ADVERTISEMENT

ಮೈಸೂರು | ಜೂಜಾಟ: 12 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 15:37 IST
Last Updated 19 ಅಕ್ಟೋಬರ್ 2024, 15:37 IST
<div class="paragraphs"><p>ಬಂಧನ</p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಮೈಸೂರು: ಆಲನಹಳ್ಳಿ ಮುಖ್ಯರಸ್ತೆಯಲ್ಲಿರುವ ಎಸ್‌ಬಿಐ ಕಟ್ಟಡದ ಮೇಲ್ಭಾಗದ ಕೊಠಡಿಯಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು 12 ಮಂದಿಯನ್ನು ಬಂಧಿಸಿ, ಅವರಿಂದ ₹20 ಸಾವಿರ ವಶಪಡಿಸಿಕೊಂಡಿದ್ದಾರೆ.

ADVERTISEMENT

ಮಾದಕ ವಸ್ತು ಮಾರಾಟ ಯತ್ನ: ಬಂಧನ

ಮೈಸೂರು: ಮಹದೇಶ್ವರ ಬಡಾವಣೆಯ ಭೈರವೇಶ್ವರ ಶಾಲೆ ಬಳಿ ಗೋಮಾಳದಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎ ಮಾರಾಟ ಮಾಡಲು ಯತ್ನಿಸಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆತನಿಂದ ₹1 ಲಕ್ಷ  ಮೌಲ್ಯದ 3.5 ಗ್ರಾಂ ಎಂಡಿಎ ವಶಪಡಿಸಿಕೊಂಡಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೊ ಕಳವು: ಆರೋಪಿ ಬಂಧನ

ಮೈಸೂರು: ಬಿ.ಎಂ.ಶ್ರೀ ನಗರದ ಏಳನೇ ಕ್ರಾಸ್‌ನಲ್ಲಿ ನಿಲ್ಲಿಸಿದ್ದ ನಾರಾಯಣ ಎಂಬುವರ ಆಟೊರಿಕ್ಷಾವನ್ನು ಕಳವು ಮಾಡಿದ್ದ ಆರೋಪದಡಿ, ತಾಲ್ಲೂಕಿನ ಬೆಲವತ್ತ ನಿವಾಸಿ ಕಿರಣ್ ಎಂಬಾತನನ್ನು ಮೇಟಗಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ₹2.60 ಲಕ್ಷ ಮೌಲ್ಯದ 3 ಪ್ಯಾಸೆಂಜರ್‌ ಆಟೊಗಳನ್ನು ವಶಕ್ಕೆ ಪಡೆದಿದ್ದಾರೆ.

‘ರಾಯಲ್ ಇನ್ ಜಂಕ್ಷನ್ ಬಳಿ ಪೊಲೀಸರು ಗಸ್ತು ಮಾಡುತ್ತಿದ್ದಾಗ ಆಟೊರಿಕ್ಷಾವನ್ನು ನಿಲ್ಲಿಸಿಕೊಂಡಿದ್ದ ವ್ಯಕ್ತಿಯನ್ನು ಗಮನಿಸಿ, ಆತನ ಹತ್ತಿರ ತೆರಳಿದಾಗ ಆತ ರಿಕ್ಷಾ ಬಿಟ್ಟು ಓಡತೊಡಗಿದ. ಹಿಡಿದು ವಿಚಾರಣೆ ನಡೆಸಿದಾಗ ಆತ ಮೇಟಗಳ್ಳಿ, ಮಂಡಿ ಹಾಗೂ ದೇವರಾಜ ಪೊಲೀಸ್ ಠಾಣೆಯಲ್ಲಿ ದಾಖಲಾದ ಆಟೊ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ಎಸಿಪಿ ಜಿ.ಎಸ್.ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ದಿವಾಕರ್ ಆರ್, ಪಿಎಸ್‌ಐ ಜ್ಯೋಸ್ನಾರಾಜ್‌, ಆರ್. ಶಬರೀಶ್, ಎಎಸ್‌ಐ ಜೋಸೆಫ್ ರ‍್ಹೋನ, ಸಿಬ್ಬಂದಿ ಕೃಷ್ಣ, ಹರೀಶ್ ಕೆ.ಎನ್, ಪರಶುರಾಮ್ ರಾಠೋಡ್, ಪ್ರತಾಪ್ ಕೆ.ಎಸ್, ವಿಠಲ್ ಎನ್.ಆರ್, ನಂದೀಶ್ ತಂಡ ಕಾರ್ಯಾಚರಣೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.