ಮೈಸೂರು: ‘ಇವತ್ತಿನ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ಮುಂದೇನಾಗುತ್ತದೆಯೋ ಹೇಳಲಾಗದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮೈಸೂರಿನಲ್ಲಿ ಪಕ್ಷಕ್ಕೆ ಸರಿಯಾದ ಕಟ್ಟಡವೇ ಇಲ್ಲ ನೀವ್ಯಾವ ಸೀಮೆ ಮುಖ್ಯಮಂತ್ರಿ ರೀ?’ ಎಂದು ಸಿದ್ದರಾಮಯ್ಯ ಅವರಿಗೆ ಮೊದಲ ಅವಧಿಯಲ್ಲಿ ಕೋಪದಿಂದಲೇ ಕೇಳಿದ್ದೆ. ಅವರಿಗೆ ಅದು 2ನೇ ಅವಧಿಯಲ್ಲಿ ಮನಸ್ಸಿಗೆ ಬಂದಿದೆ. ₹15 ಕೋಟಿ ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಿರುವುದು ಒಳ್ಳೆಯ ಬೆಳವಣಿಗೆ. ರಾಜಕೀಯದ ಪರಿಸ್ಥಿತಿ ಏನೇನಾಗುತ್ತದೆಯೋ ಏನೋ ಹೇಳಲಾಗದು. ತ್ವರಿತವಾಗಿ ಶಂಕುಸ್ಥಾಪನೆ ನೆರವೇರಿಸಿರಿ. ನಮ್ಮ ಸರ್ಕಾರ ಇರುವಾಗಲೇ ಕಾಮಗಾರಿಯನ್ನೂ ಮುಗಿಸಿಬಿಡಿ’ ಎಂದು ಪರಮೇಶ್ವರ ಪದಾಧಿಕಾರಿಗಳಿಗೆ ಸೂಚಿಸಿದ
‘ಬಿಜೆಪಿ- ಜೆಡಿಎಸ್‌ನವರು ಯಾವುದೇ ಕಾರಣಕ್ಕೂ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲಾಗದು. ಅವರು ಶಾಸಕರಿಗೆ ₹50 ಕೋಟಿಯೋ ₹ 100 ಕೋಟಿಯೋ ಕೊಡಬಹುದು. ಆದರೆ ನಮ್ಮವರಾರೂ ಹೋಗುವುದಿಲ್ಲ. ಎಷ್ಟೇ ಆಪಾದನೆ ಮಾಡಿದರೂ ಸಿದ್ದರಾಮಯ್ಯ ಗಟ್ಟಿಗೊಳ್ಳುತ್ತಾರೆಯೇ ಹೊರತು ಮೆತ್ತಗಾಗುವುದಿಲ್ಲ. ನಮ್ಮ ಸರ್ಕಾರವನ್ನು ಬೀಳಿಸುವುದು ವಿರೋಧ ಪಕ್ಷದವರ ಕನಸಷ್ಟೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.