ADVERTISEMENT

ನನಗೂ–ಬಿಜೆಪಿಗೂ ಸಂಬಂಧವಿಲ್ಲ: ಗೀತಾ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 19:53 IST
Last Updated 28 ಫೆಬ್ರುವರಿ 2024, 19:53 IST

ಮೈಸೂರು: ‘ನನಗೂ–ಬಿಜೆಪಿಗೂ ಸಂಬಂಧವಿಲ್ಲ; ನಾನು ಆ ಪಕ್ಷದ ಕಾರ್ಯಕರ್ತೆಯೂ ಅಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಗೀತಾ ಜಿ. ತಿಳಿಸಿದ್ದಾರೆ.

ಸರ್ಕಾರವು ತಮ್ಮನ್ನು ಕೆಎಸ್‌ಒಯು ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿ ನಾಮನಿರ್ದೇಶನ ಮಾಡಿ 24 ಗಂಟೆಗಳಲ್ಲೇ ಆದೇಶ ರದ್ದುಪಡಿಸಿರುವ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.

‘ನಾನು ಈ ಹಿಂದೆ ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆಯಾಗಿ ರಾಜ್ಯಪಾಲರಿಂದ ನಾಮನಿರ್ದೇಶನಗೊಂಡಿದ್ದೆ. ಈಗಿನ ಸರ್ಕಾರವು ಕ್ರೀಡಾ ಮತ್ತು ಶೈಕ್ಷಣಿಕ ಶೈಕ್ಷಣಿಕ ಕ್ಷೇತ್ರದ ಸಾಧನೆ ಆಧರಿಸಿ ಕೆಎಸ್‌ಒಯು ವ್ಯವಸ್ಥಾಪನ ಮಂಡಳಿ ಸದಸ್ಯರಾಗಿ ನಾಮನಿರ್ದೇಶನ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವಂತೆ ನಾನು ಬಿಜೆಪಿಯವಳಲ್ಲ. ನನ್ನ ತೇಜೋವಧೆ ನಿಲ್ಲಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.