ADVERTISEMENT

ಹುಣಸೂರು: ವಿಚ್ಚೇದನಕ್ಕೆ ಬಂದ ದಂಪತಿಗೆ ‘ಮರು ವಿವಾಹ’

ಲೋಕ ಅದಾಲತ್‌ನಲ್ಲಿ 6 ಸಾವಿರ ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 15:46 IST
Last Updated 16 ಸೆಪ್ಟೆಂಬರ್ 2024, 15:46 IST
ಹುಣಸೂರು ನಗರದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಿಚ್ಚೇದನ ಜೀವನಾಂಶಕ್ಕೆ ಮುಂದಾಗಿದ್ದ ದಂಪತಿಗೆ ಮನವರಿಕೆ ಮಾಡಿ ದಾಂಪತ್ಯ ಜೀವನ ಮುಂದುವರೆಸಲು ನ್ಯಾಯಾಧೀಶರು ನೆರವಾದರು.
ಹುಣಸೂರು ನಗರದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಿಚ್ಚೇದನ ಜೀವನಾಂಶಕ್ಕೆ ಮುಂದಾಗಿದ್ದ ದಂಪತಿಗೆ ಮನವರಿಕೆ ಮಾಡಿ ದಾಂಪತ್ಯ ಜೀವನ ಮುಂದುವರೆಸಲು ನ್ಯಾಯಾಧೀಶರು ನೆರವಾದರು.   

ಹುಣಸೂರು: ನಗರದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ 6,451 ಪ್ರಕರಣದಲ್ಲಿ ಒಟ್ಟು ₹ 4.41 ಕೋಟಿ ಮೊತ್ತ ಇತ್ಯರ್ಥಗೊಳಿಸಲಾಗಿದೆ. 50 ಚೆಕ್‌ಬೌನ್ಸ್‌ ಪ್ರಕರಣ ಬಗೆಹರಿಸಿ ₹1.30 ಕೋಟಿ ಕೊಡಿಸಲಾಗಿದೆ. 3 ಲಕ್ಷ ವಾಜ್ಯ ಪೂರ್ವ, ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ.

ನಗರದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಒಟ್ಟು 6451 ಪ್ರಕರಣಗಳಲ್ಲಿ 50 ಚೆಕ್ ಬೌನ್ಸ್ ನಿಂದ ₹ 1.30 ಕೋಟಿ, ಹಣ ವಸೂಲಾತಿ ಪ್ರಕರಣದಿಂದ ₹ 3 ಲಕ್ಷ ವಾಜ್ಯ ಪೂರ್ವ, ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ.

ಕಳೆದ ಎರಡು ವರ್ಷಗಳಿಂದ ದೂರವಾಗಿ ಜೀವನಾಂಶಕ್ಕೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದ ದಂಪತಿಯನ್ನು ಲೋಕ ಅದಾಲತ್ ನಲ್ಲಿ ನ್ಯಾಯಾಧೀಶರು ಒಂದಾಗಿಸುವಲ್ಲಿ ಯಶಸ್ವಿಯಾದರು. ತಾಲ್ಲೂಕಿನ ಹುಲ್ಲೇನಹಳ್ಳಿ ‍ಪ್ರತಾಪ್ ಹಾಗೂ ಮೈಸೂರು ತಾಲ್ಲೂಕಿನ ಯಾಚೇಗೌಡನಹಳ್ಳಿಯ ಸಂಗೀತಾ ದಂಪತಿಗಳಿಗೆ ತಿಳಿ ಹೇಳಿ ಜೀವನ ನಡೆಸಲು ಪ್ರೇರಣೆ ನೀಡಿ ಹೂವಿನ ಹಾರ ಹಾಕಿಸುವ ಮೂಲಕ ಮರು ವಿವಾಹ ಬಂಧನ ಮಾಡಿಸಿದರು.

ADVERTISEMENT

ಲೋಕ ಅದಾಲತ್ ಕಾರ್ಯಕ್ರಮದಲ್ಲಿ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮತ್ತು ತಾ.ಕಾನೂನು ಸೇವಾ ಸಮಿತಿ ಅಧ್ಯಕ್ಷ ಟಿ.ಗೋವಿಂದಯ್ಯ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಜೈಬುನ್ನಿಸ್ಸಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಪೂಜಾ ಬೆಳಕೇರೆ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.