ಮೈಸೂರು: ಭಾರತೀಯ ಸಂಸ್ಕೃತಿ ಮತ್ತು ಕಲೆಯಲ್ಲಿ ಜೀವಮಾನ ಸಾಧನೆಗಾಗಿ ಮಧ್ಯಪ್ರದೇಶ ಸರ್ಕಾರ ನೀಡುವ 2023ನೇ ಸಾಲಿನ ‘ಕಾಳಿದಾಸ ಸಮ್ಮಾನ್’ ಪ್ರಶಸ್ತಿಗೆ ಮೈಸೂರಿನ ಗಂಜೀಫಾ ರಘುಪತಿ ಭಟ್ಟ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ₹5 ಲಕ್ಷ ನಗದು, ಶಾಲು ಹಾಗೂ ಶ್ರೀಫಲಕವನ್ನು ಹೊಂದಿದೆ. ನ.12ರಂದು ಉಜ್ಜಯಿನಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ದಕ್ಷಿಣ ಕನ್ನಡದಲ್ಲಿ 1957ರಲ್ಲಿ ಜನಸಿದ ರಘುಪತಿ ಭಟ್ಟ ಅವರು 50 ವರ್ಷದಿಂದ ಭಾರತೀಯ ಶಾಸ್ತ್ರೀಯ ಚಿತ್ರಕಲೆ ರಚನೆಯಲ್ಲಿ ತೊಡಗಿದ್ದಾರೆ. ಮೈಸೂರಿನ ಲಕ್ಷಣ ಶಾಸ್ತ್ರದ ಅನ್ವಯ ಚಿತ್ರ ರಚಿಸುವಲ್ಲಿ ಪರಿಣತರಾಗಿದ್ದಾರೆ. ಅಳಿವಿನಂಚಿನಲ್ಲಿದ್ದ ಗಂಜೀಫಾ ಚಿತ್ರಕಲೆ ಹಾಗೂ ಕರಾವಳಿ ಭಾಗದ ಕಾವಿ ಕಲೆಯನ್ನು ಪುನರುಜ್ಜೀವನಗೊಳಿಸುವ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ.
ಅವರು ‘ಕಾವಿ ಚಿತ್ರ ಕಲೆ ರಚನಾ ವಿಧಾನ’ ಕೃತಿಯನ್ನು ರಚಿಸಿದ್ದು, ದೇಶ ವಿದೇಶಗಳಲ್ಲಿ ಅವರ ಕಲಾಕೃತಿಗಳ ಪ್ರದರ್ಶನವೂ ನಡೆದಿದೆ.
ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ಯಾವುದೇ ಸೂಚನೆ ಇಲ್ಲದೆ ಈ ರೀತಿ ನಡೆಯುವ ಆಯ್ಕೆ ಪ್ರಕ್ರಿಯೆ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತದೆಗಂಜೀಫಾ ರಘುಪತಿ ಭಟ್ಟ ಕಲಾವಿದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.