ಹುಣಸೂರು: ತಾಲ್ಲೂಕಿನ ಜಾಬಗೆರೆ ಗ್ರಾಮದಲ್ಲಿ ನಿವಾಸಿ ತಿಮ್ಮನಾಯಕ ಎಂಬಾತನ ಮನೆಯ ಹಿತ್ತಲಿನಲ್ಲಿ ಬೆಳೆದಿದ್ದ 4.95 ಕೆ.ಜಿ. ಗಾಂಜಾ ವಶಪಡಿಸಿಕೊಂಡಿರುವ ಪೊಲೀಸರು ಈ ಸಂಬಂಧ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ತಿಮ್ಮನಾಯಕನನ್ನು ಬಂಧಿಸಿ ₹20 ಲಕ್ಷ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
‘ಮಾಹಿತಿ ಅರಿತ ಪೊಲೀಸರು ಶನಿವಾರ ತಿಮ್ಮನಾಯಕನ ಮನೆ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದಾಗ ಅವರ ಮನೆಯ ಕೈ ತೋಟದಲ್ಲಿ ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ’ ಎಂದು ಹುಣಸೂರು ಗ್ರಾಮಾಂತರ ಪೊಲೀಸ್ ಸರ್ಕಲ್ ಇನ್ ಸ್ಪೆಕ್ಟರ್ ಮುನಿಯಪ್ಪ ತಿಳಿಸಿದ್ದಾರೆ.
ದಾಳಿ ಸಮಯದಲ್ಲಿ ಜಾಬಗೆರೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಮಂಜು, ಲೆಕ್ಕಾಧಿಕಾರಿ ಸಿದ್ದರಾಮು ಎಳಸಂಗಿ, ಸಿಬ್ಬಂದಿ ರೇವಣ್ಣ, ಇಮ್ರಾನ್ ಶರೀಫ್, ನಂದೀಶ್, ನಾರಾಯಣ ಶೆಟ್ಟಿ, ಸುಂದರ್ ರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.