕ್ಷಣೆ ಮಾಡಿದ್ದು, ಬಿಡದೆ ಸುರಿಯುತ್ತಿದ್ದ ಮಳೆಯ ನಡುವೆ ನಡೆದ ಆ ರಕ್ಷಣಾ ಕಾರ್ಯಾಚರಣೆ ಈಗಲೂ ಸವಾಲಿನಂತೆ ಕಾಡುತ್ತದೆ’ ಎಂದು ಧನಂಜಯ ಅವರು ತಮ್ಮ ವೃತ್ತಿ ಬದುಕನ್ನು ನೆನಪಿಸಿಕೊಂಡರು.

‘ಮೈಸೂರಿನಲ್ಲಿ 2015ರಿಂದ ಕೆಲಸ ಮಾಡುತ್ತಿದ್ದೇನೆ. ನಂಜನಗೂಡಿನ ಪೇಪರ್ ಮಿಲ್ ಹೊತ್ತಿ ಉರಿದ ಘಟನೆ, ಕಾವೇರಿ ವಾಟರ್ ವರ್ಕ್ಸ್ ಬಳಿಯ ಕ್ಲೋರಿನ್ ಸೋರಿಕೆ ಪ್ರಕರಣಗಳು ನಾನು ನಿಭಾಯಿಸಿದ ಪ್ರಮುಖವಾದವು. ಕಟ್ಟಡ ಕುಸಿದರೂ, ಬೆಂಕಿ ಹೊತ್ತಿದರೂ, ಜನ, ಜಾನುವಾರುಗಳು ಬಾವಿಗೆ ಬಿದ್ದರೂ ನಮ್ಮನ್ನು ಕರೆಯುತ್ತಾರೆ. ಸಾಕಷ್ಟು ಸವಾಲು, ಅಪಾಯ ಇದೆ. ಅದಕ್ಕಾಗಿಯೇ ನಾವಿರುವುದಲ್ಲವೇ?’ ಎಂದರು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗಂಗಾನಾಯ್ಕ್, ‘ಅಗ್ನಿಶಾಮಕ ವೃತ್ತಿಯಲ್ಲಿ ಯುವಜನತೆಗೆ ಸಾಕಷ್ಟು ಅವಕಾಶವಿದೆ. ಬಿಎಸ್‌ಸಿ ಕೆಮಿಸ್ಟ್ರಿ ಮಾಡಿದರೆ ಅಧಿಕಾರಿಯಾಗಿ ಸೇರಬಹುದು. ಫೈರ್‌ಮನ್‌, ಚಾಲಕರಾಗಲು ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಸಾಕು’ ಎಂದು ತಿಳಿಸಿದರು.

ಎಂ.ಧನಂಜಯ ಊರು: ಮುಗುಳುವಳ್ಳಿ ಚಿಕ್ಕಮಗಳೂರು ಹುದ್ದೆ: ಪ್ರಮುಖ ಅಗ್ನಿಶಾಮಕ ಬನ್ನಿಮಂಟಪ ಅಗ್ನಿಶಾಮಕ ಠಾಣೆ ಸೇವೆ: 22 ವರ್ಷ ಪ್ರಶಸ್ತಿ: 13 ನಗದು ಪುರಸ್ಕಾರ

ಎಂ.ಪರಶಿವಮೂರ್ತಿ ಊರು: ಬಸಳ್ಳಿಹುಂಡಿ ಮೈಸೂರು ತಾಲ್ಲೂಕು ಹುದ್ದೆ: ಪ್ರಮುಖ ಅಗ್ನಿಶಾಮಕ ಬನ್ನಿಮಂಟಪ ಅಗ್ನಿಶಾಮಕ ಠಾಣೆ ಸೇವೆ: 28 ವರ್ಷ ಪ್ರಶಸ್ತಿ: 12 ನಗದು ಪುರಸ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.