ADVERTISEMENT

ಸುಗಮ ಕಲಾಪಕ್ಕೆ ಸಹಕರಿಸುವಂತೆ ಕಾಂಗ್ರೆಸ್ಸಿಗರಿಗೆ ಮನವಿ ಮಾಡುತ್ತೇನೆ: ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 12:26 IST
Last Updated 28 ಫೆಬ್ರುವರಿ 2020, 12:26 IST
ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ
ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ   

ಮೈಸೂರು: ಯತ್ನಾಳ್ ಹೇಳಿಕೆಯನ್ನಿಟ್ಟುಕೊಂಡು ಕಾಂಗ್ರೆಸ್ ಸದನಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ. ಸದನದಲ್ಲಿ ಚರ್ಚೆಯಾಗಬೇಕಾದ ವಿಚಾರಗಳೇ ಬೇಕಾದಷ್ಟಿವೆ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಯತ್ನಾಳ್ ಹೇಳಿಕೆ ಬಗ್ಗೆ ಮಾಹಿತಿ ಪಡೆಯುತ್ತೇನೆ. ಗೊಂದಲದ ಹೇಳಿಕೆ ಕೊಡುವುದು ಯಾರಿಗೂ ತರವಲ್ಲ. ಪ್ರತಿಭಟನೆ ಬಿಟ್ಟು ಸದನಕ್ಕೆ ಸಹಕರಿಸುವಂತೆ ಕಾಂಗ್ರೆಸಿಗರಿಗೆ ಮನವಿ ಮಾಡುತ್ತೇನೆ ಎಂದರು.

ಸಚಿವ ನಾರಾಯಣಗೌಡ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ್ದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವ ಹಿನ್ನೆಲೆಯಿಂದ ಹೇಳಿದ್ದಾರೋ ಗೊತ್ತಿಲ್ಲ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಕ್ಕಾಗುತ್ತಾ? ಅವರಿಗೆ ಸಲಹೆ ಕೊಡುತ್ತೇವೆ ಎಂದು ಹೇಳಿದರು.

ADVERTISEMENT

ಕೇಂದ್ರ ಸರ್ಕಾರ ಮಹದಾಯಿ ಕುರಿತಂತೆ ಗೆಜೆಟ್ ಅಧಿಸೂಚನೆ ಹೊರಡಿಸಿರುವುದು ರಾಜ್ಯಕ್ಕೆ ತಕ್ಷಣಕ್ಕೆ ಅನುಕೂಲಕರವಾಗಿದೆ. ಆದರೆ ತೃಪ್ತಿ ಇಲ್ಲ. ಕುಡಿಯುವ ನೀರಿಗೆ ಅನುಕೂಲ ಆಗಬಹುದು. ಆದರೆ ಶಾಶ್ವತ ಆದೇಶ ರಾಜ್ಯದ ಪರ ಬರಬೇಕು. ಅದಕ್ಕಾಗಿ ಅಂತಿಮ ತೀರ್ಪು ಬರಲಿ. ಬಜೆಟ್ ಕುರಿತಂತೆ ಚರ್ಚೆ ನಡೆಯಬೇಕು ಎಂಬುದೇ ನಮ್ಮ ಆಶಯ. ಯಾವುದೇ ಹೇಳಿಕೆಗಳ ಚರ್ಚೆ ಬೇಡ. ಹಣಕಾಸು ಅಭಿವೃದ್ಧಿ ಬಗ್ಗೆ ಶಾಸನ ಸಭೆಯಲ್ಲಿ ಚರ್ಚೆ ನಡೆಯಲಿ. ಈ ಸಂಬಂಧ ವಿರೋಧ ಪಕ್ಷಗಳೊಟ್ಟಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.