ತಲಕಾಡು: ಇಲ್ಲಿನ ಶ್ರೀ ಭಾಗವತೀಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಬಾಲಕೃಷ್ಣಾನಂದ ಮಹಾಸಂಸ್ಥಾನಂ, ಶುಕ-ಶಂಕರ ಪೀಠ, ಗಜಾರಣ್ಯ ಕ್ಷೇತ್ರ , ತಲಕಾಡು ಹಾಗೂ ಸಾಂತ್ವನ ವೈದ್ಯ ಬಳಗ ಮೈಸೂರು ಇವರ ಸಹಯೋಗದೊಂದಿಗೆ ಅರೋಗ್ಯ ಶಿಬಿರವನ್ನು ಮಠದ ಆವರಣದಲ್ಲಿ ಭಾನುವಾರ ನಡೆಯಿತು.
ಬಾಲಕೃಷ್ಣಾನಂದ ಮಹಾಸಂಸ್ಥಾನದ ಪೀಠಾಧಿಪತಿ ಗೋವಿಂದಾನಂದ ಸರಸ್ವತಿ ಮಹಾ ಸ್ವಾಮಿಗಳ ಶಿಬಿರಕ್ಕೆ ಚಾಲನೆ ನೀಡಿದರು.
‘ಮಠದಿಂದ ಶಿಬಿರಗಳನ್ನು ನಡೆಸಲಾಗುತ್ತಿದೆ. ಹೋಬಳಿಯ ಬಡ ಜನರು ಆರೋಗ್ಯ ಶಿಬಿರದ ಪ್ರಯೋಜನಗಳನ್ನು ಪಡೆದುಕೊಂಡು ವೈದ್ಯರ ಸಲಹೆ ಮೇರೆಗೆ ಔಷಧ ಉಪಚಾರ ಮಾಡಿಕೊಂಡು ಆರೋಗ್ಯವಂತರಾಗಬೇಕು’ ಎಂದು ಆಶೀರ್ವದಿಸಿದರು.
ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಕೀಲು ಮತ್ತು ಮೂಳೆ ರೋಗಗಳಿಂದ ಬಳಲುತ್ತಿರುವವರು, ಕ್ಯಾನ್ಸರ್ ಪೀಡಿತರು, ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವವರು, ಸ್ತ್ರೀ ಸಂಬಂಧಿತ ರೋಗಗಳಿಗೆ ನುರಿತ ವೈದ್ಯ ತಜ್ಞರಿಂದ 125 ಜನರಿಗೆ ತಪಾಸಣೆ ಮಾಡಲಾಯಿತು.
ತಪಾಸಣೆಯಲ್ಲಿ ಉಚಿತವಾಗಿ ಬಿಪಿ, ಇಸಿಜಿ , ಮಧು ಮೇಹ, ಮೂಳೆ ಸಾಂದ್ರತೆ ಪರೀಕ್ಷೆ ಮಾಡಿ ಉಚಿತವಾಗಿ ಔಷಧವನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಶ್ರೀನಿವಾಸರಾವ್, ಶಿಬಿರದ ವೈದ್ಯರಾದ ಡಾ.ಸತ್ಯೇಂದ್ರ, ಡಾ.ಎ.ಎಸ್.ಚಂದ್ರಶೇಖರ, ಡಾ.ನಂದಿನಿ ಡಿ.ಬಿ, ಡಾ.ಗುರು ಬಸವರಾಜ್, ಡಾ.ಮಂಜುಳಾ, ಡಾ.ಗೋವರ್ಧನ ಆಚಾರ್, ಡಾ.ಸದಾನಂದ ಪಾವಗಡ, ಡಾ.ಅನಂತರಾಮ, ಡಾ.ಎ.ಎಫ್. ಕೃಷ್ಣಮೂರ್ತಿ, ಡಾ.ಜಿ ವಿ.ಅಜಯ್, ಡಾ.ಆಶಾಲತ ಹಾಗೂ ಶಿಬಿರದ ಸಹಾಯಕರಾದ ಮಧುಸೂಧನ್, ನರಸಿಂಹಮೂರ್ತಿ, ಮಠದ ಸುಹಾಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.