ADVERTISEMENT

ಹುಣಸೂರು ಉಪಚುನಾವಣೆ: ‘ಹಳ್ಳಿಹಕ್ಕಿ’ ವಿಶ್ವನಾಥ್‌ಗೆ ಮುಖಭಂಗ, ಕಾಂಗ್ರೆಸ್ ಜಯಭೇರಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 13:04 IST
Last Updated 9 ಡಿಸೆಂಬರ್ 2019, 13:04 IST
   

ಹುಣಸೂರು: ತೀವ್ರ ಕುತೂಹಲ ಕೆರಳಿಸಿದ್ದ ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್ 39,727 ಮತಗಳ ಗೆಲುವು ಪಡೆದಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಕಾರಣಕರ್ತರಲ್ಲಿ ಒಬ್ಬರಾಗಿದ್ದ ಎಚ್.ವಿಶ್ವನಾಥ್ ಮುಖಭಂಗ ಅನುಭವಿಸಿದರು.

ಮಂಜುನಾಥ್ 92,725 ಮತಗಳನ್ನು ಪಡೆದುಕೊಂಡರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ವಿಶ್ವನಾಥ್ 52,998ಮತಗಳನ್ನು ಗಳಿಸಿದರು. ಜೆಡಿಎಸ್ ನ ದೇವರಹಳ್ಳಿ ಸೋಮಶೇಖರ್ 32,895 ಮತಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡರು.

ADVERTISEMENT

ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡ ಮಂಜುನಾಥ್ ಅವರು ಭಾರಿ ಅಂತರದಿಂದ ಗೆಲುವಿನ ನಗು ಬೀರಿದರು. ಈ ಹಿಂದೆ ಇಲ್ಲಿ ಎರಡು ಸಲ ಶಾಸಕರಾಗಿದ್ದ ಮಂಜುನಾಥ್ ಅವರು ಕಳೆದ ಸಲ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ವಿಶ್ವನಾಥ್ ಎದುರು ಸೋತಿದ್ದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತವರು ಜಿಲ್ಲೆಯ ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.