ADVERTISEMENT

ಮೈಸೂರು: ಒರಿಗಾಮಿ ಚೆಂಡುಗಳಿಂದ ರಾಷ್ಟ್ರಧ್ವಜ ತಯಾರಿಕೆ

ದಾಖಲೆ ಬರೆದ ಪೂರ್ಣ ಚೇತನ ಶಾಲೆಯ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 6:33 IST
Last Updated 14 ಆಗಸ್ಟ್ 2024, 6:33 IST
ಪುನರ್ ಬಳಕೆಯ ವಸ್ತುಗಳೊಂದಿಗೆ ತಾವು ವಿನ್ಯಾಸಗೊಳಿಸಿದ ರಾಷ್ಟ್ರಧ್ವಜ ಮಾದರಿಯೊಂದಿಗೆ ವಿದ್ಯಾರ್ಥಿಗಳು
ಪುನರ್ ಬಳಕೆಯ ವಸ್ತುಗಳೊಂದಿಗೆ ತಾವು ವಿನ್ಯಾಸಗೊಳಿಸಿದ ರಾಷ್ಟ್ರಧ್ವಜ ಮಾದರಿಯೊಂದಿಗೆ ವಿದ್ಯಾರ್ಥಿಗಳು   

ಮೈಸೂರು: ನಗರದ ಪೂರ್ಣ ಚೇತನ ಶಾಲೆಯ ಸುಮಾರು 530 ವಿದ್ಯಾರ್ಥಿಗಳು ಮಂಗಳವಾರ ಕಣ್ಣಿಗೆ ಬಟ್ಟೆ ಕಟ್ಟಿ ಐದು ನಿಮಿಷಗಳ ಕವಾಯತು ನಡೆಸಿದರು. ಪುನರ್ ಬಳಕೆಯ ಒರಿಗಾಮಿ ಚೆಂಡುಗಳ ಮೂಲಕ 12x8 ಮೀಟರ್ ಅಳತೆಯ ರಾಷ್ಟ್ರಧ್ವಜವನ್ನು 4 ಗಂಟೆ 5 ನಿಮಿಷದಲ್ಲಿ ತಯಾರಿಸುವ ಮೂಲಕ ದಾಖಲೆ ಮೆರೆದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವಚ್ಛ ಮೈಸೂರು-ಸ್ವಚ್ಛ ಭಾರತ ನಿರ್ಮಾಣದ ಸಂದೇಶವನ್ನು ಸಾರಿದರು. ಎಲೈಟ್ ವರ್ಲ್ಡ್ ರೆಕಾರ್ಡ್ಸ್‌ ಸಂಸ್ಥೆಯ ತೀರ್ಪುಗಾರ್ತಿ ಭಾವನಾ ನವನೀತ್, ಏಷ್ಯನ್ ರೆಕಾರ್ಡ್ಸ್ ಅಕಾಡೆಮಿ ಮತ್ತು ಇಂಡಿಯಾ ರೆಕಾರ್ಡ್ಸ್ ಅಕಾಡೆಮಿಯ ತೀರ್ಪುಗಾರ್ತಿ ಪಿ.ಜಿ. ಪ್ರತಿಭಾ ಈ ದಾಖಲೆಗಳನ್ನು ಪ್ರಮಾಣೀಕರಿಸಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ‘ಪ್ರಧಾನಿ ಮೋದಿ ಅವರ ವಿಕಸಿತ ಭಾರತದ ಕನಸನ್ನು ನನಸಾಗಿಸುವ ಜವಾಬ್ದಾರಿ ವಿದ್ಯಾರ್ಥಿ– ಯುವಜನರ ಮೇಲಿದೆ. ಈ ದೇಶಕ್ಕೆ ನಿಮಗೆ ಸಾಧ್ಯವಾದಷ್ಟು ಸೇವೆ ಸಲ್ಲಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ದರ್ಶನ್ ರಾಜ್, ಶಾಲೆಯ ಅಧ್ಯಕ್ಷೆ ಎಂ.ಆರ್. ರಜನಿ, ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ, ಡೀನ್ ಲಾವಣ್ಯ, ಪ್ರಾಂಶುಪಾಲೆ ಬಿ. ಪ್ರಿಯಾಂಕಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.