ADVERTISEMENT

ಮೈಸೂರು ವಿವಿಯ ಘನತೆ ಹೆಚ್ಚಿಸಿ: ಪ್ರೊ.ಎಸ್. ಶಿವರಾಜಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 16:20 IST
Last Updated 2 ಮಾರ್ಚ್ 2024, 16:20 IST
<div class="paragraphs"><p>ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರಾದ ನಟರಾಜ್‌ ಶಿವಣ್ಣ, ಜೆ.ಶಿಲ್ಪಾ, ಮಹದೇಶ, ಟಿ.ಆರ್. ಚಂದ್ರಶೇಖರ್, ಬಸವರಾಜ ಸಿ. ಜಟ್ಟಿಹುಂಡಿ, ಕೆ. ಗೋಕುಲ್‌ ಗೋವರ್ಧನ್, ಪ್ರೊ.ಟಿ.ಆರ್. ಮಾರುತಿ, ಸಿ. ನಾಗರಾಜ್‌ ಅವರನ್ನು ವಿಶ್ವಮಾನವ ನೌಕರರ ವೇದಿಕೆಯಿಂದ ಸನ್ಮಾನಿಸಲಾಯಿತು</p></div>

ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರಾದ ನಟರಾಜ್‌ ಶಿವಣ್ಣ, ಜೆ.ಶಿಲ್ಪಾ, ಮಹದೇಶ, ಟಿ.ಆರ್. ಚಂದ್ರಶೇಖರ್, ಬಸವರಾಜ ಸಿ. ಜಟ್ಟಿಹುಂಡಿ, ಕೆ. ಗೋಕುಲ್‌ ಗೋವರ್ಧನ್, ಪ್ರೊ.ಟಿ.ಆರ್. ಮಾರುತಿ, ಸಿ. ನಾಗರಾಜ್‌ ಅವರನ್ನು ವಿಶ್ವಮಾನವ ನೌಕರರ ವೇದಿಕೆಯಿಂದ ಸನ್ಮಾನಿಸಲಾಯಿತು

   

ಮೈಸೂರು: ‘ಸಿಂಡಿಕೇಟ್ ಸದಸ್ಯರು ಮೈಸೂರು ವಿಶ್ವವಿದ್ಯಾನಿಲಯದ ಗೌರವ–ಘನತೆ ಹೆಚ್ಚುವಂತೆ ಕೆಲಸ ಮಾಡಬೇಕು’ ಎಂದು ಗಾಂಧಿ ಭವನದ ನಿವೃತ್ತ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ ಸಲಹೆ ನೀಡಿದರು.

ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆಯು ವಿವಿ ಸಂಜೆ ಕಾಲೇಜು ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಿಂಡಿಕೇಟ್‌ನ ನೂತನ ಸದಸ್ಯರನ್ನು ಅಭಿನಂದಿಸಿ ಅವರು ಮಾತನಾಡಿದರು.

ADVERTISEMENT

‘ವಿಶ್ವವಿದ್ಯಾಲಯದ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಬೇಕು’ ಎಂದರು.

ಸಿಂಡಿಕೇಟ್ ಸದಸ್ಯರಾದ ಟಿ.ಆರ್. ಚಂದ್ರಶೇಖರ್, ಕೆ. ಗೋಕುಲ್‌ ಗೋವರ್ಧನ್, ಪ್ರೊ.ಟಿ.ಆರ್. ಮಾರುತಿ, ಮಹದೇಶ್, ಸಿ. ನಾಗರಾಜು, ಜೆ. ಶಿಲ್ಪಾ, ಬಸವರಾಜು ಸಿ. ಜಟ್ಟಿಹುಂಡಿ, ನಟರಾಜ್‌ ಶಿವಣ್ಣ ಅವರನ್ನು ಸನ್ಮಾನಿಸಲಾಯಿತು. ಮತ್ತೊಬ್ಬ ಸದಸ್ಯ ಪ್ರೊ.ಶಬ್ಬೀರ್‌ ಮಹಮದ್‌ ಮುಸ್ತಫಾ ಗೈರು ಹಾಜರಾಗಿದ್ದರು.

‘ಎಲ್ಲಾ ಅರ್ಹತೆ ಇರುವ ಮೈಸೂರು ವಿಶ್ವವಿದ್ಯಾಲಯಕ್ಕೆ ಕೇಂದ್ರೀಯ ವಿವಿ ಸ್ಥಾನಮಾನ ನೀಡಬೇಕು’ ಎಂದು ಚಂದ್ರಶೇಖರ್‌ ಒತ್ತಾಯಿಸಿದರು.

‘ವಿವಿಯಲ್ಲಿ ಕಾಯಂ ಅಧ್ಯಾಪಕರ ನೇಮಕಾತಿ ಕಡೆಗೆ ಗಮನಹರಿಸುವೆವು’ ಎಂದು ನಟರಾಜ್‌ ಶಿವಣ್ಣ ತಿಳಿಸಿದರು.

ಸಮಾಜ ಕಾರ್ಯವಿಭಾಗದ ಪ್ರಾಧ್ಯಾಪಕಿ ಎಚ್.ಪಿ. ಜ್ಯೋತಿ ಮಾತನಾಡಿದರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ‘ಗ್ರೀನ್‌ ಡಾಟ್‌ ಟ್ರಸ್ಟ್‌’ ಕಾರ್ಯದರ್ಶಿ ಸಿ.ಕೆ. ಕಾಂತರಾಜ್, ವಿವಿ ಸಂಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ, ಎನ್ಎಸ್ಎಸ್‌ ಅಧಿಕಾರಿ ದಿವಾಕರ್‌ ಚಾಂಡಿ, ಎನ್‌ಸಿಸಿ ಅಧಿಕಾರಿ ಗಿರೀಶ್‌ ಕುಮಾರ್, ವೇದಿಕೆಯ ಅಧ್ಯಕ್ಷ ಆರ್. ವಾಸುದೇವ, ಉಪಾಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ಎಸ್. ವಿನೋದ್, ಖಜಾಂಚಿ ಕೆ. ಗಣೇಶ್, ನಿರ್ದೇಶಕರಾದ ಯೋಗೇಶ್, ಎಚ್. ನವೀನಕುಮಾರ್, ಚಿದಾನಂದ, ಮಂಜುನಾಥ್, ಮಂಜುನಾಥ್‌ ಕೆ. ಗೌಡ, ಆರ್‌ .ಹರೀಶ್, ಎಸ್. ರಿಷಿರಾಜ್, ಸುರೇಶ್, ಪ್ರದೀಪ್, ರೋಹಿತ್, ಶ್ರೇಯಸ್, ರವಿ, ಯೋಗೇಶ್, ಜಗದೀಶ್‌ ‍ಪಾಲ್ಗೊಂಡಿದ್ದರು.

ನಿವೃತ್ತ ಐಎಎಸ್‌ ಅಧಿಕಾರಿ ಕೆ. ಶಿವರಾಮ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.