ADVERTISEMENT

ನಂಜನಗೂಡು | ಗ್ರಾ.ಪಂ. ಉಪಾಧ್ಯಕ್ಷೆ ಪತಿ ಸಾವು: ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 14:28 IST
Last Updated 7 ಅಕ್ಟೋಬರ್ 2024, 14:28 IST
ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗ ಕೆಬ್ಬೆಪುರ ಗ್ರಾಮಸ್ಥರು ದೂರು ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು.
ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗ ಕೆಬ್ಬೆಪುರ ಗ್ರಾಮಸ್ಥರು ದೂರು ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು.   

ನಂಜನಗೂಡು: ತಾಲ್ಲೂಕಿನ ಹೊಸೂರು ಸಮೀಪ ಭಾನುವಾರ ರಾತ್ರಿ ಕೆಬ್ಬೆಪುರ ಗ್ರಾಮದ ನಂಜುಂಡಸ್ವಾಮಿ (47) ಬೈಕ್‌ ನಿಂದ ಬಿದ್ದು ಗಾಯಗೊಂಡಿದ್ದವರು, ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ದೇವರಸನಹಳ್ಳಿ ಗ್ರಾ.ಪಂ.ಉಪಾಧ್ಯಕ್ಷೆ ಸೌಭಾಗ್ಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ ದೇವರಸನಹಳ್ಳಿ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಈ ತಿಂಗಳು ಚುನಾವಣೆ ನಡೆಯಬೇಕಿದ್ದು, ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಲು ಸದಸ್ಯರು ಒಪ್ಪಿಗೆ ಸೂಚಿಸಿದ್ದು, ನನ್ನ ಗಂಡ ನಂಜುಂಡಸ್ವಾಮಿ ಚುನಾವಣೆ ವಿಷಯವಾಗಿ 4 ಲಕ್ಷ ಹಣ ತೆಗೆದುಕೊಂಡು ಭಾನುವಾರ ರಾತ್ರಿ ಹೋದವರು ಹೊಸಹಳ್ಳಿ ಸಮೀಪ ಗಾಯಗೊಂಡು ಬಿದ್ದಿದ್ದರು, ತಲೆಗೆ ಬಲವಾದ ಏಟು ಬಿದ್ದಿರುವ ಗಾಯವಾಗಿದ್ದು ಎಡಗೈ ಮುರಿದಿದೆ, ದೇವರಸನಹಳ್ಳಿ ಗ್ರಾ.ಪಂ.ಅಧ್ಯಕ್ಷರ ಚುನಾವಣೆ ವಿಷಯವಾಗಿ ರಾಜಕೀಯ ಧ್ವೇಷದಿಂದ ನನ್ನ ಗಂಡನನ್ನು ಒಡೆದು ಕೊಲೆ ಮಾಡಿದ್ದಾರೆ,ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕಾಗಿ ದೂರು ನೀಡಿದ್ದಾರೆ.

ಪೊಲೀಸರು ಘಟನೆಯನ್ನು ಅಪಘಾತ ಎಂದು ಪರಿಗಣಿಸಿದ್ದರು, ರಾಜಕೀಯ ಪ್ರೇರಿತ ಕೊಲೆ ಎಂದು ದೂರು ದಾಖಲಿಸಿಕೊಳ್ಳುವಂತೆ ಒತ್ತಾಯಿಸಿ ಕೆಬ್ಬೆಪುರ ಗ್ರಾಮಸ್ಥರು ಗ್ರಾಮಾಂತರ ಪೊಲೀಸ್‌ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ ನಂತರ ಕೊಲೆ ಶಂಕೆ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ.

ADVERTISEMENT

ಪ್ರತಿಭಟನೆಯಲ್ಲಿ ಮುಖಂಡರಾದ ಎಚ್.ಎಸ್.ಮೂಗಶೆಟ್ಟಿ,ಕರಳಪುರ ನಾಗರಾಜು,ಹೆಮ್ಮರಗಾಲ ಸೋಮಣ್ಣ, ಶಿವಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.